For Quick Alerts
ALLOW NOTIFICATIONS  
For Daily Alerts
 

IPL 2024: ರಿಂಕು ದಾಖಲೆ ಅಳಿಸಿದ ದಿನೇಶ್ ಕಾರ್ತಿಕ್‌; ಈ ಪಟ್ಟಿಯಲ್ಲಿ ಇನ್ನು ಈ ಪ್ಲೇಯರ್‌ ನಂಬರ್‌ 1

ಆರ್‌ಸಿಬಿ ತಂಡದ ಸ್ಟಾರ್ ಆಟಗಾರರ ದಿನೇಶ್‌ ಕಾರ್ತಿಕ್‌ ಲಯಕ್ಕೆ ಮರಳಿದ್ದಾರೆ. ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಅಮೋಘವಾಗಿ ಬ್ಯಾಟಿಂಗ್ ಮಾಡಿದ್ದ ದಿನೇಶ್‌ ಎರಡನೇ ಪಂದ್ಯದಲ್ಲೂ, ಆರ್‌ಸಿಬಿ ತಂಡಕ್ಕೆ ನೆರವಾದರು. ಇವರ ಮನಮೋಹಕ ಇನಿಂಗ್ಸ್‌ ನೆರವಿನಿಂದ ಆರ್‌ಸಿಬಿ ತವರಿನಲ್ಲಿ ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿ ಗೆಲುವಿನ ಖಾತೆಯನ್ನು ಓಪನ್ ಮಾಡಿದೆ.

ವಿರಾಟ್ ಕೊಹ್ಲಿ ಔಟ್ ಆಗುತ್ತಿದ್ದಂತೆ, ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವ ಜವಾಬ್ದಾರಿ ಅಪ್ತ್ ಬಾಂಧವ ದಿನೇಶ್ ಕಾರ್ತಿಕ್ ಹೆಗಲ ಮೇಲೆ ಬಿದ್ದಿತು. ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದ ದಿನೇಶ್‌ ಅಬ್ಬರಿಸಿದರು. ಡೆತ್‌ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ವಿಕೆಟ್‌ ಕೀಪರ್‌ ಬ್ಯಾಟರ್‌, ಪಂಜಾಬ್‌ ಕಿಂಗ್ಸ್ ವಿರುದ್ಧ ಕ್ಲಾಸಿಕ್ ಇನ್ನಿಂಗ್ಸ್ ಆಡಿದರು. ದಿನೇಶ್ ಸೋಮವಾರ ನಡೆದ ಪಂದ್ಯದಲ್ಲಿ 10 ಎಸೆತಗಳಲ್ಲಿ 28 ರನ್‌ ಸಿಡಿಸಿ ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದರು.

IPL 2024 Dinesh Karthik erases Rinku s record This player is now number 1 in this list

ದಿನೇಶ್‌ ಕಾರ್ತಿಕ್‌ ಡೆತ್‌ ಓವರ್‌ಗಳಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಆಟಗಾರರ ಪಟ್ಟಿಗೆ ಸ್ಥಾನ ಪಡೆದಿದ್ದಾರೆ. ಅಲ್ಲದೆ ಇವರ ಮುಂದೆ ಈಗ ವೆಸ್ಟ್‌ ಇಂಡೀಸ್ ತಂಡದ ಶಿಮ್ರೋನ್‌ ಹೆಟ್ಮೆಯರ್‌ ಮಾತ್ರ ಇದ್ದಾರೆ. ನಿನ್ನೆಯ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ದಿನೇಶ್‌, ಕೆಕೆಆರ್ ತಂಡದ ಭರವಸೆಯ ಬ್ಯಾಟರ್‌ ರಿಂಕು ಸಿಂಗ್ ದಾಖಲೆಯನ್ನು ಮೀರಿ ನಿಂತರು.

IPL 2024 Dinesh Karthik erases Rinku s record This player is now number 1 in this list

ಶಿಮ್ರೋನ್‌ಗೆ ಅಗ್ರ ಸ್ಥಾನ

ಐಪಿಎಲ್ 2022 ರಿಂದ ಡೆತ್ ಓವರ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಉಲ್ಲಿ ಹೆಚ್ಚು ರನ್ ಬಾರಿಸಿದ ಪಟ್ಟಿಯಲ್ಲಿ ಶಿಮ್ರೋನ್‌ ಅಗ್ರ ಸ್ಥಾನದಲ್ಲಿದ್ದಾರೆ. 2022 ರ ಐಪಿಎಲ್‌ನಿಂದ ಆಡಿದ 6 ಪಂದ್ಯಗಳಲ್ಲಿ, ಕೊನೆಯ ನಾಲ್ಕು ಓವರ್‌ಗಳಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಮೆಯರ್. ಈ ಅವಧಿಯಲ್ಲಿ ಅವರು 197.42 ಸ್ಟ್ರೈಕ್ ರೇಟ್‌ನೊಂದಿಗೆ 383 ರನ್ ಗಳಿಸಿದ್ದಾರೆ.

IPL 2024 Dinesh Karthik erases Rinku s record This player is now number 1 in this list

ಮೂರನೇ ಸ್ಥಾನದಲ್ಲಿ ರಿಂಕು

17 ರಿಂದ 20 ಓವರ್‌ಗಳನ್ನು ಟಿ20ಯಲ್ಲಿ ಡೆತ್ ಓವರ್ ಎಂದು ಕರೆಯುತ್ತಾರೆ. ಹೆಟ್ಮೆಯರ್ ನಂತರದ ಎರಡನೇ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ ಇದ್ದಾರೆ. ಈ ಅವಧಿಯಲ್ಲಿ ಅವರು 203.27 ಸ್ಟ್ರೈಕ್ ರೇಟ್‌ನೊಂದಿಗೆ 372 ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ರಿಂಕು ಸಿಂಗ್ 195 ಸ್ಟ್ರೈಕ್ ರೇಟ್‌ನೊಂದಿಗೆ 351 ರನ್ ಗಳಿಸಿದ್ದಾರೆ. ರಿಂಕು ನಂತರ 290 ರನ್ ಗಳಿಸಿರುವ ಟಿಮ್ ಡೇವಿಡ್ ಮತ್ತು ನಂತರ 285 ರನ್ ಗಳಿಸಿರುವ ಡೇವಿಡ್ ಮಿಲ್ಲರ್ ಹೆಸರು ಬರುತ್ತದೆ.

ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧ ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ 28 ರನ್ ಗಳಿಸಿದ್ದರು. ಅವರ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳಿದ್ದವು. ಇಂಪ್ಯಾಕ್ಟ್‌ ಪ್ಲೇಯರ್ ಆಗಿ ಮೈದಾನಕ್ಕಿಳಿದ ಮಹಿಪಾಲ್ ಲೊಮ್ರೋರ್ ಕೇವಲ 8 ಎಸೆತಗಳಲ್ಲಿ 17 ರನ್ ಸಿಡಿಸಿದರು. ಲೊಮ್ರೊರ್ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು.

Story first published: Tuesday, March 26, 2024, 18:46 [IST]
Other articles published on Mar 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+