Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಟಗಾರರ ಲಕ್‌ ಹೇಗೆ ಬದಲಿಸುತ್ತೆ ಸಿಎಸ್‌ಕೆ: ಧೋನಿ ಫನ್ನಿ ಆನ್ಸರ್‌

ಕ್ರಿಕೆಟ್ ಅಂಗಳದಲ್ಲಿ ಫಾರ್ಮ್‌ ಇದ್ದರೆ ಮಾತ್ರ ಆಟಗಾರರಿಗೆ ಬೆಲೆ ಇರುತ್ತದೆ. ಒಂದು ವೇಳೆ ಫಾರ್ಮ್‌ ಇಲ್ಲದೇ ಇದ್ದರೆ ಯಾರು ಅವರತ್ತ ನೋಡುವುದು ಇಲ್ಲ. ಇನ್ನು ಐಪಿಎಲ್‌ನಲ್ಲಿ ಫಾರ್ಮ್ ಇಲ್ಲದ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡು ಕೈ ಸುಟ್ಟುಕೊಳ್ಳಲು ಯಾವ ಫ್ರಾಂಚೈಸಿ ಸಹ ತಯಾರಿರುವುದಿಲ್ಲ. ಆದರೆ, ಐಪಿಎಲ್‌ ಇತಿಹಾಸದಲ್ಲಿ ಈ ಒಂದು ತಂಡ ಎಲ್ಲೂ ಸಲ್ಲದವರನ್ನೂ ಕರೆದು ಮಣೆ ಹಾಕಿ ಕೂರಿಸುತ್ತದೆ. ಅದುವೇ ಐಪಿಎಲ್‌ನ ಮೋಸ್ಟ್‌ ಬೆಸ್ಟ್‌ ಟೀಮ್ ಸಿಎಸ್‌ಕೆ.

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವದಾದ್ಯಂತ ಇವರಿಗೆ ಫ್ಯಾನ್‌ಗಳು ಇದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯ ನಂತರವೂ, ಅಭಿಮಾನಿಗಳು ಧೋನಿಯನ್ನು ನೋಡಲು ಅಥವಾ ಅವರಿಗೆ ಸಂಬಂಧಿಸಿದ ವಿಷಯಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ.

IPL 2024: How Players Luck Will Change CSK: Dhoni Funny Answer

ಮಹೇಂದ್ರ ಸಿಂಗ್ ಧೋನಿ ಈಗ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. IPL 2024 ರ ಮೊದಲು, ಈ ಅನುಭವಿ ಆಟಗಾರನಿಗೆ ಒಂದು ಪ್ರಶ್ನೆಯನ್ನು ಕೇಳಲಾಯಿತು, ಶೇನ್ ವ್ಯಾಟ್ಸನ್‌ನಿಂದ ಅಜಿಂಕ್ಯ ರಹಾನೆವರೆಗೆ, ನಿಮ್ಮ ತಂಡ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಂದ ತಕ್ಷಣ ಬ್ಯಾಟ್ಸ್‌ಮನ್‌ಗಳ ಭವಿಷ್ಯ ಹೇಗೆ ಬದಲಾಗುತ್ತದೆ? ಈ ಪ್ರಶ್ನೆಗೆ ತಮಾಷೆಯ ಉತ್ತರ ನೀಡಿದ ಧೋನಿ ಇದು ನನ್ನ ಸೀಕ್ರೆಟ್ ರೆಸಿಪಿ ಎಂದು ಹೇಳಿದ್ದಾರೆ.

ತಮಾಷೆಯ ಉತ್ತರ

ಈ ಪ್ರಶ್ನೆಗೆ ಉತ್ತರಿಸಿದ ಮಹೇಂದ್ರ ಸಿಂಗ್ ಧೋನಿ, 'ಈ ರೀತಿ ಎಲ್ಲರಿಗೂ ಹೇಳಿದರೆ ಯಾರೂ ನನ್ನನ್ನು ಉಳಿಸಿಕೊಳ್ಳುವುದಿಲ್ಲ. ಹಾಗಾಗಿ ಅದನ್ನು ದೊಡ್ಡ ಕೋಲಾ ಕಂಪನಿಯಂತೆ ರಹಸ್ಯವಾಗಿಡಬೇಕು. ಅವರು ತಮ್ಮ ರಹಸ್ಯ ಪಾಕವಿಧಾನವನ್ನು ಸಾರ್ವಜನಿಕರಿಗೆ ಹೇಳುವುದಿಲ್ಲ.' ಮಹೇಂದ್ರ ಸಿಂಗ್ ಧೋನಿ ಅವರ ಈ ತಮಾಷೆಯ ಉತ್ತರದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಧೋನಿಯ ಈ ಉತ್ತರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

IPL 2024: How Players Luck Will Change CSK: Dhoni Funny Answer

ಧೋನಿ ಐಪಿಎಲ್ ತಯಾರಿ ಆರಂಭಿಸಿದ್ದಾರೆ

ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂಬರುವ IPL 2024 ಗಾಗಿ ತಮ್ಮ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವೀಡಿಯೊದಲ್ಲಿ, ಧೋನಿ ಸಿಎಸ್‌ಕೆ ಪ್ಯಾಡ್‌ಗಳನ್ನು ಧರಿಸಿದ್ದು ಮತ್ತು ಬ್ಯಾಟ್‌ನಿಂದ ಅಭ್ಯಾಸ ಮಾಡುತ್ತಿರುವುದು ಕಂಡು ಬಂದಿದೆ.

ಅಭ್ಯಾಸದ ವೇಳೆ ಧೋನಿ ಉತ್ತಮ ಟಚ್‌ನಲ್ಲಿರುವುದು ಕಂಡುಬಂದಿದೆ. ಅವರ ಬ್ಯಾಟಿಂಗ್ ನೋಡಿದ ಅಭಿಮಾನಿಗಳು ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಅವರು ಹಳೆ ವರಸೆಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಎಂಬು ಜೋಷ್‌ನಲ್ಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ವರ್ಷ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

Story first published: Monday, February 12, 2024, 13:19 [IST]
Other articles published on Feb 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+