Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಇನ್ನೂ ಮುಗಿದಿಲ್ಲ ಕೊಹ್ಲಿ vs ಲಕ್ನೋ ಜಗಳ; ಸ್ಟೇಡಿಯಂ ಹೊರಗೂ ಲಕ್ನೋಗೆ ಏಟು ಕೊಟ್ಟ ಕೊಹ್ಲಿ

IPL 2023: Virat Kohli slams Lucknow Super Giants by praising Gujarat Titans players

ಮೇ 1ರಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಐಪಿಎಲ್ ಪಂದ್ಯದ ಜಗಳದ ಕಿಚ್ಚು ಸದ್ಯಕ್ಕೆ ಆರುವ ಹಾಗೆ ಕಾಣುತ್ತಿಲ್ಲ.

ಹೌದು, ಅಂದಿನ ಪಂದ್ಯದ ವೇಳೆಯೇ ವಿರಾಟ್ ಕೊಹ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಗೌತಮ್ ಗಂಭೀರ್ ಹಾಗೂ ಆಟಗಾರರ ಜತೆ ಅಗ್ರೆಸಿವ್ ಆಗಿ ನಡೆದುಕೊಂಡಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಗೆಲುವನ್ನು ಕಂಡಿದ್ದಾಗ ಗೌತಮ್ ಗಂಭೀರ್ ಕ್ರೀಡಾಂಗಣದಲ್ಲಿ ನೆರೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಸದ್ದು ಮಾಡದಂತೆ ಶ್ ಎಂದು ಸನ್ನೆ ಮೂಲಕ ಹೇಳಿದ್ದರು.

ಇದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಕೊಹ್ಲಿ ಲಕ್ನೋದಲ್ಲಿ ಇತ್ತಂಡಗಳು ಮುಖಾಮುಖಿಯಾದ ಈ ಎರಡನೇ ಪಂದ್ಯದಲ್ಲಿ ಟಾಂಗ್ ನೀಡಿದ್ದರು. ಇದೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ನವೀನ್ ಉಲ್ ಹಕ್ ಜತೆ ಸಹ ವಿರಾಟ್ ಕೊಹ್ಲಿ ಜಗಳ ಮಾಡಿಕೊಂಡಿದ್ದರು‌.

ಮೊಹಮ್ಮದ್ ಸಿರಾಜ್ ಹಾಗೂ ನವೀನ್ ಉಲ್ ಹಕ್ ನಡುವಿನ ವಾಕ್ಸಮರಕ್ಕೆ ವಿರಾಟ್ ಕೊಹ್ಲಿ ಮಧ್ಯ ಪ್ರವೇಶ ಮಾಡಿದ ಕಾರಣ ಈ ಜಗಳ ಏರ್ಪಟ್ಟಿತ್ತು‌. ಪಂದ್ಯದ ವೇಳೆ ಮಾತ್ರವಲ್ಲದೆ ಪಂದ್ಯದ ನಂತರ ಶೇಕ್ ಹ್ಯಾಂಡ್ ಮಾಡುವಾಗಲೂ ಇಬ್ಬರೂ ಗಟ್ಟಿಯಾಗಿ ಕೈ ಕೈ ಹಿಡಿದುಕೊಂಡು ಜಗಳ ಮಾಡಿಕೊಂಡಿದ್ದರು.

ಇಷ್ಟೆಲ್ಲಾ ಆದ ಬಳಿಕ ಈ ಜಗಳ ದೊಡ್ಡ ವಿವಾದವಾಗಿ ಹೊರಹೊಮ್ಮಿತು. ಅನೇಕ ದಿಗ್ಗಜ ಕ್ರಿಕೆಟಿಗರು ಇದರ ಬಗ್ಗೆ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಹಾಗೂ ಜಗಳದಲ್ಲಿ ಭಾಗಿಯಾಗಿದ್ದರು ಆಟಗಾರರಿಗೆ ಬುದ್ದಿ ಹೇಳಿದ್ದರು‌.

ಅಲ್ಲದೇ ಜಗಳವಾಡಿದ್ದ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಹಾಗೂ ನವೀನ್ ಉಲ್ ಹಕ್ ಮೂವರಿಗೂ ಬಿಸಿಸಿಐ ದಂಡದ ಬರೆ ಎಳೆದಿತ್ತು. ಇಷ್ಟೆಲ್ಲಾ ನಡೆದ ಮೇಲೂ ಸಹ ಈ ಮೂವರ ನಡುವಿನ ಜಗಳ ತಣ್ಣಗಾಗಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಸ್ಟೋರಿ ಹಾಗೂ ಪೋಸ್ಟ್ ಹಂಚಿಕೊಳ್ಳುವ ಮೂಲಕ ಜಗಳ ಮುಂದುವರಿಸಿದ್ದಾರೆ. ಗೌತಮ್ ಗಂಭೀರ್ ಜತೆ ಫೋಟೊ ಹಂಚಿಕೊಂಡಿದ್ದ ನವೀನ್ ಉಲ್ ಹಕ್ 'ಯಾರ ಜೊತೆ ಹೇಗೆ ನಡೆದುಕೊಳ್ಳಬೇಕು ಎನಿಸುತ್ತೊ ಅದೇ ರೀತಿ ನಡೆದುಕೊಳ್ಳಿ, ಯಾವ ರೀತಿ ಮಾತನಾಡಬೇಕು ಎನಿಸುತ್ತೋ ಅದೇ ರೀತಿ ಮಾತನಾಡಿ' ಎಂದು ಬರೆದುಕೊಂಡಿದ್ದರು‌.

ಈ ಮೂಲಕ ನವೀನ್ ಉಲ್ ಹಕ್ ಕೊಹ್ಲಿಗೆ ಪರೋಕ್ಷವಾಗಿ ಟಾಂಗ್ ನೀಡಿ ಜಗಳವನ್ನು ಮುಂದುವರಿಸಿದರು. ಇದಕ್ಕೆ ಪ್ರತ್ಯುತ್ತರವಾಗಿ ವಿರಾಟ್ ಕೊಹ್ಲಿ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಟಾಂಗ್ ಕೊಟ್ಟಿದ್ದಾರೆ‌.

ಹೌದು, ನಿನ್ನೆ ( ಮೇ 7 ) ನಡೆದ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಗುಜರಾತ್ ಟೈಟನ್ಸ್ ತಂಡದ ಆಟಗಾರರ ಪ್ರದರ್ಶನವನ್ನು ಹೊಗಳಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೊ ಹಂಚಿಕೊಂಡು ಬರೆದುಕೊಳ್ಳುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಸೋಲುತ್ತಿದ್ದನ್ನು ಸಂಭ್ರಮಿಸಿದ್ದಾರೆ.

virat kohli

43 ಎಸೆತಗಳಲ್ಲಿ 81 ರನ್ ಬಾರಿಸಿ ಆಶ್ಚರ್ಯಕರ ಆಟವನ್ನಾಡಿದ ವೃದ್ಧಿಮಾನ್ ಸಹಾ ಆಟವನ್ನು ಹೊಗಲಿದ ಕೊಹ್ಲಿ ಈತ ಎಂಥ ಆಟಗಾರ ಎಂದು ಬರೆದುಕೊಂಡಿದ್ದರು‌. ಅಲ್ಲದೇ ಪಂದ್ಯದ ವೇಳೆ ರಶೀದ್ ಖಾನ್‌ ಹಿಡಿದ ಕಠಿಣ ಕ್ಯಾಚ್ ಅನ್ನು ಹೊಗಳಿ 'ನಾನು ನೋಡಿದ ಅತ್ಯುತ್ತಮ ಕ್ಯಾಚ್ ಗಳಲ್ಲಿ ಇದು ಒಂದು' ಎಂದು ಬರೆದುಕೊಂಡಿದ್ದರು‌.

ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತನಗೆ ಪರೋಕ್ಷವಾಗಿ ಪೋಸ್ಟ್ ಹಾಕಿ ಕೆಣಕಿದ್ದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ನವೀನ್ ಉಲ್ ಹಕ್ ವಿರುದ್ಧ ವಿರಾಟ್ ಕೊಹ್ಲಿ ಸೇಡು ತೀರಿಸಿಕೊಂಡರು.

Story first published: Monday, May 8, 2023, 9:07 [IST]
Other articles published on May 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+