ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಆದರೂ ಸಹ ಅವರ ಅಭಿಮಾನಿಗಳ ಮೂಲಕ ಪ್ರತಿದಿನ ಅವರ ಕೆಲವು ಚಿತ್ರಗಳು ಅಥವಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಎಂಎಸ್ ಧೋನಿ ಇದೀಗ ಐಪಿಎಲ್ ನಲ್ಲಿ ಮಾತ್ರ ಆಡುವುದನ್ನು ಕಾಣಬಹುದಾಗಿದೆ. ಮತ್ತೊಮ್ಮೆ ಧೋನಿ ಐಪಿಎಲ್ 2024 ರಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಆಡಲು ಸಜ್ಜಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿದೆ. ಇದರಲ್ಲಿ ಧೋನಿಯ ಹೊಸ ಲುಕ್ ಕಾಣಿಸುತ್ತಿದೆ.

ಧೋನಿಯ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹೇಂದ್ರ ಸಿಂಗ್ ಧೋನಿ ಅವರ ವೀಡಿಯೊಗಳು ಮತ್ತು ಚಿತ್ರಗಳು ಅವರ ಅಭಿಮಾನಿಗಳ ಖಾತೆಗಳಿಂದ ಹಂಚಿಕೊಳ್ಳಲ್ಪಡುತ್ತವೆ. ಇದೀಗ ಧೋನಿಯ ಹೊಸ ಚಿತ್ರ ಹೊರಬಿದ್ದಿದೆ. ಇದರಲ್ಲಿ ಮಹಿ ಟೆನಿಸ್ ಆಡುತ್ತಿದ್ದಾರೆ. ಈ ಚಿತ್ರದಲ್ಲಿ ಧೋನಿ ಉದ್ದನೆಯ ಕೂದಲಿನೊಂದಿಗೆ ಕಾಣಿಸಿಕೊಂಡಿದ್ದಾರೆ.
ಈ ಚಿತ್ರವನ್ನು ನೋಡಿದ ಅಭಿಮಾನಿಗಳಿಗೆ ಧೋನಿಯ ಹಳೆಯ ದಿನಗಳು ನೆನಪಾದವು. ಮಹೇಂದ್ರ ಸಿಂಗ್ ಧೋನಿ ಅವರು ಉದ್ದನೆಯ ಕೂದಲನ್ನು 2007ರ ಮೆಲಕು ಹಾಕಿದಂತಿದೆ ಎಂದು ತಿಳಿಸಿದ್ದಾರೆ. ಧೋನಿಯ ಹೊಸ ಲುಕ್ ಅನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಧೋನಿ ಅವರ ಈ ಚಿತ್ರಗಳಿಗೆ ಅಭಿಮಾನಿಗಳು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಚಿತ್ರಗಳಲ್ಲಿ ಧೋನಿ ಕೂಡ ಸಾಕಷ್ಟು ಫಿಟ್ ಆಗಿ ಕಂಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2023 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಇದೀಗ ಮತ್ತೊಮ್ಮೆ ಧೋನಿ ನಾಯಕತ್ವದಲ್ಲಿ ಆರನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಉದ್ದೇಶದಿಂದ ಸಿಎಸ್ ಕೆ ಮೈದಾನಕ್ಕಿಳಿಯಲಿದೆ. ಧೋನಿ ಕೂಡ ಐಪಿಎಲ್ 2024ಕ್ಕೆ ತಯಾರಿ ನಡೆಸುತ್ತಿದ್ದಾರೆ. ಮಹಿ ಫಿಟ್ನೆಸ್ ಬಗ್ಗೆಯೂ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 17 ಆವೃತ್ತಿಯ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ಆವೃತ್ತಿಗಳಲ್ಲಿ ಪುಣೇರಿ ಸೂಪರ್ ಜೈಂಟ್ ತಂಡದ ಪರ ಕಣಕ್ಕೆ ಇಳಿದರೆ, ಉಳಿದ 15 ಆವೃತ್ತಿಗಳಲ್ಲಿ ಮಾಹಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಆರಂಭದಲ್ಲಿ ಇವರ ಸ್ಪೋಟಕ ಬ್ಯಾಟಿಂಗ್‌ಗೆ ಅಭಿಮಾನಿಗಳು ಫುಲ್ ಬೋಲ್ಡ್ ಆಗಿದ್ದರು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸುವ ಮಾಹಿ ನಿಜಕ್ಕೂ ಒಬ್ಬ ಗೇಮ್ ಚೆಂಜರ್ ಪ್ಲೇಯರ್.. ಧೋನಿ ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 250 ಪಂದ್ಯಗಳಲ್ಲಿ ಆಡಿದ್ದು, 5082 ರನ್ ಕಲೆ ಹಾಕಿದ್ದಾರೆ. ಈ ವೇಳೆ ಅವರ ಗರಿಷ್ಠ ಸ್ಕೋರ್ ಅಜೇಯ 84 ರನ್ ಆಗಿದೆ. ಐಪಿಎಲ್ ಇತಿಹಾಸದಲ್ಲಿ ಮಾಹಿ 24 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ 239 ಬೌಂಡರಿ, 142 ಸಿಕ್ಸರ್ ಸಿಡಿಸಿದ್ದಾರೆ.