IPL 2024: ಡೂಪ್ಲಿಕೇಟ್ ಶಿಖರ್ ಧವನ್ ಕಂಡು ಬಿದ್ದು ಬಿದ್ದು ನಕ್ಕ ಕೊಹ್ಲಿ
ಕ್ರಿಕೆಟ್ ಆಟಗಾರರಿಗೆ ಅಭಿಮಾನಿಗಳು ಇರುವುದು ಸಹಜ. ಕ್ರಿಕೆಟ್ ಆಟಗಾರರಂತೆ ಕಾಣುವ ಅಭಿಮಾನಿಗಳು ಸಹ ನಮ್ಮ ನಡುವೆ ಇದ್ದಾರೆ. ಅವರಿಗೂ ಕ್ರಿಕೆಟ್ ಫ್ಯಾನ್ಸ್ ಅಷ್ಟೇ ಪ್ರೀತಿಯನ್ನು ನೀಡುತ್ತಾರೆ. ಅವರೊಂದಿಗೂ ಫೋಟೋ ಹೊಡಿಸಿಕೊಂಡು, ಓರಿಜನಲ್ ಹೀರೋಗಳ ಜತೆಗೆ ಫೋಟೋ ಹೊಡಿಸಿಕೊಂಡಷ್ಟೇ ಹಿರಿ ಹಿರಿ ಹಿಗ್ಗುತ್ತಾರೆ.
ಇಷ್ಟೆಲ್ಲಾ ಪೀಠಿಕೆ ಹಾಕಲು ಒಂದು ಕಾರಣ ಇದೆ. ಅದೆನ್ನಪ್ಪಾ ಅಂದರೆ, ಸೋಮವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಕಾದಾಟ ನಡೆಯಿತು. ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುವ ವೇಳೆ ಕ್ಯಾಮೇರಾ ಅಭಿಮಾನಿಯೊಬ್ಬನ ಮೇಲೆ ಪೋಕಸ್ ಮಾಡಿತು. ಆ ದೃಶ್ಯವನ್ನು ಕಂಡು ವಿರಾಟ್ ಸಹ ನಕ್ಕರು.

ಆಗಿದ್ದೇನು?
ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುವಾಗ ಈ ದೃಶ್ಯ ಸೆರೆಯಾಗಿದೆ. ಪಂದ್ಯದ 18ನೇ ಓವರ್ ಬೌಲ್ ಮಾಡಲು ಮುಂದಾಗಿದ್ದ ಯಶ್ ದಯಾಳ್ ಮೊದಲ ಎಸೆತವನ್ನು ಎಸೆದಿದ್ದರು. ಎರಡನೇ ಎಸೆತಕ್ಕೆ ಟೈಮ್ ತೆಗೆದುಕೊಂಡರು. ಸಿಕ್ಕ ಕೊಂಚ ಸಮಯದಲ್ಲೇ ಕ್ಯಾಮೆರಾ ಮೆನ್ ತನ್ನ ಕಲೆಯನ್ನು ಪ್ರದರ್ಶಿಸಿದ್ದಾರೆ. ಮೊದಲು ಓರಿಜನಲ್ ಶಿಖರ್ ಧವನ್ ಮೇಲೆ ಕ್ಯಾಮೆರಾ ಫೋಕಸ್ ಮಾಡಿದರು. ನಂತರ ಸರ್ರನೆ ಡೂಪ್ಲೀಕೆಟ್ ಶಿಖರ್‌ನತ್ತ ಕ್ಯಾಮೆರಾ ಪ್ಯಾನ್ ಮಾಡಿದರು.
ಡೂಪ್ಲಿಕೇಟ್ ಶಿಖರ್ ಧವನ್ ಅವರ ದೃಶ್ಯ ದೊಡ್ಡ ಪರದೆಯ ಮೇಲೆ ಬರುತ್ತಿದ್ದಂತೆ ಬೌಂಡರಿ ಗೆರೆಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ, ಈ ದೃಶ್ಯವನ್ನು ನೋಡಿ ಸಿಕ್ಕಾ ಪಟ್ಟಿ ನಕ್ಕರು.

ಕೊಹ್ಲಿ ನಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶಿಖರ್ ಧವನ್ ಡಗೌಟ್‌ನಲ್ಲಿ ಕುಳಿತಿರುವುದು ಮತ್ತು ಇನ್ನೊಂದು ಬದಿಯಲ್ಲಿ ವಿರಾಟ್ ಕೊಹ್ಲಿ ಹೀರೋ ಕ್ಯಾಮ್ ಮೂಲಕ ಗೋಚರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ನಂತರ ಎರಡನೇ ಕ್ಯಾಮೆರಾ ಇದ್ದಕ್ಕಿದ್ದಂತೆ ಸ್ಟ್ಯಾಂಡ್‌ನಲ್ಲಿ ಕುಳಿತಿರುವ ಶಿಖರ್ ಧವನ್ ಅವರ ಮುಖವನ್ನು ನೋಡಿದ ಕೊಹ್ಲಿಗೆ ನಗಲು ಕಂಟ್ರೋಲ್ ಆಗಲೇ ಇಲ್ಲ. ಕೊಹ್ಲಿ ತುಂಬ ಹೊತ್ತು ನಗುತ್ತಾರೆ.
ಈ ರೀತಿ ಡೂಪ್ಲಿಕೇಟ್ ವ್ಯಕ್ತಿ ಬರೀ ಶಿಖರ್ ಧವನ್ ರೀತಿ ಕಾಣುವ ವ್ಯಕ್ತಿ ಒಬ್ಬನೇ ಇಲ್ಲ. ಸೂಪರ್ ಸ್ಟಾರ್ ಸಚಿನ್ ತೆಂಡೂಲ್ಕರ್, ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಅವರನ್ನು ಹೋಲುವ ಡೂಪ್ಲಿಕೇಟ್ ವ್ಯಕ್ತಿಗಳು ಇದ್ದಾರೆ. ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಪ್ರತಿಷ್ಠಾನದ ವೇಳೆ ಈ ಇಬ್ಬರು ಕಾಣಿಸಿಕೊಂಡಿದ್ದರು. ಇವರನ್ನು ಕಂಡು ಅಭಿಮಾನಿಗಳು ಹಿರಿ ಹಿರಿ ಹಿಗ್ಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications