For Quick Alerts
ALLOW NOTIFICATIONS  
For Daily Alerts
 

IPL 2024: ಸಿಎಸ್‌ಕೆ ತಂಡದ ಟೆನ್ಷನ್‌ ಹೆಚ್ಚಿಸಿದ ಡೆರಿಲ್ ಮಿಚೆಲ್ ಗಾಯ

ನ್ಯೂಜಿಲೆಂಡ್‌ನ ಸ್ಟಾರ್ ಆಟಗಾರ ಡೆರಿಲ್ ಮಿಚೆಲ್ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಇದೇ ಕಾರಣದಿಂದ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಡಲು ಸಾಧ್ಯವಿಲ್ಲ. ಇದರೊಂದಿಗೆ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದಲೂ ಮಿಚೆಲ್ ಹೊರಗುಳಿದಿದ್ದಾರೆ. ಅಲ್ಲದೆ ಐಪಿಎಲ್‌ ವೇಳೆಗೆ ಚೇತರಿಸಿಕೊಳ್ಳುತ್ತಾರಾ ಎಂಬ ಆತಂಕ ಚೆನ್ನೈ ಸೂಪರ್ ಕಿಂಗ್ಸ್ ಅಂಗಳದಲ್ಲಿ ಮನೆ ಮಾಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಮೊದಲು ಮಿಚೆಲ್ ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಅವರನ್ನು 14 ಕೋಟಿಗೆ ಸಿಎಸ್‌ಕೆ ಖರೀದಿಸಿತ್ತು. ಈ ಪ್ಲೇಯರ್‌ ತಂಡಕ್ಕೆ ಬಲ ತುಂಬ ಬಲ್ಲ ಆಟಗಾರ. ಅಲ್ಲದೆ ಮತ್ತೊಮ್ಮೆ ಕಪ್‌ ಗೆಲುವಿಗೆ ನೆರವಾಗಬಲ್ಲ ಪ್ಲೇಯರ್‌.

IPL 2024: Daryl Mitchells injury has increased the tension of the CSK team

ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಮಿಚೆಲ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಮಿಚೆಲ್ ಅವರ ಕಾಲಿಗೆ ಗಾಯವಾಗಿದ್ದು, ಇದರಿಂದಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಮಂಡಳಿ ತಿಳಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿಯಲಿದ್ದಾರೆ. ಮಿಚೆಲ್ ಅವರ ಗಾಯ ಎಷ್ಟು ಗಂಭೀರವಾಗಿದೆ ಅಥವಾ ಅವರು ಯಾವಾಗ ಮೈದಾನಕ್ಕೆ ಮರಳುತ್ತಾರೆ ಎಂಬುದರ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ಮಿಚೆಲ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ದುಬಾರಿ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಐಪಿಎಲ್ ಗೂ ಮುನ್ನ ಫಿಟ್ ಆಗದಿದ್ದರೆ ಸಿಎಸ್‌ಕೆ ತಂಡದ ಟೆನ್ಷನ್ ಹೆಚ್ಚಾಗಬಹುದು.

IPL 2024: Daryl Mitchells injury has increased the tension of the CSK team

ಮಿಚೆಲ್ ನ್ಯೂಜಿಲೆಂಡ್‌ನ ದಿಗ್ಗಜ ಆಟಗಾರರಲ್ಲಿ ಒಬ್ಬರು. 2023ರ ವಿಶ್ವಕಪ್‌ನಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮಿಚೆಲ್‌ಗೆ ಐದನೇ ಸ್ಥಾನ. ಅವರು 10 ಪಂದ್ಯಗಳಲ್ಲಿ 552 ರನ್ ಗಳಿಸಿದ್ದರು. ಅಲ್ಲದೆ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಅವರು 2 ಶತಕಗಳನ್ನು ಸಹ ಗಳಿಸಿದರು. ಮಿಚೆಲ್ ನ್ಯೂಜಿಲೆಂಡ್ ಪರ 39 ಏಕದಿನ ಪಂದ್ಯಗಳಲ್ಲಿ 1577 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 6 ಶತಕ ಮತ್ತು 5 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಮಿಚೆಲ್ ಅವರ ಐಪಿಎಲ್ ನಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. ಅವರು ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿದ್ದರು. ಐಪಿಎಲ್‌ನಲ್ಲಿ ಇದುವರೆಗೆ ಕೇವಲ 2 ಪಂದ್ಯಗಳನ್ನು ಮಾತ್ರ ಆಡಲು ಸಾಧ್ಯವಾಗಿದೆ.

ಇನ್ನು ಡೇರಿಲ್ ಮಿಚೆಲ್‌ಗೆ ಭಾರತದ ಪಿಚ್‌ಗಳ ಬಗ್ಗೆ ಮಾಹಿತಿ ಇದ್ದು, ಇವರ ಗಾಯ ಚೇತರಿಕೆ ಕಂಡಿದ್ದೇ ಆದಲ್ಲಿ, ಇವರು ಚೆನ್ನೈ ತಂಡಕ್ಕೆ ಟಾಪ್‌ ಆರ್ಡರ್‌ನಲ್ಲಿ ಆಧಾರವಾಗಬಲ್ಲರು.

Story first published: Thursday, February 8, 2024, 18:40 [IST]
Other articles published on Feb 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+