For Quick Alerts
ALLOW NOTIFICATIONS  
For Daily Alerts
 

ಈ 5 ಆಟಗಾರರು ಮುಂದಿನ ಆವೃತ್ತಿಗೂ ಮುನ್ನ RCB ತಂಡದಿಂದ ಗೇಟ್‌ಪಾಸ್ ಪಡೆಯುವುದು ಬಹುತೇಕ ಖಚಿತ!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈ ವರ್ಷ ಆರ್‌ಸಿಬಿ ತಂಡ ಪ್ಲೇಆಫ್ ಹಂತಕ್ಕೆ ತನ್ನ ಆಟವನ್ನು ಅಂತ್ಯಗೊಳಿಸಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ಸೋಲು ಅನುಭವಿಸುವ ಮೂಲಕ ಪ್ಲೇಆಫ್ ಅವಕಾಶವನ್ನು ಕಳೆದುಕೊಂಡಿತು. ಇದೀಗ ಆರ್‌ಸಿಬಿ ತಂಡ ಮುಂದಿನ ಆವೃತ್ತಿಯಲ್ಲಿ ಅದ್ಭುತಬಾಗಿ ಕಮ್‌ಬ್ಯಾಕ್ ಮಾಡುವತ್ತ ಚಿತ್ತ ನೆಟ್ಟಿದೆ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದಲ್ಲಿ ಎಷ್ಟು ಸಕಾರಾತ್ಮಕ ಅಂಶಗಳಿತ್ತೋ ಅಷ್ಟೇ ಋಣಾತ್ಮಕ ಸಂಗತಿಗಳು ಕೂಡ ಇದ್ದವು. ಅದರಲ್ಲೂ ಪ್ರಮುಖವಾಗಿ ಟೂರ್ನಿಯುದ್ದಕ್ಕೂ ಆರ್‌ಸಿಬಿ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಕೇವಲ ನಾಲ್ವರು ಆಟಗಾರರು ಮಾತ್ರ. ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಮಾತ್ರವೇ ಆರ್‌ಸಿಬಿ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡ ಈ ಮಟ್ಟದ ಹೋರಾಟ ನೀಡಲು ಕಾರಣವಾದರು. ಉಳಿದ ಆಟಗಾರರು ತಂಡದಲ್ಲಿ ಯಾವ ಹಂತದಲ್ಲೂ ಭರವಸೆಯ ಪ್ರದರ್ಶನ ನೀಡಲೇ ಇಲ್ಲ.

RCB in IPL 2023

ಹಾಗಾಗಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಉತ್ತಮವಾಗಿ ಕಮ್‌ಬ್ಯಾಕ್ ಮಾಡಬೇಕಾದರೆ ತಂಡದಲ್ಲಿ ಬದಲಾವಣೆ ಮಾಡಕೊಳ್ಳುವುದು ಅನಿವಾರ್ಯ. ಹೀಗಾಗಿ ಯಾವೆಲ್ಲಾ ಆಟಗಾರರಿಗೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಕೊಕ್ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ನೀಡಿರುವ ಪ್ರದರ್ಶನದ ಆಧಾರದಲ್ಲಿ ಆರ್‌ಸಿಬಿ ತಂಡ ಈ ನಾಲ್ವರು ಆಟಗಾರರನ್ನು ಮುಂದಿನ ಆವೃತ್ತಿಗೆ ಉಳಿಸಿಕೊಳ್ಳುವ ಸಾಧ್ಯತೆ ಬಹುತೇಕ ಇಲ್ಲ. ಆ ಐವರು ಆಟಗಾರರು ಯಾರು? ಮುಂದೆ ಓದಿ..

ದಿನೇಶ್ ಕಾರ್ತಿಕ್

2022ರ ಐಪಿಎಲ್ ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಹೀರೋ ಆಗಿ ಮಿಂಚಿದ್ದರು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಅವರ ಪ್ರದರ್ಶನ ಅತ್ಯಂತ ಕಳಪೆ. ಈ ಮೂಲಕ ಅಭಿಮಾನಿಗಳಿಗೆ ಡಿಕೆ ಸಂಪೂರ್ಣವಾಗಿ ನಿರಾಸೆ ಮೂಡಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ದಿನೇಶ್ ಕಾರ್ತಿಕ್ 13 ಪಂದ್ಯಗಳಲ್ಲಿ ಕೇವಲ 140 ರನ್‌ಗಳನ್ನು ಗಳಿಸಿದ್ದಾರೆ. ಮುಂದಿನ ಆವೃತ್ತಿ ವೇಳೆಗೆ ಡಿಕೆ 39ರ ಸನಿಹದಲ್ಲಿರಲಿದ್ದಾರೆ. ಹೀಗಾಗಿ ಆರ್‌ಸಿಬಿ ತಂಡ ದಿನೇಶ್ ಕಾರ್ತಿಕ್ ಅವರನ್ನು ತಂಡದಿಂದ ಕೈಬಿಡುವುದು ಬಹುತೇಕ ಖಚಿತ.

ಯುವ ಆಟಗಾರ ಮಹಿಪಾಲ್ ಲೋಮ್ರೋರ್

ಯುವ ಆಟಗಾರ ಮಹಿಪಾಲ್ ರೋಮ್ರೋರ್ ಮೇಲೆ ಆರ್‌ಸಿಬಿ ಅಭಿಮಾನಿಗಳು ಈ ಬಾರಿ ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ರಜತ್ ಪಾಟಿದಾರ್ ಅಲಭ್ಯತೆಯಲ್ಲಿ ಈ ಬಾರಿ ಯುವ ಆಟಗಾರನಿಗೆ ದೊರೆಯುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಮಹಿಪಾಲ್ ಈ ಆವೃತ್ತಿಯಲ್ಲಿ ನೀಡಿದ್ದು ಅತ್ಯಂತ ಕಳಪೆ ಪ್ರದರ್ಶನ. 10 ಇನ್ನಿಂಗ್ಸ್‌ಗಳಲ್ಲಿ ಅವಕಾಶ ದೊರೆತಿದ್ದರೂ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಲೋಮ್ರೋರ್‌ಗೆ ಸಾಧ್ಯವಾಗಲೇ ಇಲ್ಲ. ಕೇವಲ ಒಂದು ಅರ್ಧ ಶತಕ ಸಿಡಿಸಿದ ಅವರು 15.88ರ ಸರಾಸರಿಯಲ್ಲಿ 135 ರನ್‌ಗಳ ಕೊಡುಗೆ ನೀಡಿದ್ದಾರೆ.

ಹರ್ಷಲ್ ಪಟೇಲ್

ಹರ್ಷಲ್ ಪಟೇಲ್ 2021ರ ಆವೃತ್ತಿಯಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಟೋಪಿಯನ್ನು ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಪರ್ಪಲ್ ಪಟೇಲ್ ಎಂದೇ ಹರ್ಷಲ್ ಖ್ಯಾತರಾಗಿದ್ದರು. ಕಳೆದ ಆವೃತ್ತಿಯಲ್ಲಿಯೂ ಆರ್‌ಸಿಬಿ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಈ ಬಾರಿ ಹರ್ಷಲ್ ಪಟೇಲ್ ಪ್ರದರ್ಶನ ಆರ್‌ಸಿಬಿ ಪಾಲಿಗೆ ಆಘಾತಕಾರಿಯಾಗಿತ್ತು. ಆಡಿದ 13 ಪಂದ್ಯಗಳಲ್ಲಿ ಹರ್ಷಲ್ ಪಟೇಲ್ 14 ವಿಕೆಟ್ ಸಂಪಾದಿಸಿದರಾದರೂ ಅವರು ರನ್‌ ಬಿಟ್ಟುಕೊಡುವುದರಲ್ಲಿ ದುಬಾರಿಯೆನಿಸಿದರು. 10.75 ಕೋಟಿ ಮೊತ್ತಕ್ಕೆ ಹರ್ಷಲ್ ಪಟೇಲ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ್ದು ಈ ಪ್ರದರ್ಶನ ತಂಡದ ಸಮತೋಲನವನ್ನು ಹಾಳು ಮಾಡುವಂತಿದೆ. ಹೀಗಾಗಿ ಹರ್ಷಲ್ ಪಟೇಲ್‌ಗೂ ಮುಂದಿನ ಆವೃತ್ತಿಯಲ್ಲಿ ಅವಕಾಶ ಕಷ್ಟ.

ಆಲ್‌ರೌಂಡರ್ ಶಹ್ಬಾಜ್ ಅಹ್ಮದ್

ಈ ಬಾರಿಯ ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಮತ್ತೋರ್ವ ಆಟಗಾರ ಎಂದರೆ ಅದು ಶಹ್ಮಬಾಜ್ ಅಹ್ಮದ್. ಆಡಿರುವ 10 ಪಂದ್ಯಗಳಲ್ಲಿ ಶಹ್ಬಾಜ್ ಅಹ್ಮದ್ ಕೇವಲ 42 ರನ್‌ಗಳನ್ನು ಗಳಿಸಿದ್ದಾರೆ. ಹೀಗಾಗಿ ಆರ್‌ಸಿಬಿ ತಂಡ ಈ ಆಟಗಾರನನ್ನು ಮುಂದಿನ ಆವೃತ್ತಿಗೆ ಉಳಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆಯಿದೆ.

ಕೇದಾರ್ ಜಾಧವ್

ಇನ್ನು ಈ ಬಾರಿಯ ಐಪಿಎಲ್‌ ಟೂರ್ನಿಯ ಮಧ್ಯ ಭಾಗದಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡ ಆಟಗಾರ ಕೇದಾರ್ ಜಾಧವ್. ಕಳೆದ ಮಿನಿ ಹರಾಜಿನಲ್ಲಿ ಯಾವ ತಂಡ ಕೂಡ ಖರೀದಿಸದ ಕಾರಣ ಮರಾಠಿ ವೀಕ್ಷಕ ವಿವರಣೆ ನೀಡುತ್ತಿದ್ದ ಕೇದಾರ್ ಜಾಧವ್‌ಗೆ ಆರ್‌ಸಿಬಿ ತಂಡದಿಂದ ಅಚ್ಚರಿಯ ಕರೆ ಬಂದಿತ್ತು. ಆರ್‌ಸಿಬಿ ಆಟಗಾರ ಡೇವಿಡ್ ವಿಲ್ಲಿ ಗಾಯಗೊಂಡ ಕಾರಣ ತಂಡದಿಂದ ಹೊರಬಿದ್ದರು. ಹೀಗಾಗಿ ಆರ್‌ಸಿಬಿ ತಂಡ ಆಲ್‌ರೌಂಡರ್ ಕೇದಾರ್ ಜಾದವ್ ಅವರನ್ನು ಬದಲಿ ಆಟಗಾರನನ್ನಾಗಿ ಸೇರ್ಪಡೆಗೊಳಿಸಿತ್ತು. ಆದರೆ ಕೆಲ ಪಂದ್ಯಗಳಲ್ಲಿ ಅವಕಾಶ ದೊರೆತರೂ ಜಾಧವ್ ತಂಡಕ್ಕೆ ಉಪಯೋಗವಿಲ್ಲದಂತಾದರು. ಹೀಗಾಗಿ ಜಾಧವ್‌ಗೂ ಮುಂದಿನ ಆವೃತ್ತಿಯಲ್ಲಿ ಅವಕಾಶ ದೊರೆಯುವುದು ಕಷ್ಟ.

Story first published: Tuesday, May 23, 2023, 14:42 [IST]
Other articles published on May 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+