Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಟಿ20 ಕ್ರಿಕೆಟ್‌ನಲ್ಲಿ ಆರೋನ್ ಫಿಂಚ್ ಹಿಂದಿಕ್ಕಿ ಈ ಸಾಧನೆ ಮಾಡಿದ ವಿಶ್ವದ 4ನೇ ಕ್ರಿಕೆಟಿಗ ವಿರಾಟ್ ಕೊಹ್ಲಿ

IPL 2023: Virat Kohli Beacome 4th Highest Run Scorer In T20 Cricket In The World

ಭಾರತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿದರು. ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಆರೋನ್ ಫಿಂಚ್ ಅವರನ್ನು ಹಿಂದಿಕ್ಕಿದರು.

ಏಪ್ರಿಲ್ 10ರ ಸೋಮವಾರದಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದರು.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 45 ಎಸೆತಗಳಲ್ಲಿ 61 ರನ್ ಗಳಿಸಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರ 138ಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ನ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು ಒಳಗೊಂಡಿದ್ದವು.

IPL 2023: Virat Kohli Beacome 4th Highest Run Scorer In T20 Cricket In The World

ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2023ರ ಐಪಿಎಲ್ ಋತುವಿನಲ್ಲಿ ಆಡಿದ ಮೂರು ಪಂದ್ಯಗಳಿಂದ 82ರ ಸರಾಸರಿ ಮತ್ತು 147ಕ್ಕಿಂತ ಹೆಚ್ಚಿ ಸ್ಟ್ರೈಕ್‌ರೇಟ್‌ನಲ್ಲಿ 164 ರನ್ ಗಳಿಸಿದ್ದಾರೆ. ಅಜೇಯ 82 ಗರಿಷ್ಠ ಸ್ಕೋರ್ ಆಗಿದೆ.

2007ರಲ್ಲಿ ಟಿ20 ಚೊಚ್ಚಲ ಪಂದ್ಯವಾಡಿದಾಗಿನಿಂದ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್‌ನಲ್ಲಿ ಲೆಜೆಂಡ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಈವರೆಗೆ 362 ಪಂದ್ಯಗಳ 345 ಇನ್ನಿಂಗ್ಸ್‌ಗಳಲ್ಲಿ 41.11 ಸರಾಸರಿ ಮತ್ತು 133.17 ಸ್ಟ್ರೈಕ್‌ರೇಟ್‌ನಲ್ಲಿ 11,429 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕಗಳು ಮತ್ತು 86 ಅರ್ಧ ಶತಕಗಳನ್ನು ಗಳಿಸಿದ್ದು, ಅಜೇಯ 122 ಅತ್ಯುತ್ತಮ ಸ್ಕೋರ್ ಆಗಿದೆ.

ಗಮನಾರ್ಹವಾಗಿ, ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಆಡಿದ 115 ಪಂದ್ಯಗಳ 107 ಇನ್ನಿಂಗ್ಸ್‌ಗಳಲ್ಲಿ 52.73 ಸರಾಸರಿ ಮತ್ತು 137.96 ಸ್ಟ್ರೈಕ್‌ರೇಟ್‌ನಲ್ಲಿ 4,008 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 37 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

IPL 2023: Virat Kohli Beacome 4th Highest Run Scorer In T20 Cricket In The World

ಇದೇ ವೇಳೆ 34 ವರ್ಷದ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. 226 ಪಂದ್ಯಗಳ 218 ಇನ್ನಿಂಗ್ಸ್‌ಗಳಲ್ಲಿ 36.69 ಸರಾಸರಿ ಮತ್ತು 129.54 ಸ್ಟ್ರೈಕ್‌ರೇಟ್‌ನಲ್ಲಿ 6,788 ರನ್ ಗಳಿಸಿದ್ದಾರೆ. ಈ ಶ್ರೀಮಂತ ಲೀಗ್‌ನಲ್ಲಿ ಐದು ಶತಕಗಳು ಮತ್ತು 46 ಅರ್ಧ ಶತಕಗಳನ್ನು ಬಾರಿಸಿದ್ದು, 113 ಅತ್ಯುತ್ತಮ ಸ್ಕೋರ್ ಆಗಿದೆ.

ಒಟ್ಟಾರೆ ಟಿ20 ಕ್ರಿಕೆಟ್‌ ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಆಟಗಾರರು
ವೆಸ್ಟ್ ಇಂಡೀಸ್‌ನ ಲೆಜೆಂಡ್ ಕ್ರಿಸ್ ಗೇಲ್ 463 ಪಂದ್ಯಗಳಲ್ಲಿ 36.22ರ ಸರಾಸರಿ ಮತ್ತು 144.75ರ ಸ್ಟ್ರೈಕ್‌ರೇಟ್‌ನಲ್ಲಿ 14,562 ರನ್ ದಾಖಲಿಸಿದ್ದಾರೆ. ಇದರಲ್ಲಿ 22 ಶತಕಗಳು ಮತ್ತು 88 ಅರ್ಧಶತಕಗಳು ಒಳಗೊಂಡಿವೆ.

ಪಾಕಿಸ್ತಾನ ತಂಡದ ಮಾಜಿ ಆಟಗಾರ ಶೋಯೆಬ್ ಮಲಿಕ್ 510 ಪಂದ್ಯಗಳಲ್ಲಿ 36ರ ಸರಾಸರಿ ಮತ್ತು 127.55 ಸ್ಟ್ರೈಕ್‌ರೇಟ್‌ನಲ್ಲಿ 12,528 ರನ್ ಬಾರಿಸಿದ್ದಾರೆ. ಇದರಲ್ಲಿ 77 ಅರ್ಧಶತಕಗಳು ಒಳಗೊಂಡಿದ್ದು, ಅಜೇಯ 95 ಅತ್ಯುತ್ತಮ ಸ್ಕೋರ್ ಆಗಿದೆ.

ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಕೀರನ್ ಪೊಲಾರ್ಡ್ 625 ಪಂದ್ಯಗಳಲ್ಲಿ 31.29 ಸರಾಸರಿ ಮತ್ತು 150.51 ಸ್ಟ್ರೈಕ್‌ರೇಟ್‌ನಲ್ಲಿ 12,175 ರನ್ ಬಾರಿಸಿದ್ದು, ಒಂದು ಶತಕ ಮತ್ತು 58 ಅರ್ಧಶತಕಗಳಿವೆ.

ಇದೀಗ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಆರೋನ್ ಫಿಂಚ್ 382 ಪಂದ್ಯಗಳಲ್ಲಿ 33.80 ಸರಾಸರಿ ಮತ್ತು 138.53 ಸ್ಟ್ರೈಕ್‌ರೇಟ್‌ನಲ್ಲಿ 11,382 ರನ್‌ ಗಳಿಸಿದ್ದಾರೆ. ಎಂಟು ಶತಕಗಳು ಮತ್ತು 77 ಅರ್ಧಶತಕಗಳು ಸೇರಿದ್ದು, 172 ಅತ್ಯುತ್ತಮ ಸ್ಕೋರ್‌ ಆಗಿದೆ.

Story first published: Tuesday, April 11, 2023, 20:05 [IST]
Other articles published on Apr 11, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+