IPL 2024: ಸಿಎಸ್‌ಕೆಗೆ ಗಾಯದ ಬರೆ: ಸ್ಟಾರ್ ವೇಗಿಗೆ ಕಾಡುತ್ತಿದೆ ಗಾಯ
ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK)ಈ ಬಾರಿ ಐಪಿಎಲ್ 2024 ರಲ್ಲಿ ಧೋನಿ ಟೀಮ್ ಹಾಲಿ ಚಾಂಪಿಯನ್ ಆಗಿ ಪ್ರವೇಶಿಸಲಿದೆ. ಆದರೆ ಈ ಋತುವಿನ ಆರಂಭಕ್ಕೂ ಮುನ್ನ ಸಿಎಸ್‌ಕೆಗೆ ಪೆಟ್ಟು ಬಿದ್ದಿದೆ. ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನವೇ ಸಿಎಸ್‌ಕೆ ತಂಡಕ್ಕೆ ಆಘಾತವಾಗಿದೆ. ತಂಡದ ಸ್ಟಾರ್ ಬೌಲರ್ ಒಬ್ಬರು ಗಾಯಾಳು ಪಟ್ಟಿಗೆ ಸೇರಿಕೊಂಡಿದ್ದಾರೆ. ಗಾಯಕ್ಕೆ ತುತ್ತಾದ ಆಟಗಾರನನ್ನು ಮಹೇಂದ್ರ ಸಿಂಗ್ ಧೋನಿಯ 'ಟ್ರಂಪ್ ಕಾರ್ಡ್' ಎಂದು ಕರೆಯಲಾಗುತ್ತದೆ.
ಚೆನ್ನೈ ಪರ ಆಡುತ್ತಿರುವ ಶ್ರೀಲಂಕಾದ ವೇಗದ ಬೌಲರ್ ಮತಿಶಾ ಪತಿರಾನಾ ಗಾಯಗೊಂಡಿದ್ದಾರೆ. ಸದ್ಯ ಶ್ರೀಲಂಕಾ ತಂಡ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ನಡುವೆ ಎಲ್ಲಾ ಮೂರು T20 ಪಂದ್ಯಗಳ ಸರಣಿ ನಡೆಯುತ್ತಿದೆ. ಟಿ20 ಸರಣಿಯ ಎರಡು ಪಂದ್ಯಗಳು ನಡೆದಿದ್ದು, ಮೂರನೇ ಪಂದ್ಯ ಮಾರ್ಚ್ 09 ರಂದು ನಡೆಯಲಿದೆ.

ಆದರೆ ಮೂರನೇ ಪಂದ್ಯಕ್ಕೂ ಮುನ್ನ, ಗ್ರೇಡ್-1 ಮಂಡಿರಜ್ಜು ಗಾಯದಿಂದ ಹೊರಗುಳಿದಿರುವ ವೇಗದ ಬೌಲರ್ ಮತಿಶಾ ಪತಿರಾನ ರೂಪದಲ್ಲಿ ಶ್ರೀಲಂಕಾ ದೊಡ್ಡ ಹೊಡೆತ ಬಿದ್ದಿದೆ. ಪತಿರಾನ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಅಪ್‌ಡೇಟ್‌ನೀಡಿದೆ. "ಅವರು ಮೂರನೇ ಟಿ 20 ನಲ್ಲಿ ಆಯ್ಕೆಗೆ ಲಭ್ಯವಿರುವುದಿಲ್ಲ ಏಕೆಂದರೆ ಅವರ ಎಡಗಾಲಿನ ಗ್ರೇಡ್ -1 ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ." ಎರಡನೇ ಟಿ20 ವೇಳೆ ಬೌಲಿಂಗ್ ಮಾಡುವಾಗ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಆದರೆ, ಈಗ ಹೊರಬಿದ್ದಿರುವ ಒಂದೇ ಒಂದು ಅಪ್‌ಡೇಟ್ ಏನೆಂದರೆ ಪತಿರಾನಾ ಅವರನ್ನು ಮೂರನೇ ಟಿ20ಯಿಂದ ಹೊರಗಿಡಲಾಗಿದೆ. ಸದ್ಯಕ್ಕೆ ಅವರು ಎಷ್ಟು ದಿನ ಮೈದಾನದಿಂದ ಹೊರಗುಳಿಯುತ್ತಾರೆ ಅಥವಾ ಯಾವಾಗ ಅಂಗಳಕ್ಕೆ ಮರಳುತ್ತಾರೆ ಎಂಬುದರ ಕುರಿತು ಯಾವುದೇ ರೀತಿಯ ಅಧಿಕೃತ ಮಾಹಿತಿ ಇಲ್ಲ. ಇದು ಚೆನ್ನೈ ಸೂಪರ್ ಕಿಂಗ್ಸ್‌ಗೆ ಆತಂಕದ ವಿಷಯವಾಗಿರಬಹುದು. ಅವರು ಚೆನ್ನೈ ಪರ ಆಡಬಲ್ಲರೇ ಇಲ್ಲವೇ ಎಂಬುದು ಕುತೂಹಲ ಮೂಡಿಸಿದೆ.

ಐಪಿಎಲ್ 2023 ರಲ್ಲಿ ಸಿಎಸ್‌ಕೆಗೆ ಪತಿರಾನಾ ತುಂಬಾ ಉಪಯುಕ್ತ ಎಂದು ಸಾಬೀತುಪಡಿಸಿದ್ದಾರೆ. ಪತಿರಾನ 12 ಪಂದ್ಯಗಳಲ್ಲಿ 19.53 ಸರಾಸರಿಯಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದರು. ಈ ಅವಧಿಯಲ್ಲಿ ಅವರು 8.01 ರ ಎಕನಾಮಿಯಲ್ಲಿ ರನ್ಗಳನ್ನು ಗಳಿಸಿದ್ದರು. ಈ ಪರಿಸ್ಥಿತಿಯಲ್ಲಿ ಪತಿರಾನ ಐಪಿಎಲ್‌ಗೂ ಮುನ್ನ ಚೇತರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅದು ಚೆನ್ನೈ ಸೂಪರ್ ಕಿಂಗ್ಸ್‌ಗೆ ದೊಡ್ಡ ಹೊಡೆತವಾಗಿ ಪರಿಣಮಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications