For Quick Alerts
ALLOW NOTIFICATIONS  
For Daily Alerts
 

IPL 2024: ಉದ್ಘಾಟನಾ ಪಂದ್ಯಕ್ಕೆ ಭರ್ಜರಿ ಸಿದ್ಧತೆ: CSK ವಿರುದ್ಧ RCB ಪ್ಲೇಯಿಂಗ್‌ ಇಲೆವೆನ್‌ ಹೇಗಿರಲಿದೆ? ಇಲ್ಲಿದೆ ವರದಿ

IPL 2024ಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸಲ ಕಪ್‌ ಗೆಲುವಿನ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ಆರ್‌ಸಿಬಿ ಅಖಾಡಕ್ಕೆ ಇಳಿಯಲಿದೆ. ಆದರೆ ಈ ಬಾರಿ ಆರ್‌ಸಿಬಿ ಮುಂದೆ ಆರಂಭದಲ್ಲಿ ದೊಡ್ಡ ಸವಾಲು ಎದುರಾಗಿದೆ. ಐದು ಬಾರಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿರು ಚೆನ್ನೈ ಸವಾಲನ್ನು ಆರ್‌ಸಿಬಿ ಎದುರಿಸಲಿದೆ. ಈ ಪಂದ್ಯದಲ್ಲಿ ಚೆನ್ನೈನ ಚಿಪಾಕ ಅಂಗಳದಲ್ಲಿ ನಡೆಯಲಿದೆ.

ಐಪಿಎಲ್‌ನಲ್ಲಿ ಇಲ್ಲಿಯವರೆಗೂ ಒಂದೇ ಒಂದು ಕಪ್‌ ಎತ್ತದ ಆರ್‌ಸಿಬಿ, ಉದ್ಘಾಟನಾ ಪಂದ್ಯದಲ್ಲಿ ಐದು ಬಾರಿ ಕಪ್‌ ಎತ್ತಿರುವ ಸಿಎಸ್‌ಕೆ ವಿರುದ್ಧ ಆಡಲಿದೆ. ಆದ್ದರಿಂದ ಚೆನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ ಆರ್‌ಸಿಬಿಯ ಪ್ಲೇಯಿಂಗ್ ಇಲೆವೆನ್ ಏನಾಗಬಹುದು ಇಂಬ ಪ್ರಶ್ನೆ ಎದ್ದಿರುವುದು ಸಹಜ. ಅದಕ್ಕೆ ಈಗಿನ ಆಟಗಾರರ ಪ್ರದರ್ಶನ ನೋಡಿ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

IPL 2024 Big build-up for opening match What will RCB s playing XI look like against CSK

ಸ್ಟಾರ್‌ ಓಪನರ್

ಆರ್‌ಸಿಬಿ ತಂಡದ ಆರಂಭಿಕರಾದವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ತಂಡಕ್ಕೆ ಬಿಗ್‌ ಓಪನಿಂಗ್ ನೀಡಬೇಕಿದೆ. ಈ ಇಬ್ಬರೂ ಆಟಗಾರರು ಬೆಸ್ಟ್‌ ಪರ್ಫಾಮೆನ್ಸ್‌ ನೀಡಿದ್ದೇ ಆದಲ್ಲಿ ತಂಡಕ್ಕೆ ಅನುಕೂಲವಾಗುತ್ತದೆ.. ನಂತರ ಮುಂಬೈನಿಂದ 17.5 ಕೋಟಿ ರೂ.ಗೆ ವಹಿವಾಟು ನಡೆಸಿದ್ದ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಮಿಡ್ಲ್‌ ಆರ್ಡರ್‌ ಮೇಲೆ ಭರವಸೆ

ಇತ್ತೀಚಿಗೆ ಅಷ್ಟೇ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿರುವ ರಜತ್ ಪಾಟಿದಾರ್ ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ಪಾಟಿದಾರ್ ಐಪಿಎಲ್ 2022 ರಲ್ಲಿ ತಂಡಕ್ಕಾಗಿ ಅದ್ಭುತ ಪ್ರದರ್ಶನ ನೀಡಿದ್ದರು. ನಂತರ ಬಿಗ್ ಶಾಟ್‌ ಹೊಡೆಯುವ ಗ್ಲೆನ್ ಮ್ಯಾಕ್ಸ್ ವೆಲ್ ಐದನೇ ಕ್ರಮಾಂಕದಲ್ಲಿ ಕಾಣಬಹುದಾಗಿದೆ.

IPL 2024 Big build-up for opening match What will RCB s playing XI look like against CSK

ಮ್ಯಾಕ್ಸ್‌ವೆಲ್ ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ತಿರುಗಿಸುವ ಸಾಮರ್ಥ್ಯ ಹೊಂದಿದ್ದಾರೆ. ನಂತರ ತಂಡದ ವಿಶ್ವಾಸಾರ್ಹ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಆರನೇ ಕ್ರಮಾಂಕದಲ್ಲಿ ಆಡಬಹುದು. ಕೆಳ ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್ ಲೊಮೊರೊರ್ 7ನೇ ಕ್ರಮಾಂಕದಲ್ಲಿ ಆಡಬಹುದು. ಲೊಮ್ರೊರ್‌ಗೆ ಕೊನೆಯ ಋತುವಿನ 12 ಪಂದ್ಯಗಳಲ್ಲಿ ಕೇವಲ 135 ರನ್ ಗಳಿಸಿದ್ದರು.

ಜೋಸೆಫ್‌ ತೋಳ್ಬಲ

ಬೌಲಿಂಗ್ ವಿಭಾಗವನ್ನು ವೆಸ್ಟ್ ಇಂಡೀಸ್ ವೇಗದ ಬೌಲರ್ ಅಲ್ಜಾರಿ ಜೋಸೆಫ್ ಮುನ್ನಡೆಸಲಿದ್ದಾರೆ. ಐಪಿಎಲ್ 2024ರ ಕಿರು ಹರಾಜಿನಲ್ಲಿ ಜೋಸೆಫ್ ಅವರನ್ನು ಆರ್‌ಸಿಬಿ 11.50 ಕೋಟಿ ರೂ.ಗೆ ಬೃಹತ್ ಮೊತ್ತಕ್ಕೆ ಖರೀದಿಸಿತ್ತು. ಆದಾಗ್ಯೂ, ಜೋಸೆಫ್ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ವೇಗದ ಬೌಲರ್ ಲಾಕ್ ಫರ್ಗುಸನ್ 8, ಕನ್ನಡಿಗ ವಿಜಯ್ ಕುಮಾರ್ ವೈಶಾಖ್ 9 ನೇ ಸ್ಥಾನದಲ್ಲಿ ಆಡಿದರೆ ಸೂಕ್ತ. ಸಿರಾಜ್‌ 10, ನಂತರ, ಯಶ್ ದಯಾಳ್ ಅಥವಾ ಆಕಾಶ್ ದೀಪ್ ಅವರನ್ನು 11 ನೇ ಸ್ಥಾನದಲ್ಲಿ ಆಡಬಹುದು

RCB- ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಕ್ಯಾಮೆರಾನ್ ಗ್ರೀನ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಅಲ್ಜಾರಿ ಜೋಸೆಫ್/ಲಾಕಿ ಫರ್ಗುಸನ್, ವಿಜಯ್ ಕುಮಾರ್ ವೈಶಾಖ್, ಮೊಹಮ್ಮದ್ ಸಿರಾಜ್ ಮತ್ತು ಯಶ್ ದಯಾಳ್/ ಆಕಾಶ ದೀಪ.

Story first published: Monday, March 11, 2024, 9:00 [IST]
Other articles published on Mar 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+