Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK vs DC IPL: ಇಂದು ನಡೆಯಲಿದೆ ಗುರು ಶಿಷ್ಯರ ಕಾಳಗ; ಹ್ಯಾಟ್ರಿಕ್‌ ಗೆಲುವಿನ ಕನಸಿನಲ್ಲಿ CSK

ಇಂದು ವಿಶಾಖಾಪಟ್ಟಣಂನಲ್ಲಿ ಗುರು ಶಿಷ್ಯರ ಕಾಳಗ ನಡೆಯಲಿದೆ. ಡೆಲ್ಲಿ ತಂಡವನ್ನು ಶಿಷ್ಯ ರಿಷಭ್‌ ಪಂತ್‌ ಮುನ್ನಡೆಸಲಿದ್ದಾರೆ. ಇನ್ನು ಚೆನ್ನೆ ಸೂಪರ್‌ ಕಿಂಗ್ಸ್ ತಂಡವನ್ನು ರುತುರಾಜ್ ಗಾಯಕ್ವಾಡ್‌ ಮುನ್ನಡೆಸಲಿದ್ದು, ಎಂಎಸ್‌ ಧೋನಿ ಮಾಸ್ಟರ್‌ ಮೆಂಡ್ ಇವರಿಗೆ ವರ್ಕ್‌ ಆಗುತ್ತದೆ.

ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಈಗಾಗಲೇ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಸಿಎಸ್‌ಕೆ, ಹ್ಯಾಟ್ರಿಕ್‌ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಡೆಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಸೋತಿದ್ದು, ಸೋಲಿನ ಭೀತಿ ಎದುರಿಸುತ್ತಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಲೆಕ್ಕಾಚಾರ ರಿಷಭ್‌ ಪಂತ್‌ ಪಡೆಯದಾಗಿದೆ.

IPL 2024 DC s Probable Playing 11 for Today s Match Against CSK Along with All Players List

ಸಂಘಟಿತ ಆಟವೇ ಬಲ

ಸಿಎಸ್‌ಕೆ ತಂಡ ಸಂಘಟಿತ ಆಟದ ಮೇಲೆ ಬಲ ಇಟ್ಟುಕೊಂಡಿದೆ. ತಂಡದ ಸ್ಟಾರ್ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಆಡುತ್ತಿದ್ದು, ತಂಡದ ಚಿಂತೆಯನ್ನು ದೂರ ಮಾಡಿದೆ. ಆರಂಭಿಕರಾಗಿ ಕಣಕ್ಕೆ ಇಳಿಯುವ ರಚಿನ್ ರವೀಂದ್ರ ಹಾಗೂ ನಾಯಕ ರುತುರಾಜ್ ಗಾಯಕ್ವಾಡ್‌ ತಮ್ಮ ನೈಜ ಆಟವನ್ನು ಆಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅಜಿಂಕ್ಯ ರಹಾನೆ ಬಿಗ್ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ನೆರವಾಗಬೇಕಿದೆ.

ಆಲ್‌ರೌಂಡರ್‌ ರೂಪದಲ್ಲಿ ಕಾಣಿಸಿಕೊಳ್ಳುವ ಡೆರಿಲ್ ಮಿಚೆಲ್‌, ಶಿವಂ ದುಬೆ, ರವೀಂದ್ರ ಜಡೇಜಾ ತಂಡಕ್ಕೆ ಅಗತ್ಯ ಕಾಣಿಕೆ ನೀಡಲಿದ್ದಾರೆ. ಈ ಆಟಗಾರರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಬೌಲಿಂಗ್‌ ವಿಭಾಗದಲ್ಲಿ ಕಟರ್‌ ಸ್ಪೇಷಲಿಸ್ಟ್‌ ಮುಸ್ತಾಫಿಜುರ್‌ ರೆಹಮಾನ್‌, ದೀಪಕ್ ಚಹಾರ್‌, ಮಹೇಶ್ ತೀಕ್ಷಣ ಹಾಗೂ ತುಷಾರ್‌ ದೇಶಪಾಂಡೆ, ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್‌ ಬೇಟೆ ನಡೆಸಬಲ್ಲರು.

ಹ್ಯಾಟ್ರಿಕ್ ಸೋಲಿನ ಭೀತಿ

ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್‌ 2024ರಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಸೋತು ನಿರಾಸೆ ಅನುಭವಿಸಿದೆ. ತಂಡದ ಪರ ಸ್ಟಾರ್ ಆಟಗಾರರು ಗಮನಾರ್ಹ ಪ್ರದರ್ಶನ ನೀಡಿದರೆ ಇರುವುದು ಪಂತ್ ಚಿಂತೆಯನ್ನು ದ್ವಿಗುಣ ಗೊಳಿಸಿದೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಡೇವಿಡ್ ವಾರ್ನರ್‌ ಬಿಗ್ ಇನ್ನಿಂಗ್ಸ್ ಕಟ್ಟಿದ್ದರೆ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಮಿಚೆಲ್ ಸ್ಟಾರ್ಕ್‌, ರಿಷಭ್ ಪಂತ್, ಟ್ರಿಸ್ಟಿಯನ್ ಸ್ಟಬ್ಸ್, ಲಲಿತ್ ಯಾದವ್, ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಡಬೇಕಿದೆ. ಅಂದಗಾ ಮಾತ್ರ ಮೊದಲ ಗೆಲುವಿನ ಕನಸು ನನಸಾಗುತ್ತದೆ.

IPL 2024 DC s Probable Playing 11 for Today s Match Against CSK Along with All Players List

ಬೌಲಿಂಗ್ ವಿಭಾಗದಲ್ಲಿ ಅನುಭವಿ ಇಶಾಂತ್‌ ಶರ್ಮಾ, ಮುಖೇಶ್‌ ಕುಮಾರ್‌, ಎರ್ನಿಕ್ ನಾರ್ಟ್ಜೆ ತಮ್ಮ ನೈಜ ದಾಳಿ ಸಂಘಟಿಸಬೇಕಿದೆ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಕುಲ್ದೀಪ್‌ ಯಾದವ್‌ ಪಿರ್ಕಿಯಿಂದ ಎದುರಾಳಿಗಳನ್ನು ಕಾಡಬೇಕಿದೆ.

ಸಿಎಸ್‌ಕೆ ಸಂಭಾವ್ಯ ತಂಡ: ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಮಹೇಂದ್ರ ಸಿಂಗ್ ಧೋನಿ, ದೀಪಕ್ ಚಾಹರ್, ಮಹೇಶ್ ತೀಕ್ಷಣ ಮತ್ತು ತುಷಾರ್ ದೇಶಪಾಂಡೆ.

ಡೆಲ್ಲಿ ಕ್ಯಾಪಿಟಲ್ಸ್‌ ಸಂಭಾವ್ಯ ತಂಡ: ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚ್ ಮಾರ್ಷ್, ರಿಷಭ್ ಪಂತ್ (ನಾಯಕ), ಟ್ರಿಸ್ಟಿಯನ್ ಸ್ಟಬ್ಸ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮುಖೇಶ್ ಕುಮಾರ್ ಮತ್ತು ಎರ್ನಿಕ್ ನಾರ್ಟ್ಜೆ.

Story first published: Sunday, March 31, 2024, 11:31 [IST]
Other articles published on Mar 31, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+