IPL 2024: ಇಬ್ಬರು ಹಿಡಿದ ಉತ್ತಮ ಕ್ಯಾಚ್: ಸಖತ್ ವೈರಲ್ ವಿಡಿಯೋ
IPL 2024 ರ ಮೊದಲ ಪಂದ್ಯ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಚೆನ್ನೈ ತಂಡದ ಕಟರ್ ಸ್ಪೆಷಲಿಸ್ಟ್ ಮುಸ್ತಾಫಿಜರ್ ರೆಹಮಾನ್ ಅಮೋಘ ದಾಳಿ ನಡೆಸಿ ಪವರ್ ಪ್ಲೇನಲ್ಲಿ ಅಬ್ಬರಿಸಿದರು. ಇವರ ಮಾರಕ ದಾಳಿಗೆ ಆರ್‌ಸಿಬಿ ಬ್ಯಾಟರ್ ರನ್‌ಗಳಿಸಲು ಹರಸಾಹಸ ಪಟ್ಟರು.
ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 12 ಸಾವಿರ ರನ್ ಪೂರೈಸಿ ಭರವಸೆ ಮೂಡಿಸಿದ್ದರು. ಈ ವೇಳೆ ಅದಾಗಲೇ ಮೂವರು ಭರವಸೆ ಬ್ಯಾಟರ್‌ಗಳು ಪೆವಿಲಿಯನ್ ಹಾದಿ ಹಿಡಿದು ಆಗಿತ್ತು. ಅದಾಗಲೇ ಲಯಕ್ಕೆ ಮರಳಿರುವ ಸೂಚನೆ ನೀಡಿದ್ದ ವಿರಾಟ್ ಕೊಹ್ಲಿ ಅವರಿಗೆ ಖೆಡ್ಡಾ ತೋಡಲು ಚೆನ್ನೈ ಪ್ಲ್ಯಾನ್ ಮಾಡಿ ಆಗಿತ್ತು. ಇದನ್ನು ಕಾರ್ಯರೂಪಕ್ಕೆ ತಂದವರು ಮುಸ್ತಾಫಿಜುರ್ ರೆಹಮಾನ್..

ಆಗಿದ್ದು ಏನು?
ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿಗೆ ಚೆನ್ನೈ ಬೌಲರ್ ಖೆಡ್ಡ ತೋಡಿದರು. ಮುಸ್ತಾಫಿಜುರ್ ಎಸೆದ ಸ್ಲೋವರ್ ಒನ್‌ಗೆ ಉತ್ತರಿಸುವಲ್ಲಿ ಕೊಹ್ಲಿ ವಿಫಲರಾದರು. ವಿರಾಟ್, ರೆಹಮಾನ್ ಎಸೆತವನ್ನು ಲಾಂಗ್ ಸೈಡ್‌ನಲ್ಲಿ ಬಾರಿಸಿದರು. ಇವರು ಇದೇ ಧಾಟಿಯಲ್ಲಿ ಹಿಂದಿನ ಓವರ್‌ನಲ್ಲೇ ಸಿಕ್ಸರ್ ಬಾರಿಸಿದ್ದರು. ಎಲ್ಲರೂ ಇದೇ ಧಾಟಿಯಲ್ಲಿ ಮತ್ತೊಂದು ಸಿಕ್ಸರ್ ಎಂದೇ ಭಾವಿಸಿದ್ದರು. ಆದರೆ ಬೌಂಡರಿ ಲೈನ್‌ಲ್ಲಿ ಆಗಿದ್ದೇ ಬೇರೆ.
ಬೌಂಡರಿ ಲೈನ್‌ನಲ್ಲಿ ಅಜಿಂಕ್ಯ ರಹಾನೆ ತಮ್ಮ ಚಾಣಕ್ಯತನ ಪ್ರದರ್ಶಿಸಿದರು. ವಿರಾಟ್ ಕೊಹ್ಲಿಯನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ರಹಾನೆ ಮಹತ್ವದ ಕೊಡುಗೆ ನೀಡಿದರು. ರಹಾನೆ ಡೈವ್ ಮಾಡಿ ಚೆಂಡನ್ನು ಹಿಡಿದರು. ಆದರೆ, ಇವರು ಬೌಂಡರಿ ಲೈನ್‌ಗೆ ಟಚ್ ಆಗುವ ಭೀತಿ ಕಂಡಿತು. ಇದರಿಂದ ಚೆಂಡನ್ನು ಪಕ್ಕದಲ್ಲೇ ಇದ್ದ ಇನ್ನೋಬ್ಬ ಫೀಲ್ಡರ್‌ಗೆ ಚೆಂಡನ್ನು ಎಸೆದರು. ವಿರಾಟ್ ಔಟ್ ಆಗಿ ಪೆವಿಲಿಯನ್ ಸೇರಿದರು. ಕೊಹ್ಲಿ ಕ್ಯಾಚ್ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿರಾಟ್ ಕೊಹ್ಲಿ ಬ್ಯಾಟ್ ಮತ್ತು ಬಾಲ್ ನ ಟೈಮಿಂಗ್ ಸರಿಯಿಲ್ಲದ ಕಾರಣ ಚೆಂಡು ಬೌಂಡರಿ ಗೆರೆ ದಾಟಲು ಸಾಧ್ಯವಾಗಲಿಲ್ಲ. ಬಾಲ್ ಬೌಂಡರಿ ಕಡೆಗೆ ಹೋಗುವುದನ್ನು ನೋಡಿದ ಅಜಿಂಕ್ಯ ರಹಾನೆ ಓಡಿ ಸ್ಲೈಡಿಂಗ್ ಮಾಡುವಾಗ ಕ್ಯಾಚ್ ತೆಗೆದುಕೊಂಡರು, ಆದರೆ ಸ್ಲೈಡಿಂಗ್ ಮಾಡುವಾಗ ಅವರು ಬೌಂಡರಿ ಗೆರೆಯ ಹತ್ತಿರ ಚಲಿಸಲು ಪ್ರಾರಂಭಿಸುತ್ತಾರೆ. ಇದನ್ನು ನೋಡಿದ ಅವರು ಪಕ್ಕದಲ್ಲೇ ನಿಂತಿದ್ದ ರಚಿನ್ ರವೀಂದ್ರರತ್ತ ಚೆಂಡನ್ನು ಎಸೆಯುತ್ತಾರೆ. ರಾಚಿನ್ ಚೆಂಡನ್ನು ಹಿಡಿಯುವ ಮೂಲಕ ಕ್ಯಾಚ್ ಅನ್ನು ಪೂರ್ಣಗೊಳಿಸಿದರು. ಇಲ್ಲಿ ವಿಡಿಯೋ ನೋಡಿ...
ಕೊಹ್ಲಿ ಮೂಲಕ ಆರ್‌ಸಿಬಿ 12ನೇ ಓವರ್‌ನಲ್ಲಿ 77 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತು. ಸುಮಾರು ಎರಡು ತಿಂಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದ ವಿರಾಟ್ ಕೊಹ್ಲಿ 20 ಎಸೆತಗಳಲ್ಲಿ 1 ಸಿಕ್ಸರ್ ನೆರವಿನಿಂದ 21 ರನ್ ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications