ಬಾಂಗ್ಲಾದೇಶ ತಂಡ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಶ್ರೀಲಂಕ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದೆ. ಸೋಮವಾರ (ಮಾ.4)ರಂದು ನಡೆದ ಪಂದ್ಯದಲ್ಲೂ ಶ್ರೀಲಂಕಾ ಮೂರು ರನ್ ಜಯವನ್ನು ಸಾಧಿಸಿದೆ. ಇದು ನಿಜಕ್ಕೂ ಖುಷಿಯ ಸುದ್ದಿ. ಆದರೆ ಈ ಪಂದ್ಯದಲ್ಲಿ ಒಬ್ಬ ಪ್ಲೇಯರ್ ನೀಡಿದ ಪ್ರದರ್ಶನ ನಿಜಕ್ಕೂ ಸಿಎಸ್‌ಕೆ ತಂಡದ ಟೆನ್ಷನ್ ಹೆಚ್ಚು ಮಾಡಿದೆ.
ಒಬ್ಬ ಸ್ಟಾರ್ ಆಟಗಾರ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಈ ಆಟಗಾರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ಪರ ಯುವ ಬೌಲರ್ ಮತಿಶ ಪತಿರಾನ ದುಬಾರಿ ಎನಿಸಿದ್ದಾರೆ.

ಮತಿಶ ಪತಿರಾನ ಮೊದಲ ಓವರ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿ ಕೇವಲ 2 ರನ್ ನೀಡಿ ಒಂದು ವಿಕೆಟ್ ಪಡೆದರು. ಆದರೆ ಇದರ ನಂತರ ಅವರ ಬೌಲಿಂಗ್ ಹಳಿತಪ್ಪಿತು ಮತ್ತು ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳು ಇವರ ವಿರುದ್ಧ ರನ್ ಮಳೆ ಸುರಿಸಿದರು. ಇವರ ಮುಂದಿನ ಮೂರು ಓವರ್‌ಗಳಲ್ಲಿ 54 ರನ್ ಹರಿದು ಬಂದವು. ಅವರು ಪಂದ್ಯದ ನಾಲ್ಕು ಓವರ್‌ಗಳಲ್ಲಿ 56 ರನ್ ನೀಡಿದರು. ಈ ಅವಧಿಯಲ್ಲಿ ಅವರ ಎಕನಾಮಿ 14.00 ಆಗಿತ್ತು.
ಬಾಂಗ್ಲಾದೇಶದ ವಿರುದ್ಧದ ಮೊದಲ ಪಂದ್ಯದಲ್ಲಿ, ಮತಿಶ ಪತಿರಾನ ಅವರು ನಾಲ್ಕು ಓವರ್‌ಗಳಲ್ಲಿ ಒಟ್ಟು 36 ಎಸೆತಗಳನ್ನು ಬೌಲ್ ಮಾಡಿದರು, ಇದರಲ್ಲಿ 9 ವೈಡ್‌ಗಳು ಮತ್ತು ಮೂರು ನೋ ಬಾಲ್‌ಗಳು ಸೇರಿವೆ. ಮೊದಲ ಓವರ್‌ನ ನಂತರ, ಅವರು ತಮ್ಮ ಲಯವನ್ನು ಸಂಪೂರ್ಣವಾಗಿ ಕಳೆದುಕೊಂಡರು. ಅವರ ಲೈನ್ ಲೆಂಗ್ತ್ ಕಂಡು ಕೊಳ್ಳುವಲ್ಲಿ ವಿಫಲರಾದರು.

ಐಪಿಎಲ್‌ಗೂ ಮುನ್ನ ಅವರ ಕಳಪೆ ಪ್ರದರ್ಶನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನುಂಗಲಾರದ ಬಿಸಿ ತುಪ್ಪದಂತೆ ಆಗಿದೆ. ಐಪಿಎಲ್ 2023 ರಲ್ಲಿ, ಅವರು ಒಟ್ಟು 19 ವಿಕೆಟ್‌ಗಳನ್ನು ಪಡೆದು, ಸಿಎಸ್‌ಕೆ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.
IPL 2022 ರಲ್ಲಿ ಗಾಯಗೊಂಡ ಆಡಮ್ ಮಿಲ್ನೆಗೆ ಬದಲಿಯಾಗಿ ಮತಿಶಾ ಪತಿರಾನ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಸೇರಿಸಿಕೊಂಡಿತು. ಅವರು ಐಪಿಎಲ್ 2022 ಮತ್ತು 2023 ರಲ್ಲಿ ಸಿಎಸ್‌ಕೆ ಪರ ಆಡಿದ್ದರು. ಇದುವರೆಗೆ ಐಪಿಎಲ್ ನ 14 ಪಂದ್ಯಗಳಲ್ಲಿ ಒಟ್ಟು 21 ವಿಕೆಟ್ ಪಡೆದು ಒಟ್ಟು 423 ರನ್ ನೀಡಿದ್ದಾರೆ. ಅವರು ಅಂಡರ್-19 ವಿಶ್ವಕಪ್ 2020 ರಲ್ಲಿ ಶ್ರೀಲಂಕಾ ಪರ ಆಡಿದ್ದಾರೆ.