For Quick Alerts
ALLOW NOTIFICATIONS  
For Daily Alerts
 

IPL 2023: ಭವಿಷ್ಯದ ಶ್ರೇಷ್ಠ ಆಟಗಾರರಂತೆ ಅಬ್ಬರಿಸಿ, ಈಗ ತಂಡದಿಂದಲೇ ಹೊರಬಿದ್ದ 4 ಯುವ ಆಟಗಾರರು!

ಈ ಬಾರಿಯ ಐಪಿಎಲ್ ಟೂರ್ನಿ ಸಾಕಷ್ಟು ರೋಮಾಂಚನಕಾರಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಮಾರ್ಚ್ 31ರಂದು ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಸೆಣೆಸಾಟದ ಮೂಲಕ ಆರಂಭವಾದ ಈ ಟೂರ್ನಿ ರೋಚಕ ಆರಂಭವನ್ನು ಪಡೆಯಿತು. ಈಗಾಗಲೇ ಟೂರ್ನಿ ಮೊದಲಾರ್ಧವನ್ನು ತಲುಪಿದ್ದು ಈ ಹಂತದಲ್ಲಿ ವೈಯಕ್ತಿಕವಾಗಿ ಅನೇಕ ಅದ್ಭುತ ಪ್ರದರ್ಶನಗಳು ಹೊರಬಂದಿದೆ.

ಇನ್ನು ಈ ಬಾರಿ ಅನುಭವಿ ಆಟಗಾರರಾದ ಪಿಯೂಷ್ ಚಾವ್ಲಾ, ಅಜಿಂಕ್ಯಾ ರಹಾನೆ, ಮೋಹಿತ್ ಶರ್ಮಾ ಹಾಗೂ ಅಮಿತ್ ಮಿಶ್ರಾ ಅವರಂತಾ ಆಟಗಾರರಿಂದ ಅತ್ಯದ್ಭುತ ಪ್ರದರ್ಶನಗಳು ವ್ಯಕ್ತವಾಗಿದೆ. ಆದರೆ ಇದೇ ಸಂದರ್ಭದಲ್ಲಿ ಈ ಹಿಂದೆ ಅದ್ಭುತ ಪ್ರದರ್ಶನ ನೀಡಿ ಅಬ್ಬರಿಸಿ, ಭವಿಷ್ಯದ ಸ್ಟಾರ್ ಆಟಗಾರರು ಎನಿಸಿಕೊಂಡಿದ್ದ ಕೆಲ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದಾರೆ. ಮಾತ್ರವಲ್ಲ ಆಡುವ ಬಳಗದಿಂದಲೂ ಹೊರಬಿದ್ದಿದ್ದಾರೆ.

ipl 2023: These 4 promising Indian cricketers are dropped from playing XI after failure in ongoing season

ಹೀಗೆ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿ ಆಡುವ ಬಳಗದಿಂದ ಹೊರಬಿದ್ದಿರುವ ಮೂವರು ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.

ಆಡುವ ಬಳಗದಿಂದ ಹೊರಬಿದ್ದ ಪೃಥ್ವಿ ಶಾ

ಮುಂಬೈ ಮೂಲದ ಯುವ ಆಟಗಾರ ಪೃಥ್ವಿ ಶಾ ಎಂಥಾ ಪ್ರತಿಭಾನ್ವಿತ ಆಟಗಾರ ಎಂಬದು ಎಲ್ಲರಿಗೂ ತಿಳಿದೇ ಇದೆ. ಈವರೆಗಿನ ಐಪಿಎಲ್ ಟೂರ್ನಿ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿಕೊಂಡು ಬಂದಿರುವ ಆಟಗಾರ. ಅಲ್ಲದೆ ಎಲ್ಲಾ ಮಾದರಿಯೂ ಸೂಕ್ತವೆನಿಸುವ ಆಟಗಾರ ಎಂಬ ಹೆಗ್ಗಳಿಕೆಯೂ ಶಾ ಮೇಲಿದೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಪೃಥ್ವಿ ಶಾ ಬ್ಯಾಟರ್‌ನಿಂದ ಅತ್ಯಂತ ಕಳಪೆ ಪ್ರದರ್ಶನ ಬಂದಿದ್ದಾರೆ. ಸತತ ಐದು ಒಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಅನುಭವಿಸಿ ಹೀನಾಯ ಸ್ಥಿತಿಯಲ್ಲಿತ್ತು. ಇದನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಿಂದ ಪೃಥ್ವಿ ಶಾ ಅವರನ್ನು ಕೈಬಿಡಲಾಗಿದೆ.

ಯಶ್ ದಯಾಳ್‌ಗೂ ಇಲ್ಲ ಸ್ಥಾನ

2022ರ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು ಯಶ್ ದಯಾಳ್. ಕಳೆದ ಬಾರಿಯ ಪ್ರದರ್ಶನದ ಕಾರಣದಿಂದಾಗಿ ಭಾರತೀಯ ತಂಡದಲ್ಲಿಯೂ ದಯಾಳ್ ಸ್ಥಾನ ಪಡೆದುಕೊಂಡರು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ದಯಾಳ್ ಅತ್ಯಂತ ದುಬಾರಿಯೆನಿಸಿದ್ದಾರೆ. ಕೆಕೆಆರ್ ತಂಡದ ದಾಂಡಿಗ ರಿಂಕು ಸಿಂಗ್ ಒಂದೂ ಓವರ್‌ನ ಐದು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ಬಳಿಕ ಆಡುವ ಬಳಗದಿಂದ ಯಶ್ ದಯಾಳ್ ಹೊರಬಿದ್ದಿದ್ದಾರೆ.

ಆರ್‌ಆರ್ ದಾಂಡಿಗ ರಿಯಾನ್ ಪರಾಗ್

ಆಲ್‌ರೌಂಡರ್ ರಿಯಾನ್ ಪರಾಗ್ ಅವರ ಮೇಲೆ ರಾಜಸ್ತಾನ್ ರಾಯಲ್ಸ್ ತಂಡ ಸಾಕಷ್ಟು ಭರವಸೆ ಹೊಂದಿದ್ದು ಸಾಕಷ್ಟು ಬೆಂಬಲವನ್ನು ನೀಡಿತ್ತು. ತಂಡದಲ್ಲಿ ಯಾವ ವಿಭಾಗದಲ್ಲಿಯೂ ಪ್ರದರ್ಶನ ನೀಡಿದಿದ್ದರೂ ಪರಾಗ್ ಆಡುವ ಬಳಗದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಿದ್ದರು. 50ಕ್ಕೂ ಅಧಿಕ ಪಂದ್ಯಗಳಲ್ಲಿ ಆಡಿರುವ ಪರಾಗ್ ಭಾರತದ ಉತ್ತಮ ಫಿನಿಷರ್ ಆಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಬಿಂಬಿಸಲಾತ್ತು. ಆದರೆ ಈ ಕಳಪೆ ಪ್ರದರ್ಶನ ನೀಡಿದ ಕಾರಣ ಆರ್‌ಆರ್ ತಂಡ ರಿಯಾನ್ ಪರಾಗ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟಿದೆ.

ಡಿಸಿ ದಾಂಡಿಗ ಸರ್ಫರಾಜ್ ಖಾನ್

ಸರ್ಫರಾಜ್ ಖಾನ್ ದೇಶೀಯ ಕ್ರಿಕೆಟ್‌ನಲ್ಲಿ ನೀಡಿದ ಅಮೋಘ ಪ್ರದರ್ಶನದ ಕಾರಣದಿಂದಾಗಿ ಸರ್ಫರಾಜ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದರು ಅಭಿಮಾನಿಗಳು. ಆದರೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಲು ವಿಫಲವಾದ ಸರ್ಫರಾಜ್ ಖಾನ್ ಎರಡು ಪಂದ್ಯಗಳಲ್ಲಿ ಆಡಿದ ಬಳಿಕ ಅವಕಾಶ ಕಳೆದುಕೊಂಡಿದ್ದಾರೆ.

Story first published: Tuesday, April 25, 2023, 15:39 [IST]
Other articles published on Apr 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+