IPL 2023: ಶ್ರೇಯಸ್ ಅಯ್ಯರ್ ಬದಲಾಗಿ ಮೂರನೇ ಕ್ರಮಾಂಕದಲ್ಲಿ ಆಡಬಹುದಾದ ಆಟಗಾರರು ಇವರು

ಇಂಡಿಯನ್ ಪ್ರೀಮಿಯರ್ ಲೀಗ್ 2023 ಆವೃತ್ತಿಯ ಆರಂಭಕ್ಕೆ 15 ದಿನಗಳಿಗಿಂತ ಕಡಿಮೆ ಇದೆ. ಐಪಿಎಲ್‌ಗಿಂತ ಮುಂಚಿತವಾಗಿ ಹಲವು ತಂಡಗಳು ಗಾಯದ ಕಾರಣದಿಂದ ಪ್ರಮುಖ ಆಟಗಾರರ ಸೇವೆಯನ್ನು ಕಳೆದುಕೊಂಡಿವೆ. ಭಾರತ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಗೆ ಮುನ್ನವೇ ಶ್ರೇಯಸ್ ಅಯ್ಯರ್ ಬೆನ್ನುನೋವಿನ ಕಾರಣದಿಂದ ಸರಣಿಗೆ ಅಲಭ್ಯರಾಗಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಬೆನ್ನುನೋವಿನಿಂದ ಬಳಲಿದ್ದ ಕಾರಣ ಬ್ಯಾಟಿಂಗ್ ಮಾಡಲು ಬರಲಿಲ್ಲ, ಸ್ಕ್ಯಾನಿಂಗ್‌ಗೆ ಒಳಗಾದ ನಂತರ ಏಕದಿನ ಸರಣಿಯಿಂದ ಹೊರಗುಳಿದರು.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದರು. ಆದರೆ ಆರಂಭದ ಕೆಲವು ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಅಲಭ್ಯರಾಗುವ ಸಾಧ್ಯತೆ ಇದೆ.
ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಯಾರು ತಂಡವನ್ನು ಮುನ್ನಡೆಸುತ್ತಾರೆ ಎನ್ನುವುದು ಕೂಡ ಪ್ರಶ್ನಯಾಗಿದೆ. ಆಂಡ್ರೆ ರಸೆಲ್, ಶಕೀಬ್ ಅಲ್ ಹಸನ್ ನಾಯಕತ್ವಕ್ಕೆ ಉತ್ತಮ ಆಯ್ಕೆಯಾಗಿದ್ದಾರೆ. ಅಯ್ಯರ್ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡರೆ, ಮೂರನೇ ಕ್ರಮಾಂಕದಲ್ಲಿ ಬೇರೊಬ್ಬ ಆಟಗಾರ ಕಣಕ್ಕಿಳಿಯಬೇಕಾಗುತ್ತದೆ. ಈ ಮೂವರು ಮೂರನೇ ಕ್ರಮಾಂಕದಲ್ಲಿ ಆಡಲು ಉತ್ತಮ ಆಯ್ಕೆಯಾಗಿದ್ದಾರೆ.

ಶಕೀಬ್ ಉತ್ತಮ ಆಯ್ಕೆ
ಬಾಂಗ್ಲಾದೇಶ ಟಿ20 ತಂಡದ ನಾಯಕ ಶಕೀಬ್ ಅಲ್ ಹಸನ್ ಮೂರನೇ ಕ್ರಮಾಂಕದಲ್ಲಿ ಆಡಲು ಉತ್ತಮ ಆಯ್ಕೆಯಾಗಿದ್ದಾರೆ. ಸಾಕಷ್ಟು ಅನುಭವಿ ಕ್ರಿಕೆಟರ್ ಆಗಿರುವ ಶಕೀಬ್ ಜವಾಬ್ದಾರಿಯುವ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿದ್ದಾರೆ.
ಸುನಿಲ್ ನರೈನ್, ಆಂಡ್ರೆ ರಸೆಲ್ ಮತ್ತು ಲಾಕಿ ಫರ್ಗುಸನ್ ಮೊದಲ ಮೂರು ವಿದೇಶಿ ಆಟಗಾರರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವುದು ಖಚಿತವಾಗಿದೆ. ನಾಲ್ಕನೇ ಸ್ಥಾನಕ್ಕೆ ರಹಮಾನುಲ್ಲಾ ಗುರ್ಬಾಜ್ ಮತ್ತು ಶಕೀಬ್ ಅಲ್ ಹಸನ್ ನಡುವೆ ಪೈಪೋಟಿ ನಡೆಯಲಿದ್ದು ಅನುಭವದ ಆಧಾರದ ಮೇಲೆ ಅವರು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶಕೀಬ್ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಆಲ್‌ರೌಂಡರ್ ಎನ್ನುವ ಕಾರಣಕ್ಕೆ ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಂಡರೆ 3 ಅಥವಾ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು.

ಸ್ಫೋಟಕ ಬ್ಯಾಟರ್ ರಿಂಕು ಸಿಂಗ್
ಕೆಕೆಆರ್ ತಂಡದಲ್ಲಿರುವ ಮತ್ತೊಬ್ಬ ಪ್ರತಿಭಾವಂತ ಆಟಗಾರ ರಿಂಕು ಸಿಂಗ್, ಕಳೆದ ಐಪಿಎಲ್ ಆವೃತ್ತಿಯಲ್ಲಿ ರಿಂಕು ಸಿಂಗ್ ಉತ್ತಮ ಪ್ರದರ್ಶನ ನೀಡಿದ್ದರಯ. 7 ಪಂದ್ಯಗಳಲ್ಲಿ ಆಡಿದ್ದ ಅವರು 34.28 ಸರಾಸರಿಯಲ್ಲಿ 150 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು.
ಕೆಕೆಆರ್ ತಂಡದಲ್ಲಿ ಕೆಳ ಕ್ರಮಾಂಕದಲ್ಲಿ ಆಡಿದರೂ, ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ರಾಜ್ಯಕ್ಕಾಗಿ ಆಡುವಾಗ ಅಗ್ರಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ರಿಂಕು ಸಿಂಗ್ ಉತ್ತಮ ಆಯ್ಕೆಯಾಗಿದ್ದಾರೆ. ಸ್ಫೋಟಕ ಬ್ಯಾಟರ್ ಆಗಿರುವ ರಿಂಕು ಸಿಂಗ್ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ನಿತೀಶ್ ರಾಣಾ ?
ಅಯ್ಯರ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲು ಕೆಕೆಆರ್ ತಂಡಕ್ಕೆ ನಿತೀಶ್ ರಾಣಾ ಮೊದಲ ಆಯ್ಕೆಯಾಗಿರುತ್ತಾರೆ. ಈಗಾಗಲೇ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅನುಭವ ಹೊಂದಿದ್ದಾರೆ. 2022ರ ಐಪಿಎಲ್‌ನಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಶ್ರೇಯಸ್ ಅಯ್ಯರ್ ಜೊತೆ ಹಲವು ಉತ್ತಮ ಜೊತೆಯಾಟ ಆಡಿದ್ದಾರೆ.
ಸ್ಪಿನ್ ವಿರುದ್ಧ ಕೂಡ ಉತ್ತಮವಾಗಿ ಆಡುವ ನಿತೀಶಾ ರಾಣ, ಕಳೆದ ಆವೃತ್ತಿಯಲ್ಲಿ 27.77 ಸರಾಸರಿಯಲ್ಲಿ143.52 ಸ್ಟ್ರೈಕ್‌ರೇಟ್‌ನಲ್ಲಿ 361 ರನ್ ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ ಫಿಟ್ ಆದ ನಂತರ ಅವರು ಮತ್ತೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications