IPL 2024: ಕಳೆದ 24 ಪಂದ್ಯಗಳಲ್ಲಿ ಅರ್ಧಶತಕ ಬಾರಿಸದ ಎಂಎಸ್ ಧೋನಿ
ಐಪಿಎಲ್‌ನ ಯಶಸ್ವಿ ನಾಯಕರಲ್ಲಿ ಕೂಲ್ ಕ್ಯಾಪ್ಟನ್ ಹೆಸರು ಮುಂಚೂಣಿಯಲ್ಲಿರುತ್ತಾರೆ. ಸ್ಟಾರ್ ನಾಯಕ ತಮ್ಮ ಮುಂದಾಳತ್ವದಲ್ಲಿ ಐದು ಬಾರಿ ತಂಡಕ್ಕೆ ಐಪಿಎಲ್ ಕಿರೀಟ ತೊಡಿಸಿದ್ದಾರೆ. ಅಲ್ಲದೆ ತಂಡವನ್ನು 10 ಬಾರಿ ಫೈನಲ್‌ಗೆ ಕೊಂಡಯ್ಯದ ಸಾಧನೆಯನ್ನು ಮಾಡಿದ್ದಾರೆ. ಈ ಬಾರಿಯ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆಯಲಿದೆ.
ಐಪಿಎಲ್‌ನಲ್ಲಿ 17 ಆವೃತ್ತಿಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಧೋನಿಗೆ ಸ್ಥಾನವಿದೆ. ಇಲ್ಲಿಯವರೆಗೂ ಮಾಹಿ 250 ಪಂದ್ಯಗಳನ್ನು ಆಡಿದ್ದು ಒಟ್ಟು 5082 ರನ್ ಸಿಡಿಸಿದ್ದಾರೆ. ಅಲ್ಲದೆ ಧೋನಿ ಪಂದ್ಯದಲ್ಲಿ ಒಂದಾದರೂ ಸಿಕ್ಸರ್ ಬಾರಿಸಿದ ಅಂಕಿ ಅಂಶಗಳ ಲೆಕ್ಕಾಚಾರದಲ್ಲೂ ಅಗ್ರಸ್ಥಾನದಲ್ಲಿದ್ದಾರೆ. ಧೋನಿ ಶತಕ ಹಾಗೂ ಅರ್ಧಶತಕಗಳ ಲೆಕ್ಕಾಚಾರದಲ್ಲಿ ಕೊಂಚ ಹಿಂದಿದ್ದಾರೆ. ಅಲ್ಲದೆ ಧೋನಿ ಕಳೆದ 24 ಇನ್ನಿಂಗ್ಸ್‌ಗಳಲ್ಲಿ ಧೋನಿ ಅರ್ಧಶತಕ ಗಳಿಸಿಲ್ಲ.

2022ರಲ್ಲಿ ಕೆಕೆಆರ್ ವಿರುದ್ಧ ಕೊನೆಯ ಅರ್ಧಶತಕ
ಎಂಎಸ್ ಧೋನಿ ಅವರ ಕೊನೆಯ ಅರ್ಧಶತಕವನ್ನು ಮಾರ್ಚ 26, 2022 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬಂದಿದ್ದಾಗಿತ್ತು. ಆ ಪಂದ್ಯದಲ್ಲಿ ಸಿಎಸ್ ಕೆ 61 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್ ಗೆ ಬಂದರು. ಆರಂಭದಲ್ಲಿ ಧೋನಿ ನಿಧಾನವಾಗಿ ಆಡಿದರೂ, 38 ಎಸೆತಗಳಲ್ಲಿ 50 ರನ್‌ಗಳ ಅಜೇಯ ಇನ್ನಿಂಗ್ಸ್‌ನಿಂದ, ಸಿಎಸ್‌ಕೆ 20 ಓವರ್‌ಗಳಲ್ಲಿ 131 ರನ್‌ಗಳ ಗೌರವಾನ್ವಿತ ಸ್ಕೋರ್ ಗಳಿಸಿತು. ಆ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 6 ವಿಕೆಟ್‌ಗಳ ಜಯ ಸಾಧಿಸಿತ್ತು.
ಆ ಪಂದ್ಯದ ನಂತರ ಎಂಎಸ್ ಧೋನಿ 24 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ, ಆದರೆ ಇನ್ನೂ ಅರ್ಧಶತಕ ಗಳಿಸಲು ಸಾಧ್ಯವಾಗಿಲ್ಲ. ಕೋಲ್ಕತ್ತಾ ವಿರುದ್ಧದ ಈ ಘರ್ಷಣೆಯ ನಂತರ, ಅವರ ಗರಿಷ್ಠ ಸ್ಕೋರ್ 36 ರನ್ ಮತ್ತು ಈ ಇನ್ನಿಂಗ್ಸ್ 2022 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧವೂ ಬಂದಿತು.
ಇಲ್ಲಿದೆ ನೋಡಿ ಅರ್ಧಶತಕ ಬಾರಿಸದೇ ಇರಲು ಕಾರಣ
ಧೋನಿ ಅರ್ಧಶತಕ ಗಳಿಸಲು ಸಾಧ್ಯವಾಗದಿರಲು ಒಂದು ಕಾರಣವೆಂದರೆ ಅವರು ಹೆಚ್ಚಿನ ಸಂದರ್ಭಗಳಲ್ಲಿ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುತ್ತಾರೆ. ಧೋನಿ ಇಲ್ಲಿಯವರೆಗೆ 250 ಪಂದ್ಯಗಳ ಐಪಿಎಲ್ ವೃತ್ತಿಜೀವನದಲ್ಲಿ 24 ಅರ್ಧ ಶತಕಗಳನ್ನು ಗಳಿಸಿದ್ದಾರೆ. 2024ರಲ್ಲೂ ಮಹೇಂದ್ರ ಸಿಂಗ್ ಧೋನಿ ಸಿಎಸ್‌ಕೆ ತಂಡದ ನಾಯಕರಾಗಲಿದ್ದು, ಈ ಬಾರಿ ಧೋನಿ ಅರ್ಧಶತಕ ಬಾರಿಸುತ್ತಾರೋ ಇಲ್ಲವೋ ಎಂಬುದನ್ನು ನೋಡಬೇಕಿದೆ.

ಧೋನಿ ಸಾಧನೆ
ಐಪಿಎಲ್‌ನಲ್ಲಿ ಧೋನಿ ಅಮೋಘ ಸಾಧನೆ ಮಾಡಿದ್ದಾರೆ. 2010, 2011, 2018, 2021, 2023ರಲ್ಲಿ ಐಪಿಎಲ್ ಟ್ರೋಫಿಯನ್ನು ತಂಡಕ್ಕೆ ತೊಡಿಸಿದ ಪ್ಲೇಯರ್. ಧೋನಿ 250 ಪಂದ್ಯಗಳಲ್ಲಿ 38.79ರ ಸರಾಸರಿಯಲ್ಲಿ 5082 ರನ್ ಸಿಡಿಸಿದ್ದಾರೆ. ಅಲ್ಲದೆ 349 ಬೌಂಡರಿ, 239 ಸಿಕ್ಸರ್ ಬಾರಿಸಿದ್ದಾರೆ. ಅಲ್ಲದೆ ಕಳೆದ ಆವೃತ್ತಿಯಲ್ಲಿ ಧೋನಿ 16 ಪಂದ್ಯಗಳಲ್ಲಿ 104 ರನ್ ಸೇರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications