IPL 2024: ಸರ್ಫರಾಜ್ ಖಾನ್‌ಗಾಗಿ ಮೂರು ತಂಡಗಳ ನಡುವೆ ಪೈಪೋಟಿ; ಆರ್‌ಸಿಬಿ ಉಳಿದ ಪರ್ಸ್ ಮೊತ್ತವೆಷ್ಟು?
ಭಾರತದ ಯುವ ಬ್ಯಾಟರ್ ಸರ್ಫರಾಜ್ ಖಾನ್ ಮುಂಬರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಆವೃತ್ತಿಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿ ಸೇರಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.
ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲು ಸರ್ಫರಾಜ್ ಖಾನ್ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ತೋರಿಸಿದೆ ಎನ್ನಲಾಗಿದೆ.
ಕಳೆದ ವಾರ ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ ಸರ್ಫರಾಜ್ ಖಾನ್ ಅವರ ಪ್ರಭಾವಶಾಲಿ ಚೊಚ್ಚಲ ಟೆಸ್ಟ್ ಪಂದ್ಯದ ನಂತರ, ಕೆಕೆಆರ್ ತಂಡದ ಮೆಂಟರ್ ಮತ್ತು ಮಾಜಿ ನಾಯಕ ಗೌತಮ್ ಗಂಭೀರ್ ಅವರ ಸಲಹೆಯ ಮೇರೆಗೆ ಈ ಬೆಳವಣಿಗೆ ನಡೆಯುತ್ತಿದೆ.

ಸರ್ಫರಾಜ್ ಖಾನ್ 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಜೊತೆ ಸಹಿ ಹಾಕಿದ ನಂತರ, ಐಪಿಎಲ್ ಪಂದ್ಯಾವಳಿಯನ್ನು ಚೊಚ್ಚಲ ಪ್ರವೇಶ ಮಾಡಿದರು ಮತ್ತು ಅಂತಿಮವಾಗಿ 2019ರ ಋತುವಿನ ಮುಂಚಿತವಾಗಿ ಯುವ ಆಟಗಾರನನ್ನು ಬಿಡುಗಡೆ ಮಾಡಲಾಯಿತು.
ಗಮನಾರ್ಹವಾಗಿ, ಕಳೆದ ವರ್ಷ ಡಿಸೆಂಬರ್‌ನಲ್ಲಿ ದುಬೈನಲ್ಲಿ ನಡೆದ 2024ರ ಐಪಿಎಲ್‌ಗಾಗಿ ನಡೆದ ಮಿನಿ ಆಟಗಾರರ ಹರಾಜಿನಲ್ಲಿ ಸರ್ಫರಾಜ್ ಖಾನ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲು ಮನಸ್ಸು ಮಾಡಲಿಲ್ಲ.
ಬಂಗಾಳಿ ದೈನಂದಿನ ಆನಂದಬಜಾರ್ ಪತ್ರಿಕೆಯ ವರದಿಯ ಪ್ರಕಾರ, ಈ ಹಿಂದೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಆಡಿದ್ದ 26 ವರ್ಷದ ಸರ್ಫರಾಜ್ ಖಾನ್ ಅವರೊಂದಿಗೆ ಸಹಿ ಹಾಕಲು ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಸರ್ಫರಾಜ್ ಖಾನ್ ಅವರ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅಜೇಯ 62 ಮತ್ತು 68ರ ನಂತರ ಮುಂಬರುವ ಆವೃತ್ತಿಗೆ ಸಹಿ ಹಾಕಲು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್‌ಸಿಬಿ ಕೂಡ ಆಸಕ್ತಿ ತೋರಿಸಿವೆ ಎಂದು ವರದಿ ಹೇಳುತ್ತವೆ.
2024ರ ಐಪಿಎಲ್‌ಗಾಗಿ ನಡೆದ ಆಟಗಾರರ ಹರಾಜಿಗೆ ಮುನ್ನ ಸರ್ಫರಾಜ್ ಖಾನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಿಡುಗಡೆಗೊಳಿಸಿತು. ಗಮನಾರ್ಹವಾಗಿ, ಮೂಲ ಬೆಲೆ 20 ಲಕ್ಷ ರೂಪಾಯಿಯಾಗಿದ್ದು, ಎಲ್ಲಾ ಮೂರು ಫ್ರಾಂಚೈಸಿಗಳು ತಮ್ಮ ಉಳಿದ ಪರ್ಸ್‌ನಲ್ಲಿ ಸರ್ಫರಾಜ್ ಖಾನ್ ಪಡೆದುಕೊಳ್ಳಲು ಹೆಚ್ಚಿನ ಹಣವನ್ನು ಹೊಂದಿವೆ.
ಕ್ರಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 2.85 ಕೋಟಿ ರೂಪಾಯಿ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 35 ಕೋಟಿ ರೂಪಾಯಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) 1 ಕೋಟಿ ರೂಪಾಯಿ ಉಳಿದಿದೆ.
ಸರ್ಫರಾಜ್ ಖಾನ್ ಈ ಹಿಂದೆ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಆಡಿದ್ದರು. ಆದರೂ ಅವರು ಯಾವುದೇ ಋತುಗಳಲ್ಲಿ ಉತ್ತಮ ಪ್ರದರ್ಶನ ಬೀರಲಿಲ್ಲ.
85.48ರ ಸ್ಟ್ರೈಕ್ ರೇಟ್ ಮತ್ತು 13.25ರ ಸರಾಸರಿಯೊಂದಿಗೆ, ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ 2023ರ ಐಪಿಎಲ್ ವೇಳೆ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 53 ರನ್ ಗಳಿಸಿದ್ದಾರೆ.
ಸರ್ಫರಾಜ್ ಖಾನ್ ತಮ್ಮ ಐಪಿಎಲ್ ಅಭಿಯಾನದ ಅವಧಿಯಲ್ಲಿ 50 ಪಂದ್ಯಗಳಲ್ಲಿ 22.5ರ ಸರಾಸರಿ ಮತ್ತು 130.58ರ ಸ್ಟ್ರೈಕ್ ರೇಟ್‌ನೊಂದಿಗೆ ಕೇವಲ 585 ರನ್‌ಗಳನ್ನು ಗಳಿಸಿದರು.
ಸರ್ಫರಾಜ್ ಖಾನ್ ಪ್ರಭಾವಿ ಅಂತಾರಾಷ್ಟ್ರೀಯ ಪದಾರ್ಪಣೆ
ಹೈದರಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಗಾಯಗೊಂಡ ನಂತರ, ಸರ್ಫರಾಜ್ ಖಾನ್ ಭಾರತ ತಂಡದಿಂದ ತಮ್ಮ ಮೊದಲ ಕರೆಯನ್ನು ಪಡೆದರು.
ರಾಜ್‌ಕೋಟ್‌ನಲ್ಲಿ ಭಾರತದ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅನಿಲ್ ಕುಂಬ್ಳೆ ಅವರಿಗೆ ಅಂತಾರಾಷ್ಟ್ರೀಯ ಕ್ಯಾಪ್ ನೀಡಿದ ನಂತರ ಸುದ್ದಿಯಾಗಿದ್ದಾರೆ. 26 ವರ್ಷದ ಬಲಗೈ ಬ್ಯಾಟರ್ ಸರ್ಫರಾಜ್ ಖಾನ್ 66 ಎಸೆತಗಳಲ್ಲಿ 62 ರನ್ ಗಳಿಸಿದರು. ಆದರೆ ದುರದೃಷ್ಟವಶಾತ್ ರನೌಟ್ ಆದರು.
ನಂತರ, ಸರ್ಫರಾಜ್ ಖಾನ್ ಎರಡನೇ ಇನ್ನಿಂಗ್ಸ್‌ನಲ್ಲಿ 72 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು. ಇದು ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 434 ರನ್‌ಗಳ ಗೆಲುವಿಗೆ ನಿರ್ಣಾಯಕವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications