For Quick Alerts
ALLOW NOTIFICATIONS  
For Daily Alerts
 

IPL 2024: ಟಿ20 ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ವಿಶ್ವದಾಖಲೆ ಸರಿಗಟ್ಟಿದ ಡೇವಿಡ್ ವಾರ್ನರ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರು ಟಿ20 ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ಅವರ ವಿಶ್ವದಾಖಲೆಯ ಫಿಫ್ಟಿ ಪ್ಲಸ್ ಸ್ಕೋರ್‌ಗಳನ್ನು ಸರಿಗಟ್ಟಿದ್ದಾರೆ.

ಭಾನುವಾರ, ಮಾರ್ಚ್ 31ರಂದು ವಿಶಾಖಪಟ್ಟಣದ ವೈ.ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ ವೇಗದ ಅರ್ಧಶತಕವು ಟಿ20 ಸ್ವರೂಪದಲ್ಲಿ ಅವರ 110ನೇ ಐವತ್ತು ಪ್ಲಸ್ ಸ್ಕೋರ್ ತಲುಪಲು ನೆರವಾಯಿತು.

ಡೇವಿಡ್ ವಾರ್ನರ್ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಕೆರಿಬಿಯನ್ ಲೆಜೆಂಡ್ ಬ್ಯಾಟರ್ ಕ್ರಿಸ್ ಗೇಲ್ ಅವರ ಬೃಹತ್ ದಾಖಲೆಯನ್ನು ಸರಿಗಟ್ಟಿದ್ದಾರೆ.

IPL 2024 David Warner Equals Chris Gayle s World Record in T20 Cricket

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 13ನೇ ಪಂದ್ಯದ ಇನ್ನಿಂಗ್ಸ್‌ನ ಆರಂಭದಿಂದಲೂ ಡೇವಿಡ್ ವಾರ್ನರ್ ಸಿಎಸ್‌ಕೆ ಬೌಲರ್‌ಗಳನ್ನು ದಂಡಿಸಿದರು. ಪಂದ್ಯದ 9ನೇ ಓವರ್‌ನಲ್ಲಿ ಕೇವಲ 32 ಎಸೆತಗಳಲ್ಲಿ ಎಡಗೈ ಬ್ಯಾಟರ್ ತಮ್ಮ ಅರ್ಧಶತಕ ಬಾರಿಸಿದರು.

ಪೃಥ್ವಿ ಶಾ ಅವರ ನೆರವಿನೊಂದಿಗೆ ಡೇವಿಡ್ ವಾರ್ನರ್ ಅವರ ಆಕ್ರಮಣಕಾರಿ ಆಟವು ಮೊದಲ ಒಂಬತ್ತು ಓವರ್‌ಗಳಲ್ಲಿ 90 ರನ್‌ಗಳಿಗೆ ಕೊಂಡೊಯ್ದಿತು.

ಡೇವಿಡ್ ವಾರ್ನರ್ ಅವರು ಸಿಎಸ್‌ಕೆ ವಿರುದ್ಧ ಆರಂಭದಲ್ಲಿಯೇ ಅಬ್ಬರಿಸಲು ಪ್ರಾರಂಭಿಸಿದರು. ಐದನೇ ಓವರ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾಗಿ ದೀಪಕ್ ಚಹಾರ್ ಬೌಲಿಂಗ್‌ನಲ್ಲಿ ಮೂರು ಸತತ ದೊಡ್ಡ ಶಾಟ್‌ಗಳನ್ನು ಸಿಡಿಸಿದರು.

ಪವರ್‌ಪ್ಲೇನ ಅಂತಿಮ ಓವರ್‌ನಲ್ಲಿ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ಒಗ್ಗೂಡಿ ಮುಸ್ತಾಫಿಜುರ್ ರೆಹಮಾನ್ ಓವರ್‌ನಲ್ಲಿ 20 ರನ್‌ಗಳಿಗೆ ಗಳಿಸಿ ಪಂದ್ಯದ ವೇಗವನ್ನು ಬದಲಾಯಿಸಿದರು.

ಈ ಜೋಡಿ ಮೊದಲ ವಿಕೆಟ್‌ಗೆ 93 ರನ್‌ಗಳ ಜೊತೆಯಾಟ ನಿರ್ಮಿಸಿದರು. ಇದುವರೆಗಿನ ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅತ್ಯಂತ ಯಶಸ್ವಿ ಜೊತೆಯಾಟವಾಗಿದೆ.

IPL 2024 David Warner Equals Chris Gayle s World Record in T20 Cricket

ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಮುಸ್ತಾಫಿಜುರ್ ರೆಹಮಾನ್ ಎಸೆತವನ್ನು ರಿವರ್ಸ್ ಲ್ಯಾಪ್ ಮಾಡಲು ಯತ್ನಿಸಿ ಡೇವಿಡ್ ವಾರ್ನರ್ ಔಟಾದರು. ಕೇವಲ 35 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 52 ರನ್ ಗಳಿಸಿದರು.

ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು 50-ಪ್ಲಸ್ ಸ್ಕೋರ್‌ ಗಳಿಸಿದ ಬ್ಯಾಟರ್‌ಗಳು

ಡೇವಿಡ್ ವಾರ್ನರ್ - 373 ಪಂದ್ಯ - 110
ಕ್ರಿಸ್ ಗೇಲ್ - 463 ಪಂದ್ಯ - 110
ವಿರಾಟ್ ಕೊಹ್ಲಿ - 379 ಪಂದ್ಯ - 101
ಬಾಬರ್ ಅಜಂ - 290 ಪಂದ್ಯ - 98
ಜೋಸ್ ಬಟ್ಲರ್ - 405 ಪಂದ್ಯ - 86

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್‌ಗಳನ್ನು ಕಲೆಹಾಕಿತು. ಪೃಥ್ವಿ ಶಾ 43 ರನ್, ನಾಯಕ ರಿಷಭ್ ಪಂತ್ 51 ರನ್‌ಗಳ ಅರ್ಧಶತಕವು ಬೃಹತ್ ಮೊತ್ತ ಗಳಿಸಲು ನೆರವಾಯಿತು.

ಇದಕ್ಕುತ್ತರವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್‌ಗಳನ್ನಷ್ಟೇ ಗಳಿಸಿದರು. ಅಜಿಂಕ್ಯ ರಹಾನೆ 45 ರನ್, ಡೇರಿಲ್ ಮಿಚೆಲ್ 34 ರನ್, ರವೀಂದ್ರ ಜಡೇಜಾ 21 ರನ್ ಮತ್ತು ಎಂಎಸ್ ಧೋನಿ ಅವರ 37 ರನ್ ಗಳಿಸಿದರೂ ಗೆಲುವಿನ ಗುರಿ ತಲುಪಲಾಗಲಿಲ್ಲ. ಅಂತಿಮವಾಗಿ 20 ರನ್‌ಗಳಿಂದ ಸೋಲಿಬೇಕಾಯಿತು.

Story first published: Monday, April 1, 2024, 7:02 [IST]
Other articles published on Apr 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+