For Quick Alerts
ALLOW NOTIFICATIONS  
For Daily Alerts
 

IPL 2024: ಗುಜರಾತ್‌ ತಂಡಕ್ಕೆ ಖುಷಿ ಸುದ್ದಿ: ಸ್ಟಾರ್ ಆಟಗಾರ ಚೇತರಿಕೆ, ಕಣಕ್ಕೆ ಇಳಿಯುವ ಸಾಧ್ಯತೆ

ಐಪಿಎಲ್ 2024 ರಲ್ಲಿ, ಗುಜರಾತ್‌ ಟೈಟಾನ್ಸ್‌ ತಂಡ, ಮೂರನೇ ಬಾರಿ ಐಪಿಎಲ್‌ ಅಖಾಡಕ್ಕೆ ಎಂಟ್ರಿ ನೀಡಲಿದ್ದು, ಯಶಸ್ವಿ ಆವೃತ್ತಿಯ ಕನಸಿನಲ್ಲಿದೆ. ಈ ಬಾರಿ ತಂಡವನ್ನು ಯುವ ಆಟಗಾರ ಶುಭಮನ್‌ ಗಿಲ್‌ ಮುನ್ನಡೆಸಲಿದ್ದಾರೆ. ಈ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಟ್ರೇಡ್‌ ಆಗಿ, ಮುಂಬೈ ಸೇರಿದ್ದಾರೆ. ಹಾರ್ದಿಕ್ ಪಾಂಡ್ಯ ಸತತ ಎರಡು ಬಾರಿ ಗುಜರಾತ್ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು.

ಈ ಬಾರಿ ಅವರು ಮುಂಬೈಗೆ ಟ್ರೇಡ್‌ ಆಗಿದ್ದರಿಂದ ಈ ತಂಡದ ಚುಕ್ಕಾಣಿಯನ್ನು ಯುವ ಆಟಗಾರ ಶುಭ್‌ಮನ್‌ ಗಿಲ್‌ ಅವರಿಗೆ ನೀಡಲಾಗಿದೆ. ಇವರು ನಾಯಕತ್ವ ಹಿಡಿದ ಬೆನ್ನಲ್ಲೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ ಈಗ ಶುಭಮನ್‌ ಗಿಲ್‌ಗೆ ದೂರದ ದೇಶದಿಂದ ಖುಷಿ ಸುದ್ದಿಯೊಂದು ಬಂದಿದೆ. ತಂಡದ ಸ್ಟಾರ್ ಆಟಗಾರರೊಬ್ಬರು ಮೈದಾನಕ್ಕೆ ಮರಳಲು ಸಿದ್ಧರಾಗಿದ್ದಾರೆ. 2023ರ ವಿಶ್ವಕಪ್‌ ವೇಳೆ ಈ ಆಟಗಾರ ಗಾಯಗೊಂಡಿದ್ದರು.

IPL 2024 Good news for Gujarat team Star player recovers likely to enter the arena

ಗುಜರಾತ್ ಟೈಟಾನ್ಸ್ ಮತ್ತು ಅಫ್ಘಾನಿಸ್ತಾನದ ಆಟಗಾರ ರಶೀದ್ ಖಾನ್ ಗಾಯದಿಂದ ಚೇತರಿಸಿಕೊಂಡು ಮೈದಾನಕ್ಕೆ ಮರಳಲು ಸಿದ್ಧರಾಗಿದ್ದಾರೆ. ಅವರು ಐರ್ಲೆಂಡ್ ವಿರುದ್ಧದ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ಆಡುವುದನ್ನು ನೋಡಬಹುದು. ಅವರು ವಿಶ್ವಕಪ್ 2023 ರ ಸಮಯದಲ್ಲಿ ಬೆನ್ನಿನ ಗಾಯದಿಂದ ಬಳಲುತ್ತಿದ್ದರು ಮತ್ತು ಅದಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಅಂದಿನಿಂದ ರಶೀದ್ ಅಂಹಳದಿಂದ ದೂರವಾಗಿದ್ದರು.

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಜತೆ ಮಾತನಾಡಿದ ರಶೀದ್, ನನ್ನ ತರಬೇತಿ ನಡೆಯುತ್ತಿದೆ ಮತ್ತು ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದರು. ಕೆಲವು ದಿನಗಳ ನಂತರ ನಾನು ಮತ್ತೆ ರಾಷ್ಟ್ರೀಯ ಜರ್ಸಿಯನ್ನು ಧರಿಸಲು ಮತ್ತು ನನ್ನ ದೇಶಕ್ಕಾಗಿ ಉತ್ತಮ ಪ್ರದರ್ಶನವನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಕಳೆದ ಮೂರು ತಿಂಗಳು ನನಗೆ ಶಸ್ತ್ರ ಚಿಕಿತ್ಸೆ ಮಾಡಿದ್ದರಿಂದ ಕಷ್ಟವಾಗಿತ್ತು. ಕಳೆದ ಏಳೆಂಟು ತಿಂಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದ ನನಗೆ ವಿಶ್ವಕಪ್‌ಗೂ ಮುನ್ನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರು ಹೇಳಿದ್ದರು, ಆದರೆ ವಿಶ್ವಕಪ್ ಆಡಿದ ಬಳಿಕ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದೆ ಎಂದು ತಿಳಿಸಿದ್ದಾರೆ.

IPL 2024 Good news for Gujarat team Star player recovers likely to enter the arena

ಗುಜರಾತ್ ಟೈಟಾನ್ಸ್ ತಂಡ

ಗುಜರಾತ್ ಟೈಟಾನ್ಸ್ ಪೂರ್ಣ ತಂಡ

ಶುಭಮನ್ ಗಿಲ್, ಅಜ್ಮತುಲ್ಲಾ ಒಮರ್ಜಾಯ್, ಉಮೇಶ್ ಯಾದವ್, ಸುಶಾಂತ್ ಮಿಶ್ರಾ, ಶಾರುಖ್ ಖಾನ್, ಕಾರ್ತಿಕ್ ತ್ಯಾಗಿ, ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಸಾಯಿ ಕಿಶೋರ್, ರಶೀದ್ ಖಾನ್, ಜೋಶ್ ಲಿಟಲ್, ರಾಬಿನ್ ಮಿನ್ನೆಸ್, ಸ್ಪೆನ್ಸರ್ ಜಾನ್ಸನ್, ಮಾನವ್ ಸುತಾರ್ ಮತ್ತು ಮೋಹಿತ್ ಶರ್ಮಾ.

Story first published: Tuesday, March 12, 2024, 8:10 [IST]
Other articles published on Mar 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+