Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಿಂದ ಶಸ್ತ್ರತ್ಯಾಗ ಮಾಡಿಲ್ವಾ ಎಂಎಸ್ ಧೋನಿ?; ನಿವೃತ್ತಿಗೆ ಮುನ್ನ ಮತ್ತೊಂದು ಆವೃತ್ತಿ ಆಡ್ತಾರಾ?

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಲೆಜೆಂಡ್ ಎಂಎಸ್ ಧೋನಿಗೆ ಕೊನೆಯ ಆಟ ಎಂದೇ ನಿರೀಕ್ಷಿಸಲಾಗಿತ್ತು.

ಆದಾಗ್ಯೂ, ಮೇ 18ರ ಶನಿವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಸಿಎಸ್‌ಕೆ ತಂಡದ ಅಂತಿಮ ಲೀಗ್ ಪಂದ್ಯದಲ್ಲಿ ರೋಚಕ ಘಟನೆಗಳ ನಂತರ, ಎಂಎಸ್ ಧೋನಿ ನಿವೃತ್ತಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

IPL 2024 CSK Legend MS Dhoni is Still Undecided About IPL Retirement

ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಪ್ರವೇಶಿಸುವಾಗ, ಸಿಎಸ್‌ಕೆ ತಂಡ ಐಪಿಎಲ್ 2024ರ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನಿರ್ಣಾಯಕವಾಗಿತ್ತು. ಅಲ್ಲಿ ಗೆದ್ದು ಪ್ಲೇಆಫ್ ಪ್ರವೇಶಿಸಿ ಚೆಪಾಕ್ ಸ್ಟೇಡಿಯಂನಲ್ಲಿ ಫೈನಲ್‌ನಲ್ಲಿ ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ತನ್ನ ಐಪಿಎಲ್ ವಿದಾಯ ಪಂದ್ಯವನ್ನು ಆಡಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಅದರೆ, ತವರಿನ ಅಂಗಳದಲ್ಲಿ ಆರ್‌ಸಿಬಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದರಿಂದ ಸಿಎಸ್‌ಕೆ ತಂಡದ ಪ್ಲೇಆಫ್ ಭರವಸೆಗಳು ಭಗ್ನಗೊಂಡವು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೊರಹಾಕಿತು.

ಆದರೆ ಹೈ-ಸ್ಕೋರಿಂಗ್ ಪಂದ್ಯದ ರನ್ ಚೇಸ್ ಸಮಯದಲ್ಲಿ ಒಂದು ಅಸಾಮಾನ್ಯ ಘಟನೆಯು ಎಂಎಸ್ ಧೋನಿಯ ವಿದಾಯವನ್ನು ಇನ್ನೂ ಮುಂದಕ್ಕೆ ತಳ್ಳಬಹುದು ಎಂಬ ಭರವಸೆಯೊಂದನ್ನು ನೀಡಿದೆ.

IPL 2024 CSK Legend MS Dhoni is Still Undecided About IPL Retirement

ಬಾಲ್ ಕಳೆದುಹೋಗಿದ್ದರಿಂದ ಸೋಲಬೇಕಾಯಿತು; ಸಿಎಸ್‌ಕೆ ಅಧಿಕಾರಿ

ಪಂದ್ಯದ ಅಂತಿಮ ಓವರ್‌ನಲ್ಲಿ 42 ವರ್ಷದ ಎಂಎಸ್ ಧೋನಿ ಅವರು ಯಶ್ ದಯಾಲ್ ಅವರ ಬೌಲಿಂಗ್‌ನ ಮೊದಲ ಎಸೆತವನ್ನು 110 ಮೀಟರ್‌ಗಳ ಬೃಹತ್ ಸಿಕ್ಸರ್ ಬಾರಿಸಿದಾಗ, ಚೆಂಡು ಮೈದಾನದ ಹೊರಗೆ ಹೋಯಿತು. ನಂತರ ಯಶ್ ದಯಾಳ್‌ಗೆ ನೀಡಿದ ಹೊಸ ಚೆಂಡು ಒಣಗಿತ್ತು ಮತ್ತು ರನ್ ಗಳಿಸಲು ಕಷ್ಟವಾಯಿತು.

"ಸಿಕ್ಸರ್ ಬಾರಿಸಿದಾಗ ಚೆಂಡು ಕಳೆದುಹೋಯಿತು ಮತ್ತು ಚೆಂಡು ಬದಲಾಯಿಸಬೇಕಾಯಿತು. ಯಶ್ ದಯಾಳ್ ಒಣ ಚೆಂಡನ್ನು ಪಡೆದರು ಮತ್ತು ಇದ್ದಕ್ಕಿದ್ದಂತೆ ಹೊಡೆಯುವುದು ಕಷ್ಟಕರವಾಯಿತು," ಎಂದು ಸಿಎಸ್‌ಕೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಎಂಎಸ್ ಧೋನಿ ಮತ್ತೆ ಬೌಂಡರಿ ಗೆರೆ ತೆರವುಗೊಳಿಸದಂತೆ ತಡೆಯಿತು ಮತ್ತು ಚೆಪಾಕ್‌ನಲ್ಲಿ ತನ್ನ ಅಂತಿಮ ಐಪಿಎಲ್ ಪಂದ್ಯವನ್ನು ಆಡುವ ಭರವಸೆಯನ್ನು ಉಳಿಸಿಕೊಳ್ಳುತ್ತದೆ.

ಆರ್‌ಸಿಬಿ ಎದುರು ಸಿಎಸ್‌ಕೆ ಸೋಲಿನ ನಂತರ ಕಣ್ಣಿಗೆ ಕಂಡಂತೆ, ಸಿಟ್ಟುಗೊಂಡಿದ್ದ ಎಂಎಸ್ ಧೋನಿ ಪಂದ್ಯದ ನಂತರದ ಸಾಂಪ್ರದಾಯಿಕ ಹ್ಯಾಂಡ್‌ಶೇಕ್ ಸಮಯದಲ್ಲಿ ಆರ್‌ಸಿಬಿ ಆಟಗಾರರ ಕೈಕುಲುಕದೆ ಡ್ರೆಸ್ಸಿಂಗ್ ರೂಮ್‌ಗೆ ನಿರ್ಗಮಿಸಿದರು.

ಹೀಗಾಗಿ ಸಿಎಸ್‌ಕೆ ಮೂಲಗಳ ಪ್ರಕಾರ, ಲೆಜೆಂಡ್ ಕ್ರಿಕೆಟಿಗ ಎಂಎಸ್ ಧೋನಿ ಇನ್ನೂ ಐಪಿಎಲ್‌ನಿಂದ ನಿವೃತ್ತಿಯಾಗುವುದು ಖಚಿತವಾಗಿ ನಿರ್ಧರಿಸಿಲ್ಲ ಎಂದು ಸೂಚಿಸುತ್ತವೆ.

"ಎಂಎಸ್ ಧೋನಿ ಅವರು ಸಿಎಸ್‌ಕೆಯಲ್ಲಿ ಯಾರೊಂದಿಗೂ ನಿವೃತ್ತಿ ಹೇಳುವುದಾಗಿ ತಿಳಿಸಿಲ್ಲ. ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಒಂದೆರಡು ತಿಂಗಳು ಕಾಯುವುದಾಗಿ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರ," ಎಂದು ಸಿಎಸ್‌ಕೆ ಮೂಲಗಳು ತಿಳಿಸಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 27 ರನ್‌ಗಳ ಸೋಲಿನ ನಂತರ, ಎಂಎಸ್ ಧೋನಿ ಮರುದಿನವೇ ತಮ್ಮ ತವರು ರಾಂಚಿಗೆ ಮರಳಿದರು.

ಇದೇ ವೇಳೆ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್), ರಾಜಸ್ಥಾನ್ ರಾಯಲ್ಸ್ (ಆರ್‌ಆರ್), ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನಂತರ ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆದ ನಾಲ್ಕನೇ ತಂಡವಾಯಿತು.

2016ರ ಫೈನಲಿಸ್ಟ್ ಆರ್‌ಸಿಬಿ ತಂಡವು ಬುಧವಾರ, ಮೇ 22ರಂದು ಅಹಮದಾಬಾದ್‌ನಲ್ಲಿ ಎಲಿಮಿನೇಟರ್ 1ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ.

Story first published: Monday, May 20, 2024, 17:03 [IST]
Other articles published on May 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+