IPL 2024: ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಎಂಎಸ್ ಧೋನಿ!
ಭಾನುವಾರ, ಏಪ್ರಿಲ್ 28ರಂದು ಚೆನ್ನೈ ಸೂಪರ್ ಕಿಂಗ್ಸ್ ಲೆಜೆಂಡ್ ಎಂಎಸ್ ಧೋನಿ ಅವರು ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ರಚಿಸಿದ್ದಾರೆ. ಶ್ರೀಮಂತ ಟಿ20 ಕ್ರಿಕೆಟ್ ಪಂದ್ಯಾವಳಿಯ ಇತಿಹಾಸದಲ್ಲಿ 150 ಗೆಲುವುಗಳ ಭಾಗವಾಗಿರುವ ಮೊದಲ ಆಟಗಾರ ಎನಿಸಿದರು.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಕೇವಲ 134 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು 78 ರನ್‌ಗಳ ಬೃಹತ್ ಅಂತರದ ಗೆಲುವಿನ ಬಳಿಕ ಎಂಎಸ್ ಧೋನಿ ಈ ಸಾಧನೆ ಮಾಡಿದರು.

2008ರ ಉದ್ಘಾಟನಾ ಆವೃತ್ತಿಯಿಂದ ಟಿ20 ಲೀಗ್‌ನ ಭಾಗವಾಗಿರುವ ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿ ಐಪಿಎಲ್‌ನಲ್ಲಿ ಈವರೆಗೆ 259 ಪಂದ್ಯಗಳನ್ನು ಆಡಿದ್ದಾರೆ. ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ ಅಗ್ರಜನಾಗಿದ್ದಾರೆ.
ಇನ್ನು 42 ವರ್ಷದ ಎಂಎಸ್ ಧೋನಿ ಐಪಿಎಲ್‌ನಲ್ಲಿ 5 ಪ್ರಶಸ್ತಿಗಳೊಂದಿಗೆ ಜಂಟಿ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಸದ್ಯ ನಡೆಯುತ್ತಿರುವ ಆವೃತ್ತಿಗೆ ಮುಂಚಿತವಾಗಿ ಎಂಎಸ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದರು.

ಐಪಿಎಲ್‌ನಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆದ್ದಿರುವ ಆಟಗಾರರು
1. ಎಂಎಸ್ ಧೋನಿ - 150
2. ರವೀಂದ್ರ ಜಡೇಜಾ - 133
3. ರೋಹಿತ್ ಶರ್ಮಾ - 133
4. ದಿನೇಶ್ ಕಾರ್ತಿಕ್ - 125
5. ಸುರೇಶ್ ರೈನಾ - 122
ಅಲ್ಲದೆ, ಎಂಎಸ್ ಧೋನಿ ಈಗಾಗಲೇ 133 ಗೆಲುವಿನೊಂದಿಗೆ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ನಾಯಕನ ದಾಖಲೆಯನ್ನು ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ 87 ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಭಾನುವಾರದಂದು ರುತುರಾಜ್ ಗಾಯಕ್ವಾಡ್ ಅವರು 98 ರನ್ ಗಳಿಸಿ ಔಟಾದ ಬಳಿಕ ಸಿಎಸ್‌ಕೆ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಮೈದಾನಕ್ಕಿಳಿದ ಎಂಎಸ್ ಧೋನಿ ಚೆಪಾಕ್‌ನಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಮತ್ತೊಂದು ಅತಿಥಿ ಪಾತ್ರವನ್ನು ನಿರ್ವಹಿಸಿದರು.
ಎಂಎಸ್ ಧೋನಿ ತಾವು ಎದುರಿಸಿದ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು ಮತ್ತು ನಂತರದ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡು 2 ಎಸೆತಗಳಲ್ಲಿ ಅಜೇಯ 5 ರನ್ ಗಳಿಸಿ ಸಿಎಸ್‌ಕೆ ತಂಡವನ್ನು 212 ರನ್‌ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೂರು ವಿಭಾಗಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪ್ರಾಬಲ್ಯ ಸಾಧಿಸಿದ ದಿನದಂದು ಎಂಎಸ್ ಧೋನಿ ವಿಕೆಟ್‌ಗಳ ಹಿಂದೆ ಕ್ಯಾಚ್ ಪಡೆದರು.
ಡ್ಯಾರಿಲ್ ಮಿಚೆಲ್ ಸ್ಫೋಟಕ ಅರ್ಧಶತಕದೊಂದಿಗೆ ಫಾರ್ಮ್‌ಗೆ ಮರಳಿದರು ಮತ್ತು ಐಪಿಎಲ್ ದಾಖಲೆಯನ್ನು ಸರಿಗಟ್ಟಲು 5 ಔಟ್‌ಫೀಲ್ಡ್ ಕ್ಯಾಚ್‌ಗಳನ್ನು ಪಡೆದರು.
ಐಪಿಎಲ್ 2024ರಲ್ಲಿ ಎಂಎಸ್ ಧೋನಿ ತಮ್ಮ ಅತಿಥಿ ಪಾತ್ರಗಳಲ್ಲಿ ಬ್ಯಾಟ್‌ನಿಂದ ಅತ್ಯುತ್ತಮವಾಗಿದ್ದಾರೆ. ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ಕೇವಲ 37 ಎಸೆತಗಳಲ್ಲಿ 257ರ ಸ್ಟ್ರೈಕ್ ರೇಟ್‌ನಲ್ಲಿ 96 ರನ್ ಬಾರಿಸಿದ್ದಾರೆ.
ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ವಿಶೇಷವಾಗಿತ್ತು. ಸತತವಾಗಿ 3 ಸಿಕ್ಸರ್‌ಗಳನ್ನು ಬಾರಿಸಿ 4 ಎಸೆತಗಳಲ್ಲಿ 20 ರನ್‌ಗಳೊಂದಿಗೆ ಮುಗಿಸಿದರು.
ಇನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 78 ರನ್‌ಗಳ ಗೆಲುವಿನೊಂದಿಗೆ, ಸಿಎಸ್‌ಕೆ ತಂಡ ಅಂಕಪಟ್ಟಿಯಲ್ಲಿ ಅಗ್ರ 4ರೊಳಗೆ ಪ್ರವೇಶಿಸಿತು. ಆಡಿದ 9 ಪಂದ್ಯಗಳಿಂದ 10 ಅಂಕಗಳನ್ನು ಹೊಂದಿದೆ ಮತ್ತು 3ನೇ ಸ್ಥಾನಕ್ಕೇರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications