Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023 Points Table: ಪಂಜಾಬ್ ವಿರುದ್ಧ ಗುಜರಾತ್ ಗೆದ್ದ ನಂತರ ಅಂಕಪಟ್ಟಿ; ಆರೆಂಜ್, ಪರ್ಪಲ್ ಕ್ಯಾಪ್ ಅಪ್ಡೇಟ್

ಗುರುವಾರ, ಏಪ್ರಿಲ್ 13ರಂದು ಮೊಹಾಲಿಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 18ನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವು ದಾಖಲಿಸಿತು.

ಇದೇ ವೇಳೆ ಗುಜರಾತ್ ಟೈಟನ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ 3 ಗೆಲುವು ಮತ್ತು 1 ಸೋಲು ಕಂಡು 6 ಅಂಕಗಳೊಂದಿಗೆ ಐಪಿಎಲ್ 2023ರ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಇನ್ನು ಪಂಜಾಬ್ ಕಿಂಗ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ 2 ಗೆಲುವು ಮತ್ತು 2 ಸೋಲು ಕಂಡು 4 ಅಂಕಗಳನ್ನು ಗಳಿಸಿ 6ನೇ ಸ್ಥಾನಕ್ಕೆ ಕುಸಿದಿದೆ.

IPL 2023: Updated Points Table After Gujarat Titans Win Against Punjab Kings; Orange And Purple Cap List

ಇನ್ನು ರಾಜಸ್ಥಾನ ರಾಯಲ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ 3 ಗೆಲುವು ಮತ್ತು 1 ಸೋಲು ಕಂಡು 6 ಅಂಕಗಳನ್ನು ಗಳಿಸಿ ಉತ್ತಮ ನೆಟ್ ರನ್‌ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡ 4 ಪಂದ್ಯಗಳಲ್ಲಿ 3 ಗೆಲುವು ಮತ್ತು 1 ಸೋಲು ಕಂಡು 6 ಅಂಕಗಳಿಂದ 2ನೇ ಸ್ಥಾನದಲ್ಲಿದೆ.

ಶುಕ್ರವಾರ, ಏಪ್ರಿಲ್ 14ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ಐಪಿಎಲ್ 2023ರ 19ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡವನ್ನು ಸೋಲಿಸಿದರೆ ನಿತೀಶ್ ರಾಣಾ ನಾಯಕತ್ವದ ಕೆಕೆಆರ್ ತಂಡ 2ನೇ ಸ್ಥಾನ ಅಥವಾ ಅಗ್ರಸ್ಥಾನ ಪಡೆದುಕೊಳ್ಳುವ ಅವಕಾಶವಿದೆ.

ತಂಡ ಪಂದ್ಯ ಗೆಲುವು ಸೋಲು ಅಂಕಗಳು
ರಾಜಸ್ಥಾನ ರಾಯಲ್ಸ್ 4 3 1 6
ಲಕ್ನೋ ಸೂಪರ್ ಜೈಂಟ್ಸ್ 4 3 1 6
ಕೋಲ್ಕತ್ತಾ ನೈಟ್ ರೈಡರ್ಸ್ 3 2 1 4
ಗುಜರಾತ್ ಟೈಟನ್ಸ್ 3 2 1 4
ಚೆನ್ನೈ ಸೂಪರ್ ಕಿಂಗ್ಸ್ 4 2 2 4
ಪಂಜಾಬ್ ಕಿಂಗ್ಸ್ 3 2 1 4
ರಾಯಲ್ ಚಾಲೆಂಜರ್ಸ್ ಬೆಂಗಳೂರು 3 1 1 2
ಮುಂಬೈ ಇಂಡಿಯನ್ಸ್ 3 1 1 2
ಸನ್‌ರೈಸರ್ಸ್ ಹೈದರಾಬಾದ್ 3 1 2 2
ಡೆಲ್ಲಿ ಕ್ಯಾಪಿಟಲ್ಸ್ 4 0 4 0
IPL 2023: Updated Points Table After Gujarat Titans Win Against Punjab Kings; Orange And Purple Cap List

ಗುರುವಾರ ಮೊಹಾಲಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 8 ರನ್ ಗಳಿಸಿದರೂ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಆರೆಂಜ್ ಕ್ಯಾಪ್ ಮೇಲೆ ಹಿಡಿತ ಸಾಧಿಸಿದ್ದಾರೆ. ಶಿಖರ್ ಧವನ್ ಇದೀಗ 4 ಪಂದ್ಯಗಳಿಂದ 116.5 ಸರಾಸರಿಯಲ್ಲಿ ಎರಡು ಅರ್ಧಶತಕಗಳೊಂದಿಗೆ 233 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ 209 ರನ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದ್ದರೆ, ರಾಜಸ್ಥಾನ ರಾಯಲ್ಸ್ ಆರಂಭಿಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ 4 ಪಂದ್ಯಗಳಿಂದ 204 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ 2023ರ ಆರೆಂಜ್ ಕ್ಯಾಪ್ ಪಟ್ಟಿ

ಶಿಖರ್ ಧವನ್ ಪಂಜಾಬ್ ಕಿಂಗ್ಸ್ 3 ಪಂದ್ಯ 225 ರನ್
ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ 4 ಪಂದ್ಯ 209 ರನ್
ಜೋಸ್ ಬಟ್ಲರ್ ರಾಜಸ್ಥಾನ ರಾಯಲ್ಸ್ 4 ಪಂದ್ಯ 204 ರನ್

2023ರ ಐಪಿಎಲ್‌ನ ಈವರೆಗಿನ ಪಂದ್ಯಾವಳಿಯಲ್ಲಿ ರಾಜಸ್ಥಾನ ರಾಯಲ್ಸ್ ಲೆಗ್ ಸ್ಪಿನ್ನರ್ ಪ್ರಸ್ತುತ 4 ಪಂದ್ಯಗಳಿಂದ 10 ವಿಕೆಟ್‌ಗಳನ್ನು ಪಡೆದು ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಇನ್ನು ಗುಜರಾತ್ ಟೈಟನ್ಸ್ ತಂಡದ ಲೆಗ್ ಸ್ಪಿನ್ನರ್ ರಶೀದ್ ಖಾನ್ 4 ಪಂದ್ಯಗಳಿಂದ 9 ವಿಕೆಟ್‌ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ 2023ರ ಪರ್ಪಲ್ ಕ್ಯಾಪ್ ಪಟ್ಟಿ

ಯುಜ್ವೇಂದ್ರ ಚಹಾಲ್ 4 ಪಂದ್ಯ 10 ವಿಕೆಟ್
ಮಾರ್ಕ್ ವುಡ್ 3 ಪಂದ್ಯ 9 ವಿಕೆಟ್
ರಶೀದ್ ಖಾನ್ 3 ಪಂದ್ಯ 8 ವಿಕೆಟ್

Story first published: Friday, April 14, 2023, 10:41 [IST]
Other articles published on Apr 14, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+