IPL 2024 ಮಾರ್ಚ್ 22 ರಂದು ಆರಂಭವಾಗಲಿದ್ದು, ಅಭಿಮಾನಿಗಳ ಚಿತ್ತ ಕದಿಯಲಿದೆ. ಈ ಋತುವಿನ ಮೊದಲ ಪಂದ್ಯವು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪ್ರಶಸ್ತಿ ಬರವನ್ನು ಅನುಭವಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ನಡೆಯಲಿದೆ. ಈಗಾಗಲೇ 16 ಆವೃತ್ತಿಗಳನ್ನು ಕಂಡಿರುವ ಐಪಿಎಲ್ ಹಲವು ಸ್ಮರಣೀಯ ಕ್ಷಣಗಳನ್ನು ತನ್ನ ಒಡಲಿನಲ್ಲಿ ಹೊಂದಿದೆ.
ಈಗ ಐಪಿಎಲ್‌ಗೆ ನಿಜಕ್ಕೂ ಹದಿಹರಯ.. ತನ್ನ ಒಯ್ಯಾರವನ್ನು ತೋರಿಸುತ್ತಿದೆ. ಈ ಶ್ರೀಮಂತ ಲೀಗ್ ಆರಂಭವಾದಾಗ ಈ ಟೂರ್ನಿಯ ಮೇಲೆ ಬಹಳಷ್ಟು ನಿರೀಕ್ಷೆಗಳು ಇರಲಿಲ್ಲ. ಆದರೆ ದಿನ ಕಳೆದಂತೆ, ಈ ಲೀಗ್ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಅಲ್ಲದೆ ಟೂರ್ನಿ ಆರಂಭವಾದಗ ಸ್ಥಳಿಯ ಆಟಗಾರರನ್ನು ಬೆಳೆಸುವ ಉದ್ದೇಶ ಕಂಡಿದ್ದ ಫ್ರಾಂಚೈಸಿಗಳ ಕನಸಿಗೆ ಈಗ ಫಲಸಿಕ್ಕಂತೆ ಆಗಿದೆ.
ಐಪಿಎಲ್ 17ನೇ ಆವೃತ್ತಿ ಆರಂಭವಾಗಲಿದ್ದು, ಈ ಮೆಗಾ ಟೂರ್ನಿಯಲ್ಲಿ ಅದೆಷ್ಟೋ ಸ್ಟಾರ್ ಆಟಗಾರರು ಆಡಿ ಮರೆಯಾಗಿದ್ದಾರೆ. ವಿಶ್ವ ಕಂಡ ಸ್ಟಾರ್ ಪ್ಲೇಯರ್‌ಗಳು ಸಹ ಈ ಲೀಗ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಈ ಲೀಗ್‌ನಲ್ಲಿ ಆಡಿ ಸ್ಟಾರ್ ಪ್ಲೇಯರ್ಸ್ ಸಹ ಸೈ ಎನಿಸಿಕೊಂಡಿದ್ದಾರೆ. 17 ಆವೃತ್ತಿಗಳನ್ನು ಆಡಿದ ಕೆಲವೇ ಕೆಲವು ಆಟಗಾರರು ಇದ್ದಾರೆ. ಆ ಆಟಗಾರರ ಪಟ್ಟಿ ಇಲ್ಲಿದೆ.

ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಐಪಿಎಲ್ ಅನ್ನು ಡೆಲ್ಲಿ ಕ್ಯಾಪಿಟಲ್ಸ್ (ದೆಹಲಿ ಡೇರ್ ಡೆವಿಲ್ಸ್) ಜೊತೆ ಆರಂಭಿಸಿದರು. ಮುಂಬೈ ಇಂಡಿಯನ್ಸ್ ನಂತರ ಅವರು ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್ ಪರ ಇವರು ಆಡಿದ್ದಾರೆ. ಲೀಗ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಧವನ್, ತಮ್ಮ ಹೆಸರಿನಲ್ಲಿ 6000 ಕ್ಕೂ ಹೆಚ್ಚು ಐಪಿಎಲ್ ರನ್‌ಗಳನ್ನು ಹೊಂದಿದ್ದಾರೆ.
2008ರ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ಮನೀಶ್ ಪಾಂಡೆ ಈ ವರ್ಷ ಕೆಕೆಆರ್ ಪರ ಆಡಲಿದ್ದಾರೆ. ಪಾಂಡೆ 2008 ರಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಕೂಡ. ಮನೀಷ್ 170 ಪಂದ್ಯಗಳಲ್ಲಿ 3808 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಎಲ್ಲಾ ಸೀಸನ್‌ಗಳಲ್ಲಿ ಆಡಿದ ನಂತರವೂ ಒಂದೇ ತಂಡದ ಭಾಗವಾಗಿರುವ ಏಕೈಕ ಆಟಗಾರ. 2008 ರಲ್ಲಿ, ದೆಹಲಿಯ ವಿರಾಟ್ ಕೊಹ್ಲಿ RCB ಸೇರಿಕೊಂಡರು. ಐಪಿಎಲ್‌ನಲ್ಲಿ 7000 ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ವಿರಾಟ್.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರ ಹೆಸರು ಅನೇಕರಿಗೆ ಆಶ್ಚರ್ಯವಾಗಬಹುದು. ಸಹಾ IPL 2008 ರ ಮೊದಲ ಪಂದ್ಯದಲ್ಲಿ KKR ನ ಪ್ಲೇಯಿಂಗ್ ಇಲೆವೆನ್‌ನ ಭಾಗವಾಗಿದ್ದರು. ಅವರು ಚೆನ್ನೈ ಮತ್ತು ಗುಜರಾತ್‌ನೊಂದಿಗೆ ಆಡಿ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ 6 ತಂಡಗಳಲ್ಲಿ ಆಡಿದ್ದಾರೆ. ದೆಹಲಿ ಪರ ಪದಾರ್ಪಣೆ ಮಾಡಿದ ನಂತರ, ಅವರು ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, KKR, ಗುಜರಾತ್ ಲಯನ್ಸ್ ಮತ್ತು RCB ನ ಭಾಗವಾಗಿದ್ದಾರೆ. 2024 ಅನ್ನು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕಾರ್ತಿಕ್ ಅವರಿಗೆ ಇದು ಕೊನೆಯ ಋತುವೆಂದು ಪರಿಗಣಿಸಲಾಗಿದೆ.
ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅವರಿಗೆ 42 ವರ್ಷ ತುಂಬಿದೆ. ಇದಾದ ನಂತರವೂ ಅವರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ಕಳೆದ ಋತುವಿನಲ್ಲಿ ಚಾಂಪಿಯನ್ ಆಗಿತ್ತು. CSK ಮೇಲಿನ ನಿಷೇಧದಿಂದಾಗಿ, ಧೋನಿ 2016 ಮತ್ತು 2017 ರ ಋತುಗಳಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದರು.

ರೋಹಿತ್ ಶರ್ಮಾ ತಮ್ಮ ಐಪಿಎಲ್ ವೃತ್ತಿಜೀವನವನ್ನು ಡೆಕ್ಕನ್ ಚಾರ್ಜರ್ಸ್‌ನೊಂದಿಗೆ ಆರಂಭಿಸಿದರು. 2009 ರಲ್ಲಿ, ಅವರು ಪಂದ್ಯಾವಳಿಯ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಸಹ ಪಡೆದರು. 2011ರಲ್ಲಿ ರೋಹಿತ್ ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಗೊಂಡರು. ನಾಯಕನಾಗಿ 5 ಪ್ರಶಸ್ತಿಗಳನ್ನು ಗೆದ್ದಿರುವ ರೋಹಿತ್ ಈ ಬಾರಿ ಆಟಗಾರನಾಗಿ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ.