Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಹತ್ತಿರದ ಬಾಂಗ್ಲಾದಿಂದ ಸಿಎಸ್‌ಕೆ ತಂಡಕ್ಕೆ ಖುಷಿ ಸುದ್ದಿ: ಫಾರ್ಮ್‌ಗೆ ಮರಳಿದ ಸ್ಟಾರ್ ಆಲ್‌ರೌಂಡರ್‌

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಆರನೇ ಬಾರಿ ಚಾಂಪಿಯನ್‌ ಪಟ್ಟಕ್ಕೇರುವ ಕನಸು ಕಾಣುತ್ತಿದೆ. ಐಪಿಎಲ್‌ 2024 ಆರಂಭಕ್ಕೂ ದಿನಗಣನೆ ಆರಂಭವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಈಗಾಗಲೇ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಅತ್ತ ಇವರ ತಂಡದ ಸ್ಟಾರ್ ಆಟಗಾರರು ರಾಷ್ಟ್ರೀಯ ಹಾಗೂ ಲೀಗ್‌ ತಂಡಗಳಲ್ಲಿ ಅಬ್ಬರಿಸುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮೊನಚಾದ ಬೌಲಿಂಗ್ ದಾಳಿ ನಡೆಸಿ ಭರವಸೆ ಮೂಡಿಸಿದ್ದ ರಚಿನ್ ರವೀಂದ್ರ, ಹೊಸ ಆಸೆ ಚಿಗುರಿಸಿದ್ದರು. ಇದರ ಬೆನ್ನಲ್ಲೆ ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಒಬ್ಬರು ಸಖತ್ ಫಾರ್ಮ್‌ಗೆ ಮರಳಿದ್ದಾರೆ. ಇವರು ಫಾರ್ಮ್‌ಗೆ ಮರಳಿದ್ದರಿಂದ ಸಿಎಸ್‌ಕೆ ಆರನೇ ಬಾರಿ ಚಾಂಪಿಯನ್ ಆಗುವ ಕನಸು ಚಿಗುರಿದೆ.

IPL 2024: Good news for CSK from Bangladesh: Star all-rounder returns to form

ಹ್ಯಾಟ್ರಿಕ್ ಪಡೆದ ಸ್ಪಿನ್ ಬೌಲರ್‌

ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ, ಸಿಎಸ್‌ಕೆ ಮ್ಯಾನೇಜ್ಮೆಂಟ್‌ ಮುಖದಲ್ಲಿ ಮಂದಹಾಸ ಮೂಡಿಸಿದ ಆಟಗಾರ ಇಂಗ್ಲೆಂಡ್‌ನ ಮೋಯಿನ್ ಅಲಿ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಮೋಯಿನ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.

ಮೊಯಿನ್ ಅಲಿ ಅವರ ಹ್ಯಾಟ್ರಿಕ್ CSK ಅಭಿಮಾನಿಗಳಲ್ಲಿ ಸಂತೋಷ ತಂದಿದೆ. ಬಿಪಿಎಲ್‌ನಲ್ಲಿ ಚಟ್ಟೋಗ್ರಾಮ್ ಚಾಲೆಂಜರ್ಸ್ ಮತ್ತು ಕೊಮಿಲ್ಲಾ ವಿಕ್ಟೋರಿಯನ್ ನಡುವೆ ನಡೆದ ಪಂದ್ಯದಲ್ಲಿ ಮೊಯಿನ್ ಅಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

IPL 2024: Good news for CSK from Bangladesh: Star all-rounder returns to form

ಮೊಯಿನ್ ಟೂರ್ನಿಯಲ್ಲಿ ಕೊಮಿಲ್ಲಾ ವಿಕ್ಟೋರಿಯನ್ ಪರ ಆಡುತ್ತಿದ್ದಾರೆ. ತಂಡದ ಗೆಲುವಿನಲ್ಲಿ ಮೊಯಿನ್ ಪ್ರಮುಖ ಪಾತ್ರ ವಹಿಸಿದರು. ಮೊದಲು ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಅವರು ನಂತರ ಹ್ಯಾಟ್ರಿಕ್ ಪಡೆದು, ಎದುರಾಳಿ ತಂಡವನ್ನು ಕಾಡಿದರು.

ಗುರಿ ಬೆನ್ನಟ್ಟಿದ ಚಟ್ಟೋಗ್ರಾಮ್ ಚಾಲೆಂಜರ್ಸ್‌ನ ಕೊನೆಯ ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಮೂಲಕ ಆಲ್‌ರೌಂಡರ್ ಮೋಯಿನ್ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಇನಿಂಗ್ಸ್‌ನ 17ನೇ ಓವರ್‌ ಎಸೆಯಲು ಬಂದ ಮೊಯಿನ್ ಅಲಿ ಮೊದಲ ಮೂರು ಎಸೆತಗಳಲ್ಲಿ ಶೋಹಿದುಲ್ ಇಸ್ಲಾಂ (02), ಎರಡನೇ ಎಸೆತದಲ್ಲಿ ಅಲ್-ಅಮಿನ್ ಹುಸೇನ್ (00) ಮತ್ತು ಮೂರನೇ ಎಸೆತದಲ್ಲಿ ಬಿಲಾಲ್ ಖಾನ್ (00) ಅವರನ್ನು ಔಟ್ ಮಾಡಿದರು. ಮೊಯಿನ್ ಅವರ ಓವರ್‌ಗೆ ಮುನ್ನ ಚಟ್ಟೋಗ್ರಾಮ್ ತಂಡ 7 ವಿಕೆಟ್ ಕಳೆದುಕೊಂಡಿತ್ತು. ಮೊಯಿನ್ ಅಲಿ 3.3 ಓವರ್‌ಗಳಲ್ಲಿ 23 ರನ್ ನೀಡಿ 4 ವಿಕೆಟ್ ಪಡೆದರು.

ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಸ್ಟಾರ್‌

ಮೊಯಿನ್ ಅಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೊದಲು ಬ್ಯಾಟ್‌ನಿಂದ ಅಬ್ಬರಿಸಿದ್ದರು. ಅವರು ಕೊಮಿಲ್ಲಾ ವಿಕ್ಟೋರಿಯನ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ. ಐದನೇ ಕ್ರಮಾಂಕದಲ್ಲಿ ಆಡಿದ ಮೊಯಿನ್ ಅಲಿ 24 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ ಅಜೇಯ 53 ರನ್ ಗಳಿಸಿದರು.

ಪಂದ್ಯದ ಸಾರಾಂಶ

ಕೊಮಿಲ್ಲಾ ವಿಕ್ಟೋರಿಯನ್ ಪಂದ್ಯವನ್ನು 73 ರನ್‌ಗಳಿಂದ ಗೆದ್ದಿತು. ಮೊದಲು ಬ್ಯಾಟ್ ಮಾಡಿದ ಕೊಮಿಲ್ಲಾ ವಿಕ್ಟೋರಿಯನ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 239 ರನ್ ಗಳಿಸಿತು. ತಂಡದ ಪರ ವಿಲ್ ಜಾಕ್ವೆಸ್ 53 ಎಸೆತಗಳಲ್ಲಿ 5 ಬೌಂಡರಿ ಹಾಗೂ 10 ಸಿಕ್ಸರ್ ನೆರವಿನಿಂದ ಅಜೇಯ 108 ರನ್ ಗಳಿಸಿದರು. ಇದಲ್ಲದೇ ನಾಯಕ ಹಾಗೂ ಆರಂಭಿಕ ಆಟಗಾರ ಲಿಟನ್ ದಾಸ್ 31 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 60 ರನ್ ಗಳಿಸಿದರು. ಮೊಯಿನ್ ಅಲಿ 53 ರನ್ ಗಳಿಸಿದರು. ಗುರಿ ಬೆನ್ನಟ್ಟಿದ ಚಟ್ಟೋಗ್ರಾಮ್ ಚಾಲೆಂಜರ್ಸ್ 16.3 ಓವರ್ ಗಳಲ್ಲಿ 166 ರನ್ ಗಳಿಗೆ ಆಲೌಟ್ ಆಯಿತು.

Story first published: Wednesday, February 14, 2024, 10:36 [IST]
Other articles published on Feb 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+