For Quick Alerts
ALLOW NOTIFICATIONS  
For Daily Alerts
 

IPL 2023: ಸ್ಯಾಮ್ ಕರನ್‌ ಖರೀದಿಸಲು ಈ ಮೂರು ತಂಡಗಳ ನಡುವೆ ಭಾರಿ ಪೈಪೋಟಿ ಸಾಧ್ಯತೆ

IPL 2023: These Three Teams Can Go For England Bowler Sam Curran

ಇಂಗ್ಲೆಂಡ್‌ನ ವೇಗದ ಬೌಲರ್ ಸ್ಯಾಮ್ ಕರನ್ ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಇಂಗ್ಲೆಂಡ್ ಬೌಲರ್ ಟಿ20 ವಿಶ್ವಕಪ್‌ನಲ್ಲಿ ಕರಾನ್ 13 ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 4 ಓವರ್ ಗಳಲ್ಲಿ 12 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾದರು. ಅದರಲ್ಲೂ ಅಂತಿಮ ಓವರ್ ಗಳಲ್ಲಿ ಸ್ಯಾಮ್ ಕರನ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಕರಾನ್ ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದರು. 2022ರಲ್ಲಿ ಅವರು ಐಪಿಎಲ್‌ನಲ್ಲಿ ಆಡದ ಕಾರಣ ಚೆನ್ನೈ ಅವರನ್ನು ಬಿಡುಗಡೆ ಮಾಡಿತ್ತು. ಟಿ20 ವಿಶ್ವಕಪ್‌ನಲ್ಲಿ ಅವರು ನೀಡಿದ ಪ್ರದರ್ಶನ ಐಪಿಎಲ್‌ನಲ್ಲಿ ಉತ್ತಮ ಬೇಡಿಕೆ ಸೃಷ್ಟಿಸುವಂತೆ ಮಾಡಿದ್ದು ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್‌ ರೈಸರ್ಸ್ ಹೈದರಾಬಾದ್ ತಂಡಗಳು ಅವರನ್ನು ಖರೀದಿಸಲು ಆಸಕ್ತಿ ಹೊಂದಿವೆ.

ಐದು ಬಾರಿಯ ಚಾಂಪಿಯನ್‌ಗಳಾದ ಮುಂಬೈ ಇಂಡಿಯನ್ಸ್ ತಂಡ 20.55 ಕೋಟಿ ರುಪಾಯಿ ಪರ್ಸ್‌ ಹೊಂದಿದೆ. ಕೀರನ್ ಪೊಲಾರ್ಡ್‌ ನಿವೃತ್ತರಾಗಿದ್ದು ಬ್ಯಾಟಿಂಗ್ ಕೋಚ್ ಆಗಿದ್ದಾರು. ಡೇನಿಯಲ್ ಸ್ಯಾಮ್ಸ್ ಮತ್ತು ಫ್ಯಾಬಿಯನ್ ಅಲೆನ್‌ರನ್ನು ಬಿಡುಗಡೆ ಮಾಡಿದ್ದಾರೆ.

ಜೋಫ್ರಾ ಆರ್ಚರ್ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಅವಕಾಶವಿದ್ದರೂ, ಮುಂಬೈ ಇಂಡಿಯನ್ಸ್ ಮುಂಜಾಗ್ರತಾ ಕ್ರಮವಾಗಿ ಸ್ಯಾಮ್ ಕರನ್‌ರನ್ನು ಖರೀದಿಸಲು ಪ್ರಯತ್ನಿಸುವ ಸಾಧ್ಯತೆ ಇದೆ. ಜಸ್ಪ್ರೀತ್ ಬುಮ್ರಾ ಅವರ ಪ್ರಮುಖ ಬೌಲರ್ ಆಗಿದ್ದು, ಕರನ್‌ರನ್ನು ತಂಡಕ್ಕೆ ಸೇರಿಸಿಕೊಂಡರೆ, ಅವರ ಬೌಲಿಂಗ್ ಮತ್ತಷ್ಟು ಪರಿಣಾಮಕಾರಿಯಾಗಲಿದೆ.

IPL 2023: These Three Teams Can Go For England Bowler Sam Curran

ಚೆನ್ನೈ ಸೂಪರ್ ಕಿಂಗ್ಸ್

ಸ್ಯಾಮ್ ಕರನ್ ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದಾರೆ. ಗಾಯದ ಕಾರಣದಿಂದ ಅವರು 2022ರಲ್ಲಿ ಮೆಗಹರಾಜಿನಲ್ಲಿ ಭಾಗವಹಿಸಲಿಲ್ಲ. ಸಿಎಸ್‌ಕೆ ತನ್ನ ಪರ್ಸ್‌ನಲ್ಲಿ 20.45 ಕೋಟಿ ರುಪಾಯಿ ಹೊಂದಿದೆ. ಐಪಿಎಲ್ ಹರಾಜಿಗೆ ಮುನ್ನ ಅವರು ಈಗಾಗಲೇ ಡಿಜೆ ಬ್ರಾವೋ, ಆಡಮ್ ಮಿಲ್ನೆ, ಕ್ರಿಸ್‌ ಜೋರ್ಡಾನ್‌ರನ್ನು ಬಿಡುಗಡೆ ಮಾಡಿದ್ದು, ತಂಡಕ್ಕೆ ವೇಗದ ಬೌಲರ್ ಅಗತ್ಯವಿದೆ.

2021ರಲ್ಲಿ ಐಪಿಎಲ್ ಕಪ್ ಗೆದ್ದ ತಂಡದಲ್ಲಿ ಸ್ಯಾಮ್ ಕರನ್ ಇದ್ದರು. ಅವರು, ಆ ಸೀಸನ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಚೆಪಾಕ್‌ನಲ್ಲಿ ಅವರು ತವರಿನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದ್ದು, ಮಾಜಿ ಆಟಗಾರನನ್ನು ಖರೀದಿಸಲು ಸಿಎಸ್‌ಕೆ ಸಹಜವಾಗಿಯೇ ಯೋಚಿಸುತ್ತದೆ.

IPL 2023: These Three Teams Can Go For England Bowler Sam Curran

ಸನ್‌ರೈಸರ್ಸ್ ಹೈದರಾಬಾದ್

ತಂಡದ ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿರುವ ಸನ್‌ರೈಸರ್ಸ್ ಹೈದರಾಬಾದ್ ಪರ್ಸ್‌ನಲ್ಲಿ 42.25 ಕೋಟಿ ರುಪಾಯಿ ಇದೆ. ಕಳೆದ ಸೀಸನ್‌ನಲ್ಲಿ ಆ ತಂಡದ ಬೌಲಿಂಗ್ ಕೂಡ ಉತ್ತಮವಾಗಿರಲಿಲ್ಲ, ಈಗ ಸ್ಯಾಮ್ ಕರನ್ ಖರೀದಿ ಮಾಡಿದರೆ, ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗವನ್ನು ಕೂಡ ಬಲಪಡಿಸಲು ಯೋಚಿಸಬಹುದು.

ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಮಾರ್ಕೊ ಜಾನ್ಸೆನ್ ಮತ್ತು ಟಿ ನಟರಾಜನ್ ತಂಡದ ಪ್ರಮುಖ ಬೌಲರ್ ಆಗಿದ್ದಾರೆ. ಭುವನೇಶ್ವರ್ ಕುಮಾರ್ ಕೂಡ ಉತ್ತಮ ಪ್ರದರ್ಶನ ನೀಡದ ಕಾರಣ ಸ್ಯಾಮ್ ಕರನ್ ಉತ್ತಮ ಆಯ್ಕೆಯಾಗಲಿದ್ದಾರೆ.

Story first published: Saturday, November 19, 2022, 5:30 [IST]
Other articles published on Nov 19, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+