ಶನಿವಾರ, ಮಾರ್ಚ್ 16ರಂದು ವಿಕೆಟ್ ಕೀಪರ್-ಬ್ಯಾಟರ್ ರಾಬಿನ್ ಮಿಂಜ್ ಭೀಕರ ಬೈಕ್ ಅಪಘಾತದಲ್ಲಿ ಗಾಯಗೊಂಡ ನಂತರ, ಮಾಜಿ ಚಾಂಪಿಯನ್ ಗುಜರಾತ್ ಟೈಟನ್ಸ್ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆತನ ಸೇವೆಗಳನ್ನು ಕಳೆದುಕೊಳ್ಳಲಿದೆ.
ರಾಬಿನ್ ಮಿಂಜ್ ಅವರನ್ನು ಗುಜರಾತ್ ಟೈಟನ್ಸ್ ಫ್ರಾಂಚೈಸಿಯು 3.60 ಕೋಟಿ ರೂಪಾಯಿಗೆ ಖರೀದಿಸಿದರು. ಐಪಿಎಲ್ ಹರಾಜಿನ ಇತಿಹಾಸದಲ್ಲಿ ಆಯ್ಕೆಯಾದ ಮೊದಲ ಬುಡಕಟ್ಟು ಆಟಗಾರನಾಗಿದ್ದಾರೆ.

ಆದಾಗ್ಯೂ, ಗುಜರಾತ್ ಟೈಟನ್ಸ್ ತಂಡವು ಇದೀಗ ಕರ್ನಾಟಕದ ವಿಕೆಟ್‌ಕೀಪರ್-ಬ್ಯಾಟರ್ ಬಿಆರ್ ಶರತ್ ಅವರನ್ನು ರಾಬಿನ್ ಮಿಂಜ್ ಬದಲಿಯಾಗಿ ಸೇರಿಸಿರುವುದರಿಂದ, ಜಾರ್ಖಂಡ್‌ನ ಯುವ ಕ್ರಿಕೆಟಿಗ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಚೊಚ್ಚಲ ಪ್ರವೇಶಕ್ಕಾಗಿ ಕಾಯಬೇಕಾಗಿದೆ.
ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಬಲವಂತದ ಬದಲಾವಣೆಯನ್ನು ಮಾಡಲಾಗಿದೆ. ವೈಯಕ್ತಿಕ ಕಾರಣಗಳಿಂದ ಆಸ್ಟ್ರೇಲಿಯಾ ಸ್ಪಿನ್ನರ್ ಆಡಮ್ ಝಂಪಾ ಅವರು ಪಂದ್ಯಾವಳಿಯಿಂದ ಹೊರಗುಳಿದ ನಂತರ, ಸಂಜು ಸ್ಯಾಮ್ಸನ್ ನಾಯಕತ್ವದ ತಂಡವು ಮುಂಬೈ ಆಫ್ ಸ್ಪಿನ್ನರ್ ತನುಷ್ ಕೋಟ್ಯಾನ್ ಅವರನ್ನು ಬದಲಿಯಾಗಿ ಸೇರಿಸಿಕೊಂಡಿದೆ.
ಇನ್ನು ಬಿಆರ್ ಶರತ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 28 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 15.61ರ ಸರಾಸರಿ ಮತ್ತು 118.84ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಈ ಅಂಕಿಅಂಶಗಳು ಉತ್ತಮ ಪ್ರದರ್ಶನಕ್ಕೆ ಕಾರಣವಾಗದಿದ್ದರೂ, ನಿರಾಶಾದಾಯಕ ದೇಶೀಯ ಸಂಖ್ಯೆಯ ಹಿನ್ನೆಲೆಯಲ್ಲಿ ಪಂದ್ಯಾವಳಿಗೆ ಬಂದ ನಂತರ, ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅನೇಕ ಆಟಗಾರರ ಉದಾಹರಣೆಗಳಿವೆ.
ಇದೇ ವೇಳೆ, ತನುಷ್ ಕೋಟ್ಯಾನ್ ಈ ವರ್ಷ ಮುಂಬೈನ ರಣಜಿ ಟ್ರೋಫಿ ವಿಜೇತ ಅಭಿಯಾನದ ಸ್ಟಾರ್ ಪ್ರದರ್ಶನಕಾರರಲ್ಲಿ ಒಬ್ಬರಾಗಿದ್ದರು. ಅವರು 29 ವಿಕೆಟ್‌ಗಳನ್ನು ಪಡೆದರು. ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಸಹ ಗಳಿಸಿದರು.
ತನುಷ್ ಕೋಟ್ಯಾನ್ ತಮ್ಮ ಟಿ20 ವೃತ್ತಿಜೀವನದಲ್ಲಿ 23 ಪಂದ್ಯಗಳಿಂದ 20.04ರ ಸರಾಸರಿಯಲ್ಲಿ 24 ವಿಕೆಟ್ ಪಡೆದಿದ್ದಾರೆ. ಅವರು ಕೇವಲ 6.07ರ ಎಕಾನಮಿ ದರವನ್ನು ಹೊಂದಿದ್ದಾರೆ.
ಐಪಿಎಲ್ 2024ರಲ್ಲಿ ಅವಕಾಶ ಸಿಕ್ಕರೆ 25 ವರ್ಷದ ತನುಷ್ ಕೋಟ್ಯಾನ್ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ ಮತ್ತು ಆಡಲು ಬಯಸುತ್ತಾರೆ.
ರಾಜಸ್ಥಾನ ರಾಯಲ್ಸ್‌ನ ಕ್ರಿಕೆಟ್ ನಿರ್ದೇಶಕ ಕುಮಾರ ಸಂಗಕ್ಕಾರ ಅವರು ಯುವ ಆಲ್‌ರೌಂಡರ್ ತನುಷ್ ಕೋಟ್ಯಾನ್ ಅವರನ್ನು ಫ್ರಾಂಚೈಸಿಗೆ ಸ್ವಾಗತಿಸಿದರು.
"ತನುಷ್ ನಾವು ಗುರುತಿಸಿದ ಆಟಗಾರರಲ್ಲಿ ಒಬ್ಬರು. ಆತನ ಬಹುಮುಖ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಕಳೆದ ವರ್ಷದಲ್ಲಿ ಬಹಳ ನಿಕಟವಾಗಿ ಅನುಸರಿಸಿದ್ದೇವೆ".
"ಅಂದಿನಿಂದ ತನುಷ್ ಕೋಟ್ಯಾನ್ ಸ್ಥಿರವಾದ ಪ್ರದರ್ಶನ ನೀಡಿದ್ದಾರೆ ಮತ್ತು ಅಸಾಧಾರಣ ರಣಜಿ ಟ್ರೋಫಿ ಋತುವನ್ನು ಸಹ ಹೊಂದಿದ್ದಾರೆ. ಅವರು ತಮ್ಮ ಆಲ್‌ರೌಂಡ್ ಸಾಮರ್ಥ್ಯದೊಂದಿಗೆ ತಂಡದ ಸೆಟಪ್‌ಗೆ ಹೆಚ್ಚಿನ ಮೌಲ್ಯ ಮತ್ತು ಡೆಪ್ತ್ ಸೇರಿಸಬಹುದು ಮತ್ತು ಈ ಋತುವಿನಲ್ಲಿ ಫ್ರಾಂಚೈಸಿಗೆ ಕೊಡುಗೆ ನೀಡಲು ನಾವು ಎದುರು ನೋಡುತ್ತಿದ್ದೇವೆ," ಎಂದು ಕುಮಾರ ಸಂಗಕ್ಕಾರ ಹೇಳಿದರು.