IPL 2023: ಈ ಆಟಗಾರನನ್ನು ಬಿಡುಗಡೆ ಮಾಡಿ ಮತ್ತೆ ಹರಾಜಿನಲ್ಲಿ ಖರೀದಿಸಿ: ಪಂಜಾಬ್ ತಂಡಕ್ಕೆ ಟಾಮ್ ಮೂಡಿ ಈ ಸಲಹೆ ಕೊಟ್ಟಿದ್ಯಾಕೆ?

ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಶಾರುಖ್ ಖಾನ್‌ರನ್ನು ಬಿಡುಗಡೆ ಮಾಡಬೇಕು ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಅಭಿಪ್ರಾಯಪಟ್ಟಿದ್ದಾರೆ. ಈಗ ಬಿಡುಗಡೆ ಮಾಡಿ ಮತ್ತೆ ಮಿನಿ ಹರಾಜಿನಲ್ಲಿ ಖರೀದಿ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ಪಂಜಾಬ್ ಕಿಂಗ್ಸ್ ಶಾರುಖ್ ಖಾನ್‌ರನ್ನು 2022ರ ಐಪಿಎಲ್ ಮೆಗಾ ಹರಾಜಿನಲ್ಲಿ 9 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತ್ತು. ತಮಿಳುನಾಡು ಮೂಲದ ಆಟಗಾರ ಕಳೆದ ಸೀಸನ್‌ನಲ್ಲಿ 8 ಪಂದ್ಯಗಳಲ್ಲಿ 16.71 ಸರಾಸರಿಯಲ್ಲಿ 108.33 ಸ್ಟ್ರೈಕ್‌ರೇಟ್‌ನಲ್ಲಿ 117 ರನ್ ಗಳಿಸಿದ್ದರು.
ಶಾರುಖ್ ಖಾನ್‌ರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕಾ ಅಥವಾ ಬಿಡುಗಡೆ ಮಾಡಬೇಕಾ ಎನ್ನುವ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಟಾಮ್ ಮೂಡಿ, ಶಾರೂಖ್ ಖಾನ್ ಅವರಿಗೆ 9 ಕೋಟಿ ರುಪಾಯಿ ನೀಡಿರುವುದು ಅತ್ಯಂತ ದುಬಾರಿಯಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ. 9 ಕೋಟಿ ರುಪಾಯಿ ನೀಡಿ ಖರೀದಿಸಿದ ಆಟಗಾರ ಬೆಂಚ್ ಕಾಯುವುದು ಉತ್ತಮ ನಿರ್ಧಾರವಲ್ಲ, ತಂಡಕ್ಕೆ ಆತನ ಮೇಲೆ ನಂಬಿಕೆ ಇಲ್ಲದಿದ್ದರೆ ಆತನನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದರು.

ಕಡಿಮೆ ಬೆಲೆಗೆ ಮತ್ತೆ ಖರೀದಿ ಮಾಡಿ
ಶಾರುಖ್ ಖಾನ್‌ರನ್ನು ಹರಾಜಿಗೆ ಬಿಡುಗಡೆ ಮಾಡಲಿ, ಅವರು ಮತ್ತೆ ತಂಡಕ್ಕೆ ಅವಶ್ಯಕ ಎನಿಸಿದರೆ ಈ ಬಾರಿ ಮಿನಿ ಹರಾಜಿನಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡುವ ಬಗ್ಗೆ ಯೋಚಿಸಬಹುದು ಎಂದು ಅವರು ಹೇಳಿದ್ದಾರೆ.
"ಆತನನ್ನು ಮತ್ತೆ ಹರಾಜಿಗೆ ಬಿಟ್ಟು, ಮತ್ತೆ ತಂಡಕ್ಕೆ ವಾಪಸ್ ಕರೆತರುವ ಬಗ್ಗೆ ಯೋಚಿಸಬಹುದು. 5 ರಿಂದ 6 ಕೋಟಿ ರುಪಾಯಿಗೆ ಖರೀದಿ ಮಾಡಿ ತಂಡಕ್ಕೆ ಮತ್ತೆ ಕರೆತಂದರೆ, ಸಮತೋಲನ ಉಳಿಸಿಕೊಳ್ಳಬಹುದು. ಆತನಿಗೆ ಈಗ ಬೇಡಿಕೆ ಕೂಡ ಕಡಿಮೆ ಇದೆ, ಕಡಿಮೆ ಬೆಲೆಗೆ ಖರೀದಿ ಮಾಡಬಹುದು" ಎಂದು ಸಲಹೆ ನೀಡಿದರು.
ಮೂಡಿ ಅಭಿಪ್ರಾಯಕ್ಕೆ ಹರ್ಭಜನ್ ಸಿಂಗ್ ಕೂಡ ಸಹಮತ ವ್ಯಕ್ತಪಡಿಸಿದರು. ಪ್ಲೇಯಿಂಗ್ XIನಲ್ಲಿ ನಿರಂತರವಾಗಿ ಸ್ಥಾನ ಪಡೆಯದ ಆಟಗಾರನಿಗೆ 9 ಕೋಟಿ ರುಪಾಯಿ ವ್ಯಯಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
IPL 2023: ಶಾರ್ದೂಲ್ ಠಾಕೂರ್-ಅಮನ್ ಖಾನ್ ವಿನಿಮಯ ಮಾಡಿಕೊಂಡ ಡೆಲ್ಲಿ-ಕೆಕೆಆರ್

ಅಗರ್ವಾಲ್‌ರನ್ನು ಉಳಿಸಿಕೊಳ್ಳಬೇಕು
ಮಯಾಂಕ್ ಅಗರ್ವಾಲ್‌ರನ್ನು ತಂಡದಿಂದ ಕೈಬಿಡುವುದು ಮೂರ್ಖತನದ ನಿರ್ಧಾರವಾಗುತ್ತದೆ ಎಂದು ಟಾಮ್ ಮೂಡಿ ಹೇಳಿದ್ದಾರೆ. ಆತನನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು. ನೀವು ಆತನನ್ನು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿಸುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಶಿಖರ್ ಧವನ್ ಮತ್ತು ಜಾನಿ ಬೈರ್ ಸ್ಟೋವ್ ಆರಂಭಿಕರಾಗಿ ಆಡುವುದರಿಂದ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧರಿಸಬೇಕು ಎಂದರು. 2022ರ ಋತುವಿನಲ್ಲಿ ಅವರು ನಾಯಕರಾಗಿದ್ದ ಸಂಧರ್ಭದಲ್ಲಿ ಆರಂಭಿಕ ಆಟಗಾರನ ಸ್ಥಾನವನ್ನು ಬಿಟ್ಟುಕೊಟ್ಟು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. 2023ರ ಐಪಿಎಲ್‌ನಲ್ಲಿ ಕೂಡ ಅವರು ಪಂಜಾಬ್ ತಂಡದ ಪ್ಲೇಯಿಂಗ್ XI ನಲ್ಲಿ ನೋಡಲು ಬಯಸುತ್ತೇನೆ ಎಂದರು.

ಸಾಧಾರಣ ಪ್ರದರ್ಶನ ನೀಡಿದ್ದ ಮಯಾಂಕ್
ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. 13 ಪಂದ್ಯಗಳಲ್ಲಿ ಆಡಿದ್ದ ಅವರು 16.33 ಸರಾಸರಿಯಲ್ಲಿ ಕೇವಲ 196 ರನ್ ಗಳಿಸಿದ್ದರು. ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ಅಗರ್ವಾಲ್, ಜಾನಿ ಬೈರ್ ಸ್ಟೋವ್ ಅವರಿಗಾಗಿ ತಮ್ಮ ಆರಂಭಿಕ ಸ್ಥಾನವನ್ನು ಬಿಟ್ಟುಕೊಟ್ಟು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು.
ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಐಪಿಎಲ್ ಮಿನಿ ಹರಾಜು ನಡೆಯಲಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಭಾರಿ ಬದಲಾವಣೆ ಮಾಡಲು ನಿರ್ಧರಿಸಿದ್ದು, ದೊಡ್ಡ ಆಟಗಾರರ ಮೇಲೆ ಕಣ್ಣಿಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications