Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LSG vs RCB: ಕೀಪ್ ಸೈಲೆನ್ಸ್; ಚಿನ್ನಸ್ವಾಮಿಯಲ್ಲಿ ಗಂಭೀರ್ ಮಾಡಿದ್ದ ಸೆಲೆಬ್ರೇಷನ್‌ಗೆ ಕಿಂಗ್ ಕೊಹ್ಲಿ ಟಾಂಗ್!

IPL 2023: Virat Kohli gives reply to Gambhir by doing keep silence celebration in a different way

ಇಂದು ( ಮೇ 1 ) ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗೌತಮ್ ಗಂಭೀರ್‌ಗೆ ಟಾಂಗ್ ನೀಡಿದ್ದಾರೆ.

ಹೌದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾಗ ಗಂಭೀರ್ ಮಾಡಿದ್ದ ಅತಿರೇಕದ ಸೆಲೆಬ್ರೇಷನ್‌ಗೆ ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಪ್ರತ್ಯುತ್ತರ ನೀಡಿದ್ದಾರೆ.

ಇನ್ನು ಇತ್ತಂಡಗಳು ಮುಖಾಮುಖಿಯಾಗಿದ್ದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ರೋಚಕ ಗೆಲುವನ್ನು ಕಂಡಿತ್ತು.ಏಪ್ರಿಲ್ 10ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತ್ತು. ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿ ಕೊನೆಯ ಎಸೆತದಲ್ಲಿ 1 ವಿಕೆಟ್ ಅಂತರದ ಗೆಲುವನ್ನು ಕಂಡಿತ್ತು.

ಹೀಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದ್ದ ಬೃಹತ್ ಗುರಿಯನ್ನು ಲಕ್ನೋ ಸೂಪರ್ ಜೈಂಟ್ಸ್ ಚೇಸ್ ಮಾಡಿದ ಕಾರಣ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ಅವೇಶ್ ಖಾನ್ ಹಾಗೂ ಮೆಂಟರ್ ಗೌತಮ್ ಗಂಭೀರ್ ಮಿತಿ ಮೀರಿದ ಸೆಲೆಬ್ರೇಷನ್ ಮಾಡಿದ್ದರು.

ಅವೇಶ್ ಖಾನ್ ಒಂದು ರನ್ ಬಾರಿಸಿ ಸೆಂಚುರಿ ಬಾರಿಸಿದವರ ಹಾಗೆ ಹೆಲ್ಮೆಟ್ ಅನ್ನು ನೆಲಕ್ಕೆ ಬಡಿದು ಅತಿರೇಕದ ಸಂಭ್ರಮಾಚರಣೆ ಮಾಡಿದ್ದರು. ಗೌತಮ್ ಗಂಭೀರ್ ಪಂದ್ಯ ಮುಕ್ತಾಯವಾದ ಬಳಿಕ ಕ್ರೀಡಾಂಗಣದಲ್ಲಿ ಆರ್‌ಸಿಬಿ.. ಆರ್‌ಸಿಬಿ... ಎಂದು ಕೂಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳತ್ತ ನೋಡಿ ಶ್... ಎಂದು ಕೈಸನ್ನೆ ಮಾಡಿದ್ದರು.

ಗೌತಮ್ ಗಂಭೀರ್ ಈ ಸೆಲೆಬ್ರೇಷನ್ ತೀರ ಅತಿರೇಕ ಎನಿಸಿತ್ತು. ಓರ್ವ ಮೆಂಟರ್ ಆಗಿ ಗಂಭೀರ್ ಅಭಿಮಾನಿಗಳ ಜತೆ ನಡೆದುಕೊಂಡಿದ್ದ ರೀತಿ ಖಂಡನೆ ಪಡೆದುಕೊಂಡಿತ್ತು. ಗೌತಮ್ ಗಂಭೀರ್ ಈ ರೀತಿ ನಡೆದುಕೊಂಡ ದಿನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ನಮ್ಮ ಕಿಂಗ್ ಇದನ್ನೆಲ್ಲಾ ನೋಡುತ್ತಿದ್ದಾರೆ, ನಿಮಗೆಲ್ಲಾ ಮುಂದಿನ ಪಂದ್ಯದಲ್ಲಿ ಸರಿಯಾಗಿ ವಾಪಸ್ ಕೊಡ್ತಾರೆ ಎಂದು ಕಾಮೆಂಟ್ ಮಾಡಿದ್ದರು.

ಅಭಿಮಾನಿಗಳ ಊಹೆಯಂತೆ ವಿರಾಟ್‌ ಕೊಹ್ಲಿ ಗೌತಮ್ ಗಂಭೀರ್‌ಗೆ ಅದೇ ರೀತಿ ಉತ್ತರಿಸಿದ್ದಾರೆ. ಕೃನಾಲ್ ಪಾಂಡ್ಯ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ ಗೌತಮ್ ಗಂಭೀರ್ ಹಾಗೆಯೇ ಕೀಪ್ ಸೈಲೆನ್ಸ್ ಸೆಲೆಬ್ರೇಷನ್ ಮಾಡಿದ್ದಾರೆ. ಆದರೆ "ನಾನು ನಿಮ್ಮನ್ನು ಇಷ್ಟಪಡುತ್ತೇನೆ. ನಿಮ್ಮ ಬಾಯಿಯನ್ನು ಮುಚ್ಚಿಸಲು ನನಗೆ ಇಷ್ಟವಿಲ್ಲ" ಎಂದು ಕೈಸನ್ನೆ ಮಾಡುವ ಮೂಲಕ ವಿರಾಟ್ ಕೊಹ್ಲಿ ಸೇಡನ್ನು ಅರ್ಥಪೂರ್ಣವಾಗಿ ತೀರಿಸಿಕೊಂಡಿದ್ದಾರೆ.

ನಿರೀಕ್ಷೆಯಂತೆ ಸೇಡು ತೀರಿಸಿಕೊಂಡ ವಿರಾಟ್ ಕೊಹ್ಲಿ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹಾಗೂ ವಾಟ್ಸಪ್ ಸ್ಟೇಟಸ್‌ಗಳಲ್ಲಿ ಹರಿದಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.

Story first published: Monday, May 1, 2023, 23:09 [IST]
Other articles published on May 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+