IPL 2024: ಆರ್‌ಸಿಬಿ vs ಗುಜರಾತ್ ಟೈಟನ್ಸ್ ಪಂದ್ಯ ನಡೆಯೋದು ಡೌಟ್?; ಹೇಗಿದೆ ಬೆಂಗಳೂರು ಹವಾಮಾನ ವರದಿ?
ಶನಿವಾರ, ಮೇ 4ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 52ನೇ ಮಹತ್ವದ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟನ್ಸ್ (ಜಿಟಿ) ತಂಡಗಳು ಕಾಳಗ ನಡೆಸಲು ಸಜ್ಜಾಗಿವೆ.
ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸುವ ಮೂಲಕ ಸದ್ಯ ನಡೆಯುತ್ತಿರುವ ಐಪಿಎಲ್ ಅಭಿಯಾನ ಮುಂದುವರೆಸಿದೆ.

ಪ್ರಸಕ್ತ ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡ ಅತ್ಯಂತ ಕಳಪೆ ಋತುವನ್ನು ಹೊಂದಿದೆ. ಐಪಿಎಲ್ 2024ರಲ್ಲಿ ಆರ್‌ಸಿಬಿ ಆಡಿದ 10 ಪಂದ್ಯಗಳಲ್ಲಿ ಕೇವಲ 3 ಗೆಲುವುಗಳನ್ನು ದಾಖಲಿಸಿದೆ ಮತ್ತು ಉಳಿದ 7 ಪಂದ್ಯಗಳಲ್ಲಿ ಸೋತಿದೆ.
ಆದಾಗ್ಯೂ, ಆರ್‌ಸಿಬಿ ತಂಡವು ಇತ್ತೀಚೆಗೆ ತನ್ನ ಫಾರ್ಮ್ ಕಂಡುಕೊಂಡಿದ್ದು, ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ತನ್ನ ಹಿಂದಿನ ಪಂದ್ಯದಲ್ಲಿ ಇದೇ ಗುಜರಾತ್ ಟೈಟನ್ಸ್ ವಿರುದ್ಧ ಅದ್ಭುತ ಗೆಲುವು ದಾಖಲಿಸಿದ ನಂತರ, ಶುಭ್ಮನ್ ಗಿಲ್ ನಾಯಕತ್ವದ ತಂಡದ ವಿರುದ್ಧ ಸತತ ಎರಡನೇ ಗೆಲುವು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.

ಮತ್ತೊಂದೆಡೆ, ಗುಜರಾತ್ ಟೈಟನ್ಸ್ ತಂಡ ಐಪಿಎಲ್ 2024ರಲ್ಲಿ ಸಾಧಾರಣ ಪ್ರದರ್ಶನ ನೀಡಿದೆ. ಆಡಿದ 10 ಪಂದ್ಯಗಳಲ್ಲಿ 4 ಗೆಲುವುಗಳು ಮತ್ತು 6 ಸೋಲುಗಳೊಂದಿಗೆ, ಒಟ್ಟು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ತಮ್ಮ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೋತ ಬಳಿಕ ಗುಜರಾತ್ ಟೈಟನ್ಸ್ ತಂಡವು ಸೋಲಿನ ಸರಣಿಯನ್ನು ತಪ್ಪಿಸುವ ಗುರಿಯನ್ನು ಹೊಂದಿದೆ. ಈ ಐಪಿಎಲ್ 2024ರ ಆವೃತ್ತಿಯ ಐದನೇ ಗೆಲುವನ್ನು ದಾಖಲಿಸಿ ಅಂಕಪಟ್ಟಿಯಲ್ಲಿ ಆಶಾದಾಯಕವಾಗಿ ಮೇಲೆ ಏರಲು ಎದುರು ನೋಡುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಡಲಿದ್ದು, ಕಳೆದ 24 ಗಂಟೆಗಳಲ್ಲಿ ಏಕಾಏಕಿ ಸುರಿದ ಮಳೆಯಿಂದಾಗಿ ಅಭಿಮಾನಿಗಳು ಮತ್ತು ಆಟಗಾರರು ಆಕಾಶದ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಶಾಖದ ಅಲೆಯಿಂದ ಬಳಲುತ್ತಿರುವ ನಾಗರಿಕರಿಗೆ ಸಮಾಧಾನ ತಂದಿದೆ.
ಅಕ್ಯುವೆದರ್ ಪ್ರಕಾರ, ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದ ವೇಳೆ ಮಳೆ ಬೀಳುವ ಸಾಧ್ಯತೆ ಕಡಿಮೆ. ಹೀಗಾಗಿ ಅಭಿಮಾನಿಗಳು ಹೆಚ್ಚು ನಿರೀಕ್ಷಿತ ಪಂದ್ಯವು ಮಳೆಯಿಂದ ರದ್ದಾಗುವ ಬಗ್ಗೆ ಚಿಂತಿಸಬೇಕಾಗಿಲ್ಲ.

ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ವರದಿ
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಟಿ20 ಕ್ರಿಕೆಟ್‌ನಲ್ಲಿ ಸಮತೋಲಿತ ಸ್ಥಿತಿಯನ್ನು ನೀಡುತ್ತದೆ. ಬ್ಯಾಟ್‌ಗೆ ಚೆನ್ನಾಗಿ ಬಾಲ್ ಬರುವುದರಿಂದ, ಹೈ-ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು. ಮೊದಲು ಬೌಲಿಂಗ್ ಆಯ್ಕೆ ಮಾಡುವುದು ಮತ್ತು ಟಾರ್ಗೆಟ್ ಬೆನ್ನಟ್ಟುವುದು ಜಾಣ್ಮೆಯ ನಿರ್ಧಾರವೆಂದು ಸಾಬೀತಾಗಿದೆ.
ಐಪಿಎಲ್ 2024ರ ಆರ್‌ಸಿಬಿ vs ಜಿಟಿ ಪಂದ್ಯದ ಹವಾಮಾನ ವರದಿ
160 ದಿನಗಳ ಕಾಲ ಮಳೆಯಿಲ್ಲದೆ ಬಿಸಿಲ ಬೇಗೆಯಲ್ಲಿ ಬೆಂದಿದ್ದ ಬೆಂಗಳೂರು ನಗರ ಇತಿಹಾಸದಲ್ಲಿಯೇ ಅತ್ಯಂತ ಶುಷ್ಕ ವಾತಾವರಣ ಹೊಂದಿತ್ತು ಎಂಬುದು ಕುತೂಹಲಕಾರಿ ಸಂಗತಿ. ಆದರೆ ಕಳೆದ ಎರಡು ದಿನಗಳ ಸುರಿದ ಸಾಧಾರಣ ಮಳೆಯಿಂದಾಗಿ ವಾತಾವರಣ ಸ್ವಲ್ಪ ಸುಧಾರಿಸಿದೆ.
ಇನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರೋಚಕ ಹಾಗೂ ನಿರ್ಣಾಯಕ ಪಂದ್ಯ ಸಮೀಪಿಸುತ್ತಿದ್ದಂತೆ, ಅಭಿಮಾನಿಗಳಿಗೆ ಸಿಹಿ ಸುದ್ದಿ ಕಾದಿದೆ. ಏಕೆಂದರೆ ಪಂದ್ಯದ ಮೇಲೆ ಮಳೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ ಎಂಬುದು ಗೊತ್ತಾಗಿದೆ.
ಹವಾಮಾನ ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಶನಿವಾರ ಸಂಜೆ ಹೊತ್ತಿಗೆ ಮಳೆಯಾಗುವ ಸಾಧ್ಯತೆ ತುಂಬಾ ಕಡಿಮೆ. ರಾತ್ರಿಯ ಸಮಯದಲ್ಲಿ ತಾಪಮಾನವು 23 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ವೆಬ್‌ಸೈಟ್ ತೋರಿಸುತ್ತದೆ ಮತ್ತು ಗುಡುಗು ಸಹಿತ ಶೇ.1ರಷ್ಟು ಮಳೆ ಸಂಭವನೀಯತೆ ಇರುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications