IPL 2023: ಆರ್‌ಸಿಬಿ ತಂಡಕ್ಕಾಗಿ ಇನ್ನಿಂಗ್ಸ್ ಆರಂಭಿಸಬಹುದಾದ ಆಟಗಾರರು ಇವರು

2023ರ ಐಪಿಎಲ್ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬಲಿಷ್ಠ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯ ಮಿನಿ ಹರಾಜಿನಲ್ಲಿ ಯಾವುದೆ ಪ್ರಮುಖ ಆಟಗಾರರನ್ನು ಖರೀದಿಸದಿದ್ದರೂ, ಕೆಲವು ಆಟಗಾರರಿಗೆ ಬ್ಯಾಕಪ್ ಆಗಿ ಸಮರ್ಥ ಆಟಗಾರರನ್ನು ಖರೀದಿ ಮಾಡಿದೆ.
ಕಳೆದ ಮೂರು ಪಂದ್ಯಾವಳಿಯಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆದರೂ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆರ್‌ಸಿಬಿ ಪ್ಲೇ ಆಫ್ ಹಂತದಲ್ಲಿಎಡವಿತ್ತು. ಈ ಬಾರಿ ತಂಡ ಫೈನಲ್ ಪ್ರವೇಶಿಸುವ ವಿಶ್ವಾಸದಲ್ಲಿದೆ.
ಮಿನಿ ಹರಾಜಿನಲ್ಲಿ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಮತ್ತು ವೇಗದ ಬೌಲರ್ ರೀಸ್ ಟೋಪ್ಲೆಯವರನ್ನು ಖರೀದಿ ಮಾಡಿತು. ಉಳಿದಂತೆ ದೇಶೀಯ ಕ್ರಿಕೆಟ್ ಆಡಿದವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಆಡಿದ ಪ್ಲೇಯಿಂಗ್ ತಂಡವೇ ಈ ಬಾರಿಯೂ ಮುಂದುವರೆಯುವ ಸಾಧ್ಯತೆ ಇದೆ.
ಆರ್‌ಸಿಬಿ ತಂಡದ ಆರಂಭಿಕ ಜೋಡಿ ಯಾವುದು ಎನ್ನುವುದು ಸದ್ಯದ ಕುತೂಹಲವಾಗಿದೆ. ನಾಯಕ ಫಾಪ್ ಡುಪ್ಲೆಸಿಸ್ ಜೊತೆ ಯಾರು ಇನ್ನಿಂಗ್ಸ್ ಆರಂಭಿಸುತ್ತಾರೆ ಎನ್ನುವ ಪ್ರಶ್ನೆ ಇದೆ. ಕಳೆದ ಆವೃತ್ತಿಯಲ್ಲಿ ಹಲವು ಆರಂಭಿಕ ಜೋಡಿಯನ್ನು ಪ್ರಯತ್ನಿಸಿದರು. ಈ ಬಾರಿ ಆರ್‌ಸಿಬಿ ಪ್ರಮುಖವಾಗಿ ಈ ಮೂರು ಸಂಯೋಜನೆಯನ್ನು ಪ್ರಯತ್ನಿಸುವ ಸಾಧ್ಯತೆ ಇದೆ.

ಡು ಪ್ಲೆಸಿಸ್ ಜೊತೆ ಕಣಕ್ಕಿಳಿಯುತ್ತಾರ ಕೊಹ್ಲಿ
ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ 2022ರ ಐಪಿಎಲ್ ಆವೃತ್ತಿಯ ಕೊನೆಯ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಇನ್ನಿಂಗ್ಸ್ ಆರಂಭಿಸಿದರು. ಈ ಜೋಡಿ ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ.
ಕಳೆದ ಸೀಸನ್‌ನಲ್ಲಿ ಇಬ್ಬರೂ ಆರಂಭಿಕರು ಕೆಲವು ಅತ್ಯುತ್ತಮ ಇನ್ನಿಂಗ್ಸ್ ಮೂಲಕ ಪಂದ್ಯವನ್ನು ಗೆಲ್ಲಿಸಿದ್ದಾರೆ. 2023ರಲ್ಲಿ ಕೂಡ ಈ ಜೋಡಿ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಇಬ್ಬರೂ ಅನುಭವಿ ಬ್ಯಾಟರ್ ಆಗಿರುವುದು ಪ್ರಮುಖ ಅಂಶ. ಆದರೆ, ಈ ಇವರಿಬ್ಬರೂ ಮೊದಲ ಎಸೆತದಿಂದಲೇ ವೇಗವಾಗಿ ರನ್ ಗಳಿಸುವ ಆಟಗಾರರಲ್ಲ, ಕೆಲ ಸಮಯ ಕ್ರೀಸ್‌ನಲ್ಲಿ ಕಳೆದ ನಂತರ ರನ್ ಗಳಿಸಲು ಆರಂಭಿಸುತ್ತಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ 2023: ಕೆಎಲ್ ರಾಹುಲ್ ಬದಲಿಗೆ ಅವಕಾಶ ಪಡೆಯಬಹುದಾದ ಬ್ಯಾಟರ್‌ಗಳು ಇವರು!

ಡು ಪ್ಲೆಸಿಸ್ ಮತ್ತು ಅನುಜ್ ರಾವತ್
ಐಪಿಎಲ್ ಮೆಗಾಹರಾಜಿನಲ್ಲಿ ಯುವ ಆಟಗಾರ ಅನುಜ್ ರಾವತ್‌ರನ್ನು 3.4 ಕೋಟಿ ರುಪಾಯಿ ನೀಡಿ ಖರೀದಿ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2023ರ ಆವೃತ್ತಿಗಾಗಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ.
ಅನ್‌ಕ್ಯಾಪ್ಡ್ ವಿಕೆಟ್-ಕೀಪರ್ ಬ್ಯಾಟರ್‌ಗೆ ಇಷ್ಟು ದೊಡ್ಡ ಮೊತ್ತವನ್ನು ನೀಡಿರುವ ತಂಡ ಅವರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ. 2022ರ ಐಪಿಎಲ್‌ನ ಆರಂಭದ ಕೆಲವು ಪಂದ್ಯಗಳಲ್ಲಿ ಅನುಜ್ ರಾವತ್ ಫಾಫ್ ಡು ಪ್ಲೆಸಿಸ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದರು.
ಎಂಟು ಇನ್ನಿಂಗ್ಸ್ ಆಡಿದ ಅವರು 109.32 ಸ್ಟ್ರೈಕ್‌ರೇಟ್‌ನಲ್ಲಿ 129 ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ವಿರುದ್ಧ 66 ರನ್ ಗಳಿಸಿ ಗಮನ ಸೆಳೆದರು. 2023ರಲ್ಲಿ ಈ ಜೋಡಿಯನ್ನು ಆರ್‌ಸಿಬಿ ಮತ್ತೊಮ್ಮೆ ಪ್ರಯತ್ನಿಸುವ ಸಾಧ್ಯತೆ ಕೂಡ ಇದೆ.

ಸ್ಫೋಟಕ್ ಬ್ಯಾಟರ್ ಫಿನ್ ಅಲೆನ್-ಡು ಪ್ಲೆಸಿಸ್
ಆರ್‌ಸಿಬಿ ತಂಡದಲ್ಲಿರುವ ಮತ್ತೊಬ್ಬ ವಿಕೆಟ್ ಬ್ಯಾಟರ್ ಫಿನ್ ಅಲೆನ್. ನ್ಯೂಜಿಲೆಂಡ್‌ನ ಈ ಸ್ಫೋಟಕ ಆಟಗಾರ ಕಳೆದ ಎರಡು ಆವೃತ್ತಿಯಲ್ಲಿ ಬೆಂಗಳೂರು ತಂಡದ ಭಾಗವಾಗಿದ್ದರೂ ಇನ್ನೂ ಒಂದೇ ಒಂದು ಪಂದ್ಯವನ್ನು ಕೂಡ ಆಡಿಲ್ಲ.
ಫಿನ್ ಅಲೆನ್ ಮೊದಲ ಎಸೆತದಿಂದಲೇ ಬೌಂಡತಿ ಗಳಿಸುವ ಆಟಗಾರ, ಸ್ಫೋಟಕ ಬ್ಯಾಟಿಂಗ್‌ಗಾಗಿ ಅವರು ಹೆಸರಾಗಿದ್ದಾರೆ. ನ್ಯೂಜಿಲೆಂಡ್ ಪರವಾಗಿ 25 ಟಿ20 ಪಂದ್ಯಗಳನ್ನಾಡಿರುವ ಫಿನ್ ಅಲೆನ್ 567 ರನ್ ಗಳಿಸಿದ್ದಾರೆ. 160 ಕ್ಕಿಂತ ಹೆಚ್ಚಿ ಸ್ಟ್ರೈಕ್ ಹೊಂದಿರುವುದು ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲು ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಪ್ರೇರೇಪಣೆ ನೀಡಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications