ಐಪಿಎಲ್ 2024 ಆರಂಭಕ್ಕೂ ಮುನ್ನವೇ ಮಹತ್ವ ನಿರ್ಧರವನ್ನು ತೆಗೆದುಕೊಂಡಿದೆ. ಅವರ ತಂಡದ ಯಶಸ್ವಿ ನಾಯಕ ಎಂದೇ ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಅವರ ಬದಲಿಗೆ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಅವರಿಗೆ ಪಟ್ಟವನ್ನು ಕಟ್ಟಲಾಗಿದೆ. ಏನು ಎರಡು ವರ್ಷದ ಹಳೆಯ ಕಥೆ ಮತ್ತೆ ಪುನಾರವರ್ತಿ ಆಗುತ್ತದಾ ಎಂಬ ಭಯ ಅಭಿಮಾನಿಗಳಿಗೆ ಕಾಡುತ್ತಿದೆ.
ಕಳೆದ ಎರಡು ವರ್ಷದ ಹಿಂದೆ ಸಿಎಸ್‌ಕೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ನಾಯಕತ್ವವನ್ನು ಹಸ್ಥಾಂತರಿಸಿತು. ಈ ಋತುವಿನಲ್ಲಿ ಸಿಎಸ್‌ಕೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು, ಟೂರ್ನಿಯ ಮಧ್ಯದಲ್ಲೇ ಮಹೇಂದ್ರ ಸಿಂಗ್ ಧೋನಿಗೆ ಟೀಮ್ ಮ್ಯಾನೇಜ್ಮೆಂಟ್ ನಾಯಕತ್ವ ನೀಡಿತು. ಈ ಬಾರಿ ಸಿಎಸ್‌ಕೆ ತಂಡವನ್ನು ಯುವ ಆಟಗಾರ ಗಾಯಕ್ವಾಡ್ ತಂಡವನ್ನು ಮುನ್ನಡೆಸಲಿದ್ದು, ಈ ಬಾರಿ ಆರನೇ ಪ್ರಶಸ್ತಿ ರೇಸ್‌ನಲ್ಲಿ ಪ್ರಬಲ ಸ್ಪರ್ಧಿಗಳಲ್ಲಿ ಸಿಎಸ್‌ಕೆ ಕೂಡಾ ಒಂದು. ಅದು ಹೇಗೆ ಎಂಬ ಲೆಕ್ಕಾಚಾರಗಳು ಈಗಾಗಲೇ ಆರಂಭವಾಗಿವೆ.

ಈ ಬಾರಿ ಸಿಎಸ್‌ಕೆ ಹಾಲಿ ಚಾಂಪಿಯನ್ ಎಂಬ ಪಟ್ಟವನ್ನು ಹೊತ್ತುಕೊಂಡು ಕಣಕ್ಕೆ ಇಳಿಯಲಿದೆ. ಈಗ ಸತತ ಎರಡನೇ ಬಾರಿ ಟ್ರೋಫಿಗೆ ಮತ್ತಿಡಲು ಪ್ಲ್ಯಾನ್ ಮಾಡಿಕೊಂಡಿದೆ. ಚೆನ್ನೈ ತಂಡದಲ್ಲಿ ಸ್ಟಾರ್ ಆಟಗಾರರ ಗೊಂಚಲೇ ಇದೆ. ಸಿಎಸ್‌ಕೆ ತಂಡದಲ್ಲಿ ಅನುಭವಿ ಆಟಗಾರರು ಸಾಕಷ್ಟು ಇದ್ದಾರೆ. ತಂಡದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನೇ ಆಡಿದ ಹೆಚ್ಚು ಆಟಗಾರರು ಸಿಎಸ್‌ಕೆ ತಂಡದಲ್ಲಿದ್ದು, ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಅವರ ಚಿಂತೆ ಕೊಂಚ ದೂರ ಮಾಡಿದೆ. ಆದರೆ ರುತುರಾಜ್ ಈ ಆಟಗಾರರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆ ಮನೆ ಮಾಡಿದೆ.
ಮಹೇಂದ್ರ ಸಿಂಗ್ ಧೋನಿ ಎಂಬ ಆಟಗಾರನಿಗೆ ನಾಯಕತ್ವ ಪಟ್ಟ ಹೊಸದು ಅಲ್ಲವೇ ಅಲ್ಲ. ಆ ಭಾರವನ್ನೇ ವರ್ಷಗಟ್ಟಲೇ ಹೊತ್ತು ಆಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮೈದಾನದಲ್ಲಿ ಬೇರೆ ಪ್ಲೇಯರ್ ನಾಯಕರಾಗಿದ್ದರೂ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುವುದು ಮಾತ್ರ ವಿಕೆಟ್ ಹಿಂದೆ ನಿಂತಿರುವ ಧೋನಿ. ಹೀಗಾಗಿ ಗಾಯಕ್ವಾಡ್ ಅವರಿಗೆ ಚಿಂತೆ ಕಡಿಮೆ. ಇದೇ ಋತು ಧೋನಿ ಅವರಿಗೆ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿದೆ. ಹೀಗಾಗಿ ತಮ್ಮಲ್ಲಿನ ನಾಯಕತ್ವದ ಅನುಭವವನ್ನು ಧಾರೆ ಎರೆಯಲು ಮಾಹಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ನಾಯಕ ಗಾಯಕ್ವಾಡ್ ಅವರೊಂದಿಗೆ ಸಾಧ್ಯವಾದಷ್ಟು ತಮ್ಮ ಅನುಭವವನ್ನು ಹಂಚಿಕೊಳ್ಳಲು ಧೋನಿ ಬಯಸುತ್ತಾರೆ. ಆದರೆ, ಧೋನಿಯ ಅನುಭವದ ಸಂಪೂರ್ಣ ಲಾಭ ಪಡೆಯುವುದು ಗಾಯಕ್ವಾಡ್ ಅವರ ಜವಾಬ್ದಾರಿಯಾಗಿದೆ.

ರುತುರಾಜ್ ಗಾಯಕ್ವಾಡ್ 2019 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಭಾಗವಾಗಿದ್ದಾರೆ. ಅವರು 2020 ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರೂ. ಆದರೆ ಅವರು ದೀರ್ಘಕಾಲ ದಿಂದ ಧೋನಿ ನಾಯಕತ್ವದಲ್ಲಿ ಆಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ಎಂಎಸ್ ಧೋನಿ ನಾಯಕತ್ವದ ಬಗ್ಗೆ ಅವರಿಗೆ ಒಳ್ಳೆಯ ಹಿಡಿತ ಇದ್ದಂತೆ ಕಾಣುತ್ತದೆ. ಗಾಯಕ್ವಾಡ್ ನಾಯಕತ್ವದಲ್ಲಿ ಚೆನ್ನೈ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ. ಈ ಬಾರಿಯೂ ಸಿಎಸ್‌ಕೆ ಸ್ಥಿರ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲಲಿ ಎಂಬುದೇ ಅಭಿಮಾನಿಗಳ ಆಶಯ.