Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2024: ಲಕ್ನೋ ತೊರೆದು ಕೊಲ್ಕತ್ತಾ ನೈಟ್ ರೈಡರ್ಸ್‌ಗೆ ಮರಳಿದ ಗೌತಮ್ ಗಂಭೀರ್

ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಎರಡು ಬಾರಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿದ್ದ ನಾಯಕ ಗೌತಮ್ ಗಂಭಿರ್ ಮತ್ತೆ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೌತಮ್ ಗಂಭೀರ್ ಆ ತಂಡವನ್ನು ತೊರೆದಿದ್ದಾರೆ. ಇದೀಗ ಅವರು ಮರಳಿ ಕೆಕೆಆರ್ ಫ್ರಾಂಚೈಸಿಯನ್ನು ಸೇರಿಕೊಂಡಿದ್ದು 2024ರ ಐಪಿಎಲ್ ಟೂರ್ನಿಗೆ ತಂಡದ ಮೆಂಟರ್ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ.

2012ರಲ್ಲಿ ಮತ್ತು 2014ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಎರಡು ಬಾರಿ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಚಾಂಪಿಯನ್ ಒಟ್ಟವನ್ನು ಅಲಂಕರಿಸಿತ್ತು. ಆದರೆ ಅದಾದ ಬಳಿಕ ಕೆಕೆಆರ್ ತಂಡದಿಂದ ಆ ಸಾಧನೆ ಸಾಧ್ಯವಾಗಿಲ್ಲ. ಇದೀಗ ಹೆಡ್ ಕೋಚ್ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ಮೆಂಟರ್ ಆಗಿ ತಂಡವನ್ನು ಮತ್ತೆ ಕಟ್ಟುವ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.

IPL 2024: Gautam Gambhir joined KKR as mentor after parting ways with LSG

ಗೌತಮ್ ಗಂಭೀರ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತ್ಯಜಿಸಿದ ಬಳಿಕ ಭಾವನಾತ್ಮಕವಾದ ಪೋಸ್ಟ್‌ವೊಂದನ್ನು ಮಾಡಿದ್ದಾಎ. 2022ರಲ್ಲಿ ಕೆಎಲ್ ರಾಹುಲ್ ನೇತೃತ್ವದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಗಂಭೀರ್ ತಂಡದ ಪ್ರಮುಖ ಭಾಗವಾಗಿದ್ದರು.

ಗಂಭೀರ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೂಲಕವೇ ಗೌತನ್ ಗಂಭೀರ್ ಅವರಲ್ಲಿನ ಅದ್ಭುತ ನಾಯಕತ್ವ ಬಹಿರಂಗವಾಗಿತ್ತು. ಆರಂಭಿಕ ಮೂರು ಐಪಿಎಲ್ ಆವೃತ್ತಿಗಳಲ್ಲಿ ಶಾರೂಖ್ ಖಾನ್ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗೌತಮ್ ಗಂಭೀರ್ ನಾಯಕನಾಗಿ ಜವಾಬ್ಧಾರಿ ವಹಿಸಿಕೊಂಡ ಬಳಿಕ ಅದ್ಭುತ ಯಶಸ್ಸು ಸಾಧಿಸಿತ್ತು. ಹೀಗಾಗಿ ತಂಡದ ಅತ್ಯಂತ ಯಶಸ್ವೀ ನಾಯಕ ಎನಿಸಿಕೊಂಡಿದ್ದಾರೆ.

ಗೌತಮ್ ಗಂಭೀರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಳ್ಳುತ್ತಿರುವ ಬಗ್ಗೆ ಕೆಕೆಆರ್ ಫ್ರಾಂಚೈಸಿ ಅಧಿಕೃತವಾಗಿ ಮಾಹಿತಿ ನೀಡಿದೆ. "ಗೌತಮ್ ಗಂಭೀರ್ ಕೆಕೆಆರ್ ತಂಡಕ್ಕೆ ಮೆಂಟರ್ ಆಗಿ ಮರಳಲಿದ್ದು ಕೋಚ್ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದ್ದಾರೆ" ಎಂದಿ ಮಾಧ್ಯಮ ಪ್ರಕಟಣೆಯ ಮೂಲಕ ಮಾಹಿತಿ ಹಂಚಿಕೊಂಡಿದೆ.

ಇದಕ್ಕೂ ಮುನ್ನ ಗೌತಮ್ ಗಂಭೀರ್ ಕೊಲ್ಕತ್ತಾ ನಯಟ್ ರೈಡರ್ಸ್ ತಂಡವನ್ನು 2011-2017ರವರೆಗೆ ಪ್ರತಿನಿಧಿಸಿದ್ದರು. ಈ ಅವಧಿಯಲ್ಲಿ ಕೆಕೆಆರ್ ತಂಡ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದರೆ ಐದು ಬಾರಿ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತ್ತು. ಇನ್ನು 2014ರಲ್ಲಿ ಚಾಂಪಿಯನ್ಸ್ ಲೀಗ್‌ನಲ್ಲಿ ಫೈನಲ್ ಹಂತಕ್ಕೂ ಪ್ರವೇಶ ಪಡೆದಿತ್ತು. ಕೆಕೆಆರ್ ತೊರೆದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿಕೊಂಡಿದ್ದ ಗಂಭೀರ್ ಬಳಿಕ ಎಲ್‌ಎಸ್‌ಜಿ ತಂಡಕ್ಕೆ ಮೆಂಟರ್ ಆಗಿ ಸೇರಿಕೊಂಡಿದ್ದರು.

Story first published: Wednesday, November 22, 2023, 12:21 [IST]
Other articles published on Nov 22, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+