IPL 2024: ಐಪಿಎಲ್ ಬಳಿಕ ನಡೆಯಲಿದೆ ಮೆಗಾ ಹರಾಜು; ಉಳಿಸಿಕೊಳ್ಳುವ ಆಟಗಾರರ ಸಂಖ್ಯೆ ಎಷ್ಟು?
2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಋತುವಿನ ಬಳಿಕ, ಮುಂದಿನ ವರ್ಷದ ಆವೃತ್ತಿಗಾಗಿ ಮೆಗಾ ಹರಾಜು ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಖಚಿತಪಡಿಸಿದ್ದಾರೆ.
2024ರ ಐಪಿಎಲ್ ಮಾರ್ಚ್ 22ರಂದು ಚೆಪಾಕ್ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುವುದರೊಂದಿಗೆ ಅದ್ಧೂರಿ ಚಾಲನೆ ಸಿಗಲಿದೆ.
ಪ್ರತಿ ಮೂರು ವರ್ಷಗಳಿಗೊಮ್ಮೆ ಐಪಿಎಲ್ ಮೆಗಾ ಹರಾಜು ನಡೆಸಲಾಗುತ್ತದೆ. ಅಲ್ಲಿ ಪ್ರತಿ ತಂಡಗಳು ತಮ್ಮ ತಂಡದ ಸಂಯೋಜನೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಅವಕಾಶವನ್ನು ಪಡೆಯುತ್ತವೆ.

ಕಳೆದ ವರ್ಷ ದುಬೈನಲ್ಲಿ ಮಿನಿ ಹರಾಜು ನಡೆದಿತ್ತು. ಈ ವೇಳೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಪಾಯಿ ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿದರು.
ಇನ್ನು ಸ್ಪೋರ್ಟ್‌ಸ್ಟಾರ್‌ನೊಂದಿಗೆ ಮಾತನಾಡಿದ ಅರುಣ್ ಧುಮಾಲ್, ಐಪಿಎಲ್‌ನ 2025ರ ಆವೃತ್ತಿಗಾಗಿ ಮೆಗಾ ಹರಾಜು ನಡೆಯಲಿದೆ ಎಂದು ಖಚಿತಪಡಿಸಿದರು. ಅಲ್ಲಿ ಪ್ರತಿ ತಂಡವು ಮೆಗಾ ಹರಾಜಿನ ಮೊದಲು 3-4 ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸಲಾಗಿದೆ.
"ಈ ವರ್ಷದ ಐಪಿಎಲ್ ನಂತರ ನಾವು ಖಚಿತವಾಗಿ ಮೆಗಾ ಹರಾಜನ್ನು ಹೊಂದಿದ್ದೇವೆ. ಅಲ್ಲಿ ತಂಡಗಳು ಮೂರು-ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬಹುದು ಮತ್ತು ನಂತರ ಹೊಸ ತಂಡವನ್ನು ರಚಿಸಬಹುದು. ಅದು ಹೆಚ್ಚು ಆಸಕ್ತಿಕರವಾಗಿಸುತ್ತದೆ ಮತ್ತು ಅದೇ ಸ್ವರೂಪವು ಮುಂದುವರಿಯುತ್ತದೆ. ಮೆಗಾ ಹರಾಜು ಈ ಹಿಂದೆ ನಡೆದಂತೆ ದೊಡ್ಡದಾಗಿ ನಡೆಯಲಿ ಎಂದು ಹಾರೈಸುತ್ತೇನೆ," ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಹೇಳಿದರು.
2022ರಲ್ಲಿ ನಡೆದ ಐಪಿಎಲ್‌ನ ಕೊನೆಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹತ್ತು ಫ್ರಾಂಚೈಸಿಗಳಿಗೆ ಒಟ್ಟು 204 ಆಟಗಾರರು 551 ಕೋಟಿ ರೂಪಾಯಿಗೆ ಖರೀದಿಯಾಗಿದ್ದರು.
"ಆಶಾದಾಯಕವಾಗಿ, ಮೆಗಾ ಹರಾಜಿನಲ್ಲಿ ನಾವು ಈ ಹಿಂದೆ ಭಾರತ ಮತ್ತು ಇತರ ದೇಶಗಳಿಂದ ಬರುವ ಹೊಸ ಪ್ರತಿಭೆಗಳನ್ನು ನೀಡಿದ್ದಷ್ಟು ದೊಡ್ಡದಾಗಿದೆ ಮತ್ತು ಉತ್ತಮವಾಗಿರುತ್ತದೆ. ಅಫ್ಘಾನಿಸ್ತಾನದಂತಹ ತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಪ್ರಯೋಜನ ಪಡೆದಿವೆ," ಎಂದು ಅರುಣ್ ಧುಮಾಲ್ ತಿಳಿಸಿದರು.
ಜೂನ್ 2ರಂದು ಪ್ರಾರಂಭವಾಗಲಿರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಗಮನದಲ್ಲಿಟ್ಟುಕೊಂಡು 2024ರ ಐಪಿಎಲ್ ಪಂದ್ಯಾವಳಿಯನ್ನು ಮೇ 25 ಅಥವಾ 26ರಂದು ಕೊನೆಗೊಳಿಸಲು ಯೀಜಿಸಲಾಗಿದೆ ಎಂದು ಅರುಣ್ ಧುಮಾಲ್ ಹೇಳಿದ್ದಾರೆ.
2024ರ ಐಪಿಎಲ್‌ಗಾಗಿ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಏಕೆಂದರೆ ಪಂದ್ಯಾವಳಿಯು ಲೋಕಸಭೆ ಚುನಾವಣೆ ದಿನಾಂಕದೊಂದಿಗೆ ಘರ್ಷಣೆಯಾಗಬಹುದು.
"ಈ ಬಾರಿಯ ಸವಾಲು ಏನೆಂದರೆ, ನಾವು ಜೂನ್ ಮೊದಲ ವಾರದಲ್ಲಿ ಟಿ20 ವಿಶ್ವಕಪ್‌ನೊಂದಿಗೆ ಪ್ರಾರಂಭಿಸುತ್ತಿದ್ದೇವೆ ಮತ್ತು ಭಾರತ ಸೇರಿದಂತೆ ಹಲವು ತಂಡಗಳು ಯುಎಸ್‌ಎಗೆ ಪ್ರಯಾಣಿಸಬೇಕಾಗಿರುವುದರಿಂದ ಮೇ 25 ಅಥವಾ ಮೇ 26ರೊಳಗೆ ಪಂದ್ಯಾವಳಿಯನ್ನು ಮುಗಿಸಲು ನಾವು ಯೋಜಿಸಿದ್ದೇವೆ. ಪಂದ್ಯಗಳು ನಡೆಯುವ ಮೈದಾನಗಳು ಸಂಪೂರ್ಣವಾಗಿ ವಿಭಿನ್ನವಾಗಿರಲಿವೆ," ಎಂದು ಅರುಣ್ ಧುಮಾಲ್ ಹೇಳಿದರು.
"ಮೊದಲ ಬಾರಿಗೆ ಐಪಿಎಲ್ ಪಂದ್ಯಾವಳಿಯು ಹೊಸ ಸ್ಥಳಗಳಲ್ಲಿ ನಡೆಯಲಿದೆ ಮತ್ತು ಇದು ಹೊಸ ವಿಷಯವಾಗಿದೆ. ಆದ್ದರಿಂದ ಪಂದ್ಯಾವಳಿಗೂ ಮುನ್ನ ಕೆಲವು ರೀತಿಯ ಅಭ್ಯಾಸ ಪಂದ್ಯಗಳನ್ನು ಆಡಲು ಆಟಗಾರರು ಬೇಗನೆ ಅಲ್ಲಿಗೆ ಬರಬೇಕು," ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದರು.
ಆರ್‌ಸಿಬಿ ಮತ್ತು ಸಿಎಸ್‌ಕೆ ತಮ್ಮ 2024ರ ಐಪಿಎಲ್ ಅಭಿಯಾನವನ್ನು ಗೆಲುವಿನ ಮೂಲಕ ಉತ್ತಮ ಆರಂಭ ಪಡೆಯಲು ಎದುರು ನೋಡುತ್ತಿವೆ. ಸಿಎಸ್‌ಕೆ ತಂಡ ಒಂಬತ್ತನೇ ಬಾರಿಗೆ ಪಂದ್ಯಾವಳಿಯ ಆರಂಭಿಕ ಪಂದ್ಯವನ್ನು ಆಡಲು ಸಜ್ಜಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications