For Quick Alerts
ALLOW NOTIFICATIONS  
For Daily Alerts
 

IPL 2024: ಐಪಿಎಲ್‌ ಸುತ್ತ ಬೆಳೆದಿದೆ ವಿವಾದ ಹುತ್ತ: ಇಲ್ಲದೆ ನೋಡಿ ಎಂದು ಮರೆಯದ 5 ವಿವಾದಗಳು

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್ ಎಂದೇ ಖ್ಯಾತಿ ಪಡೆದಿರುವ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಐಪಿಎಲ್‌ ಅಭಿಮಾನಿಗಳ ಮನದಲ್ಲಿ ಸಾಕಷ್ಟು ಖುಷಿ ನೀಡಿದೆ. ಇನ್ನು ಹಲವು ವಿವಾದಗಳ ಮೂಲಕವೇ ಎಲ್ಲರ ಚಿತ್ತ ಕದ್ದಿದೆ. ಈಗಾಗಲೇ 16 ಐಪಿಎಲ್ ಆವೃತ್ತಿಗಳು ನಡೆದಿದ್ದು, ಹಲವು ವಿವಾದಗಳು ಅಂಗಳದಲ್ಲಿ ನಡೆದಿವೆ. ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆನಪಿನಲ್ಲಿರುವ ವಿವಾದಗಳ ಬಗ್ಗೆ ವರದಿ ಇಲ್ಲಿದೆ.

ಐಪಿಎಲ್‌ ಅಖಾಡದಲ್ಲಿ ಕ್ರಿಕೆಟ್ ಆಡುವಾಗ ಆಟಗಾರರಿಗೆ ಗೆಲುವೊಂದೆ ಕಾಣುತ್ತಾ ಇರುತ್ತದೆ. ತಮ್ಮದೇ ಸ್ನೇಹಿತರಾದರೂ ಸಹ ಅವರ ವಿರುದ್ಧ ಅಖಾಡದಲ್ಲಿ ತೊಡೆ ತಟ್ಟಿ ಬಿಡ್ತಾರೆ. ಒಂದೇ ಸೂರಿನಲ್ಲಿ ಹಲವು ದೇಶದ ಸ್ಟಾರ್‌ಗಳು ಕೂಡಿದ ಮೇಲೆ ವಿವಾದಗಳು ಕಾಣಿಸಿಕೊಳ್ಳದೆ ಇರಲು ಸಾಧ್ಯವೇ ಇಲ್ಲ. ಐಪಿಎಲ್‌ನಲ್ಲಿ ಎಂದು ಮರೆಯದ ಕಪ್ಪು ಚುಕ್ಕೆ ಅಂದರೆ ಅದು 2013ರಲ್ಲಿ ನಡೆದಿದ್ದ ಸ್ಟಾಟ್ ಫಿಕ್ಸಿಂಗ್‌..

IPL 2024 Controversy Grows Around IPL 5 Controversies You Shouldn t See Without

ಸ್ಪಾಟ್ ಫಿಕ್ಸಿಂಗ್

2013 ರಲ್ಲಿ ಐಪಿಎಲ್ ಮಾತ್ರವಲ್ಲದೆ ಕ್ರಿಕೆಟ್‌ನ ದೊಡ್ಡ ವಿವಾದಗಳಲ್ಲಿ ಒಂದು. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಎಸ್‌ಕೆ ತಂಡದ ಗುರುನಾಥ್ ಮೇಯಪ್ಪನ್ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕ ರಾಜ್ ಕುಂದ್ರಾ ಅವರ ಹೆಸರು ಕೇಳಿಬಂದಿತ್ತು. ಆ ಸಮಯದಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದ ಎಸ್ ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಅವರನ್ನೂ ದೆಹಲಿ ಪೊಲೀಸರು ಬಂಧಿಸಿದ್ದರು. ಒಂದೆಡೆ, ಈ ಮೂವರು ಆಟಗಾರರಿಗೆ ಕ್ರಿಕೆಟ್ ಆಡದಂತೆ ಆಜೀವ ನಿಷೇಧ ಹೇರಲಾಗಿತ್ತು, ಆದರೆ ಇದೀಗ ಬಿಸಿಸಿಐ ಅದನ್ನು ತೆಗೆದುಹಾಕಿದೆ. ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಅನ್ನು 2 ಆವೃತ್ತಿಗೆ ನಿಷೇಧ ಹೇರಿತ್ತು.

IPL 2024 Controversy Grows Around IPL 5 Controversies You Shouldn t See Without

ಶ್ರೀಶಾಂತ್ ಗೆ ಕಪಾಳಮೋಕ್ಷ

IPL ನ ಮೊದಲ ಆವೃತ್ತಿಯಲ್ಲಿ ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ಪರ ಮತ್ತು ವೇಗಿ ಎಸ್‌.ಶ್ರೀಶಾಂತ್ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿದ್ದರು. ಆ ಸಮಯದಲ್ಲಿ, ಮುಂಬೈ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ಹರ್ಭಜನ್ ತಮ್ಮ ತಂಡವನ್ನು ಮುನ್ನಡೆಸುತ್ತಿದ್ದರು. ಆದರೆ ಅವರ ತಂಡವು 66 ರನ್ಗಳಿಂದ ಸೋತಿತು. ಪಂದ್ಯದ ನಂತರ ಹಸ್ತಲಾಘವ ಮಾಡುವಾಗ ಹರ್ಭಜನ್, ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದು ವಿಷಯ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಆ ಘಟನೆಗಾಗಿ, ಹರ್ಭಜನ್ ಅವರನ್ನು 5 ಏಕದಿನ ಪಂದ್ಯಗಳಿಗೆ ಬಿಸಿಸಿಐ ನಿಷೇಧಿಸಿತು. ಅಲ್ಲದೆ, ಹರ್ಭಜನ್ ಶ್ರೀಶಾಂತ್ ಬಳಿ ಕ್ಷಮೆ ಕೇಳಿದ್ದರು.

IPL 2024 Controversy Grows Around IPL 5 Controversies You Shouldn t See Without

ಶಾರುಖ್ ಖಾನ್ ಸುತ್ತ ವಿವಾದ

2012ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತ್ತು. ಪಂದ್ಯ ಮುಗಿದ ನಂತರ ಶಾರುಖ್ ಖಾನ್ ಹಾಗೂ ಅವರ ಮಗಳು ಕೂಡ ಮೈದಾನಕ್ಕೆ ಬಂದಿದ್ದರು. ಸುಹಾನಾ ಖಾನ್ ಜೊತೆ ಸೆಕ್ಯುರಿಟಿ ಗಾರ್ಡ್ ಮಾತಿನ ಚಕಮಕಿ ನಡೆಯಿತು. ಈ ಕಾರಣದಿಂದಾಗಿ, ಬಾಲಿವುಡ್ ಕಿಂಗ್ ಸೆಕ್ಯುರಿಟಿ ಗಾರ್ಡ್ ಜೊತೆ ಘರ್ಷಣೆ ನಡೆದಿತ್ತು. ಈ ಘಟನೆಗಾಗಿ ಅವರನ್ನು 5 ವರ್ಷಗಳ ಕಾಲ ವಾಂಖೆಡೆ ಸ್ಟೇಡಿಯಂನಿಂದ ನಿಷೇಧಿಸಲಾಯಿತು.

IPL 2024 Controversy Grows Around IPL 5 Controversies You Shouldn t See Without

ಗಂಭೀರ್-ವಿರಾಟ್ ವಾಗ್ವಾದ

ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತುಂಬಾ ಆಕ್ರಮಣಕಾರಿ ಸ್ವಭಾವದ ಆಟಗಾರರು. ಅವರ ನಡುವೆ ಮೊದಲ ಮುಖಾಮುಖಿ 2013 ರಲ್ಲಿ ನಡೆಯಿತು. RCB vs KKR ಪಂದ್ಯದಲ್ಲಿ ಲಕ್ಷ್ಮೀಪತಿ ಬಾಲಾಜಿ ಎಸೆತದಲ್ಲಿ ಕೊಹ್ಲಿ ಔಟಾದರು. ನಂತರ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಆದರೆ ರಜತ್ ಭಾಟಿಯಾ ಈ ವಿಷಯದ ಬಗ್ಗೆ ಬೆಳಕು ಚೆಲ್ಲುತ್ತಾ, ಈ ಹೋರಾಟವು ಆಟದ ಒಂದು ಭಾಗ ಎಂದು ಹೇಳಿದ್ದರು. 2023 ರಲ್ಲಿ RCB vs LSG ಪಂದ್ಯದ ಸಮಯದಲ್ಲಿ ಅವರ ಎರಡನೇ ವಾಗ್ವಾದ ನಡೆಯಿತು. ಪಂದ್ಯದ ನಂತರ ಕೈಲ್ ಮೈಯರ್ಸ್ ಅವರನ್ನು ಇನ್ನೊಂದು ಬದಿಗೆ ಕಳುಹಿಸಿದ ನಂತರ ಗೌತಮ್ ಗಂಭೀರ್ ಕೊಹ್ಲಿಯೊಂದಿಗೆ ತೀವ್ರ ವಾಗ್ವಾದ ನಡೆಸಿದರು. ಈ ಪಂದ್ಯವು ಕೊಹ್ಲಿ ಮತ್ತು ನವೀನ್ ಉಲ್-ಹಕ್ ನಡುವಿನ ತೀವ್ರ ವಾಗ್ವಾದಕ್ಕೆ ಹೆಸರುವಾಸಿ.

IPL 2024 Controversy Grows Around IPL 5 Controversies You Shouldn t See Without

ಮಂಕಡಿಂಗ್ ವಿವಾದ

2019 ರಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ ನಡೆದಿತ್ತು. ಅಶ್ವಿನ್ ಅವರ ಓವರ್ ಬೌಲ್ ಮಾಡಲು ಬಂದರು, ಆದರೆ ಬಟ್ಲರ್ ಅವರು ಚೆಂಡನ್ನು ಬೌಲ್ ಮಾಡುವ ಮೊದಲು ಕ್ರೀಸ್ ದಾಟಿದ್ದರು. ಆದ್ದರಿಂದ ಅಶ್ವಿನ್ ಮಂಕಾಡಿಂಗ್ ಮಾಡಿ ಬೇಲ್ಸ್ ಎಗಿರುಸಿದರು. ಫೀಲ್ಡ್ ಅಂಪೈರ್ ನಿರ್ಧಾರವನ್ನು ಥರ್ಡ್ ಅಂಪೈರ್‌ಗೆ ನೀಡಿದರು. TV ಅಂಪೈರ್‌ ಔಟ್ ಎಂದು ನೀಡಿದರು. ಈ ತೀರ್ಪು ಭಾರೀ ವಿವಾದಕ್ಕೆ ಕಾರಣವಾಗಿತ್ತು.

Story first published: Thursday, March 14, 2024, 8:01 [IST]
Other articles published on Mar 14, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+