For Quick Alerts
ALLOW NOTIFICATIONS  
For Daily Alerts
 

ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆ ಒಂದು ನಿರ್ಧಾರವೇ ಸೋಲಿಗೆ ಕಾರಣವಾಯಿತು: ಟಾಮ್ ಮೂಡಿ

ಆಡಿದ ಎರಡನೇ ಐಪಿಎಲ್ ಟೂರ್ನಿಯಲ್ಲಿಯೂ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡ ಲಕ್ನೋ ಸೂಪರ್ ಜೈಂಟ್ಸ್ ತಂಡ ಎರಡನೇ ಬಾರಿಯೂ ಪ್ಲೇಆಫ್ ಹಂತದಲ್ಲಿ ತನ್ನ ಆಟವನ್ನು ಅಂತ್ಯಗೊಳಿಸಿ ನಿರಾಸೆ ಅನುಭವಿಸಿದೆ. ಬುಧವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಅತ್ಯಂತ ಹೀನಾಯ ಸೋಲು ಅನುಭವಿಸಿದ ಲಕ್ನೋ ಸೂಪರ್ ಜೈಂಟ್ಸ್ ಟೂರ್ನಿಯಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ.

ಪ್ಲೇಆಫ್‌ನಲ್ಲಿ ಮುಂಬೈ ಇಮಡಿಯನ್ಸ್ ತಂಡದ ವಿರುದ್ಧ ಅನುಭವಿಸಿದ ಈ ಹೀನಾಯ ಸೋಲಿನ ಬಗ್ಗೆ ಸನ್‌ರೈಸರ್ಸ್ ಹೈದರಾಬಾದ್ ತಮಡದ ಮಾಜಿ ಕೋಚ್ ಟಾಮ್ ಮೂಡಿ ಪ್ರತಿಕ್ರಿಯೆ ನೀಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ನಿರ್ಣಾಯಕ ಪಂದ್ಯದಲ್ಲಿ ಕ್ವಿಂಟನ್ ಡಿಕಾಕ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟಿದ್ದೇ ಈ ಸೋಲಿಗೆ ಮುಖ್ಯ ಕಾರಣವಾಯಿತು ಎಂದಿದ್ದಾರೆ ಟಾಮ್ ಮೂಡಿ.

IPL 2023: Tom Moody criticize LSG decision of dropping Quinton de Kock against MI match

ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ ವಿರುದ್ಧದ ಪಂದ್ಯದಲ್ಲಿ ಕ್ವಿಂಟನ್ ಡಿಕಾಕ್ ಬದಲಿಗೆ ಕೇಲ್ ಮೇಯರ್ಸ್ ಅವರನ್ನು ಕಣಕ್ಕಿಳಿಸಿತ್ತು. ಈ ಆವೃತ್ತಿಯಲ್ಲಿ ಕ್ವಿಂಟ್ ಡಿಕಾಕ್ ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರವೇ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಆರಂಭಿಕ ಹಂತದಲ್ಲಿ ರಾಷ್ಟ್ರೀಯ ತಂಡದ ಜವಾಬ್ಧಾರಿಯ ಕಾರಣದಿಂದಾಗಿ ತಡವಾಗಿ ಎಲ್‌ಎಸ್‌ಜಿ ತಂಡವನ್ನು ಸೇರಿಕೊಂಡಿದ್ದರು ಕ್ವಿಂಟನ್ ಡಿಕಾಕ್. ಈ ಅವಧಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕೇಲ್ ಮೇಯರ್ಸ್ ಕೆಲ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಆರಂಭಿಕ ಸ್ಥಾನವನ್ನು ಗಟ್ಟಿಗೊಳಿಸಿದರು. ಆದರೆ ಬಳಿಕ ಮೇಯರ್ಸ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾದರು.

ಲೀಗ್ ಹಂತದ ಕೊನೆಯ ಘಟ್ಟದಲ್ಲಿ ಕ್ವಿಂಟನ್ ಡಿಕಾಕ್ ಆಡುವ ಬಳಗದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡರಾದರು ಕೇವಲ ನಲ್ಕು ಪಂದ್ಯಗಳಲ್ಲಿ ಮಾತ್ರವೇ ಆಡಿದ್ದಾರೆ. ಇದರಲ್ಲಿ 35.75ರ ಸರಾಸರಿಯಲ್ಲಿ ಡಿಕಾಕ್ 140 ರನ್‌ಗಳನ್ನು ಗಳಿಸಿ ಮಿಂಚಿದ್ದರು. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಡಿಕಾಕ್ ಬದಲಿಗೆ ಕೇಲ್ ಮೇಯರ್ಸ್ ಇಂಪಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಂಡರು. ಆದರೆ ಈ ಪಂದ್ಯದಲ್ಲಿ 13ಎಸೆತಗಳನ್ನು ಎದುರಿಸಿದ ಮೇಯರ್ಸ್ 18 ರನ್‌ಗಳನ್ನು ಮಾತ್ರವೇ ಗಳಿಸಲು ಸಫಲವಾದರು. ಉಳಿದ ಆಟಗಾರರು ಕೂಡ ಮುಂಬೈ ಇಂಡಿಯನ್ಸ್ ಬೌಲಿಂಗ್ ದಾಳಿಗೆ ನಲುಗಿದ್ದು ಕೇವಲ 101 ರನ್‌ಗಳಿಗೆ ಆಲೌಟ್ ಆಗಿದೆ.

ಕ್ವಿಂಟನ್ ಡಿಕಾಕ್ ಅವರಂತಾ ಅನುಭವ ಆಟಗಾರನನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡುವ ಬಳಗದಿಂದ ಹೊರಗಿಟ್ಟ ವಿಚಾರವಾಗಿ ಮಾಜಿ ಕೋಚ್ ಟಾಮ್ ಮೂಡಿ ಟೀಕಿಸಿದ್ದಾರೆ. "ಈ ನಿರ್ಧಾರ ನನಗೆ ಅಚ್ಚರಿಯುಂಟು ಮಾಡಿತ್ತು. ಯಾಕೆಂದರೆ ಇಂತಾ ನಿರ್ಧಾರಗಳೇ ದೊಡ್ಡ ತಿರುವು ನೀಡುತ್ತದೆ. ಮಹತ್ವದ ಪಂದ್ಯಗಳಲ್ಲಿ ಅನುಭವ ಕೂಡ ಬಹಳ ಪ್ರಮುಖವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಡ್ರೆಸ್ಸಿಂಗ್‌ರೂಮ್‌ನಲ್ಲಿರುವ ಎಲ್ಲರಿಗಿಂತಲೂ ಕ್ವಿಂಟನ್ ಡಿಕಾಕ್ ಅವರ ಅನುಭವ ದೊಡ್ಡದು" ಎಂದಿದ್ದಾರೆ ಟಾಮ್ ಮೂಡಿ.

"ಈ ನಿರ್ಧಾರ ನನಗೆ ಅಚ್ಚರಿಯನ್ನುಂಟು ಮಾಡಿದೆ. ಇದು ತಂಡಕ್ಕೆ ಕೂಡ ಬಹಳ ದೊಡ್ಡ ಏಟನ್ನು ನೀಡಿದೆ. ಆತನಲ್ಲಿ ಶಾಂತಚಿತ್ತದಿಂದ ಎದುರಾಳಿಯನ್ನು ಎದುರಿಸುವ ಸಾಮರ್ಥ್ಯವಿದೆ. ಅಲ್ಲದೆ ನಿಕೋಲಸ್ ಪೂರನ್ ವಿಕೆಟ್‌ನ ಹಿಂದೆ ಹೆಚ್ಚು ಪರಿಣಾಮಕಾರಿಯಲ್ಲ. ಪೂರನ್ ಅವರಿಗಿಂತ ಅತ್ಯಂತ ಅದ್ಭುತವಾದ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್. ಆದರೆ ಅವರು ಟೂರ್ನಿಯುದ್ದಕ್ಕೂ ಫಿಲ್ಡಿಂಗನ್ನು ಮಾತ್ರವೇ ಮಾಡಿದ್ದಾರೆ" ಎಂದಿದ್ದಾರೆ ಟಾಮ್ ಮೂಡಿ.

Story first published: Thursday, May 25, 2023, 18:57 [IST]
Other articles published on May 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+