IPL 2024: ಮಳೆಯಿಂದಾಗಿ GT vs KKR ಪಂದ್ಯ ರದ್ದು; ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ಗುಜರಾತ್ ಟೈಟನ್ಸ್
ಸೋಮವಾರ, ಮೇ 13ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಆತಿಥೇಯ ಗುಜರಾತ್ ಟೈಟನ್ಸ್ ಮತ್ತು ಪ್ರವಾಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 63ನೇ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿದೆ.
ಪಂದ್ಯ ದಿನದ ಸಂಜೆಯಿಂದಲೂ ಆರಂಭವಾದ ಮಳೆ ರಾತ್ರಿ 10.30ರವರೆಗೂ ಸುರಿದ ಕಾರಣ, ಟಾಸ್ ಕೂಡ ನಡೆಯಲಿಲ್ಲ. ಅಂತಿಮವಾಗಿ ಪಂದ್ಯದ ಅಂಪೈರ್‌ಗಳು ಉಭಯ ನಾಯಕರ ಒಪ್ಪಿಗೆಯೊಂದಿಗೆ ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು ಮತ್ತು ಎರಡೂ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡವು.

ಈ ಮೂಲಕ ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡಕ್ಕೆ ಎರಡು ಅಂಕಗಳಿಗಾಗಿ ಇದು ನಿರ್ಣಾಯಕ ಪಂದ್ಯವಾಗಿತ್ತು. ವರುಣ ದೇವನ ಅವಕೃಪೆಗೆ ಒಳಗಾಗಿ ಗುಜರಾತ್ ಟೈಟನ್ಸ್ ತಂಡ ಅಧಿಕೃತವಾಗಿ ಐಪಿಎಲ್ 2024ರ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಡಿದ 13 ಪಂದ್ಯಗಳಲ್ಲಿ 9 ಗೆಲುವು 3 ಸೋಲು ಮತ್ತು 1 ಫಲಿತಾಂಶವಿಲ್ಲದ ಪಂದ್ಯದ ಮೂಲಕ 19 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಭದ್ರವಾಗಿದ್ದು, ಈಗಾಗಲೇ ಐಪಿಎಲ್ 2024ರ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ.

ಗುಜರಾತ್ ಟೈಟನ್ಸ್ ಐಪಿಎಲ್ 2024ರಲ್ಲಿ ಈವರೆಗೆ ಆಡಿರುವ 13 ಪಂದ್ಯಗಳಲ್ಲಿ 5 ಗೆಲುವು, 7 ಸೋಲು ಮತ್ತು ಮತ್ತು 1 ಫಲಿತಾಂಶವಿಲ್ಲದ ಪಂದ್ಯದ ಮೂಲಕ 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಉಳಿದಿರುವ ಒಂದು ಪಂದ್ಯದೊಂದಿಗೆ ಗುಜರಾತ್ ತಂಡ ಗರಿಷ್ಠ 13 ಅಂಕಗಳನ್ನು ತಲುಪಬಹುದು. ಇದು ಅಗ್ರ 4 ಸ್ಥಾನಕ್ಕೆ ಸಾಕಾಗುವುದಿಲ್ಲ. ಹೀಗಾಗಿ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications