For Quick Alerts
ALLOW NOTIFICATIONS  
For Daily Alerts
 

IPL 2024: ಸಿಎಸ್‌ಕೆಗೆ ಎಂಎಸ್ ಧೋನಿ 'ಆರಂಭ' ಶೂರ; ಇದೇನಾ ಹೊಸ ಪಾತ್ರ?

ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದೇ ಮಾರ್ಚ್ 22ರಂದು ಸಾಂಪ್ರದಾಯಿಕ ಎದುರಾಳಿಗಳಾದ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಉದ್ಘಾಟನಾ ಪಂದ್ಯದ ಮುಖಾಮುಖಿಯೊಂದಿಗೆ ಅದ್ಧೂರಿ ಚಾಲನೆ ಸಿಗಲಿದೆ.

ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಎಂಎಸ್ ಧೋನಿ ಮಂಗಳವಾರ, ಮಾರ್ಚ್ 5ರಂದು 2024ರ ಐಪಿಎಲ್ ಆರಂಭಕ್ಕೂ ಮುನ್ನ ಚೆನ್ನೈಗೆ ಆಗಮಿಸಿ ತಮ್ಮ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ಗೆ ಸಿದ್ಧತೆಗಳು ಆರಂಭಗೊಂಡಿವೆ.

IPL 2024 MS Dhoni Will Open the Innings For CSK in This Season

ಗಮನಾರ್ಹವಾಗಿ, ಮುಂಬರುವ ಐಪಿಎಲ್ ಲೆಜೆಂಡ್ ವಿಕೆಟ್‌ಕೀಪರ್-ಬ್ಯಾಟರ್‌ಗೆ ಕೊನೆಯ ಆವೃತ್ತಿಯಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಎಂಎಸ್ ಧೋನಿ 2023ರ ಐಪಿಎಲ್ ಆವೃತ್ತಿಯಲ್ಲಿ ದೇಶಾದ್ಯಂತ ಅಪಾರ ಪ್ರೀತಿಯನ್ನು ಪಡೆದ ನಂತರ, ತಮ್ಮ ಅಭಿಮಾನಿಗಳಿಗೆ ಮತ್ತೊಂದು ಆವೃತ್ತಿ ಆಡುವುದಾಗಿ ಭರವಸೆ ನೀಡಿದ್ದರು.

ಭಾರತೀಯ ಮಾಜಿ ನಾಯಕ ಎಂಎಸ್ ಧೋನಿ ಮರಳಿ ತಮ್ಮ ಕೂದಲನ್ನು ಉದ್ದವಾಗಿ ಬೆಳೆಸುವ ಮೂಲಕ ಹಳೆಯ ದಿನಗಳನ್ನು ನೆನಪಿಸುತ್ತಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೊಸ ಋತುವಿನಲ್ಲಿ ಎಂಎಸ್‌ಡಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಮ್ಮ ಅಭಿಮಾನಿಗಳ ಹೃದಯವನ್ನು ಗೆಲ್ಲಲು ಸಿದ್ಧರಾಗಿದ್ದಾರೆ. ಇತ್ತೀಚೆಗಷ್ಟೇ ಎಂಎಸ್ ಧೋನಿ ತಮ್ಮ ಫೇಸ್‌ಬುಕ್‌ನಲ್ಲಿ ಕ್ರಿಪ್ಟಿಕ್ ಪೋಸ್ಟ್ ಒಂದನ್ನು ಹಾಕಿದ್ದರು.

ಫೇಸ್‌ಬುಕ್ ಪೋಸ್ಟ್‌ನಲ್ಲಿ ಎಂಎಸ್ ಧೋನಿ ಅವರು '2024ರ ಐಪಿಎಲ್‌ನಲ್ಲಿ ಹೊಸ ಪಾತ್ರಕ್ಕಾಗಿ ಕಾಯಲು ಸಾಧ್ಯವಿಲ್ಲ, ಟ್ಯೂನ್ ಆಗಿರಿ' ಎಂದು ಬರೆದುಕೊಂಡಿದ್ದಾರೆ.

ಎಂಎಸ್ ಧೋನಿಯ ಪೋಸ್ಟ್ ಅಭಿಮಾನಿಗಳು ಹಾಗೂ ನೆಟ್ಟಿಗರಲ್ಲಿ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಯಿತು. ಎಂಎಸ್ ಧೋನಿಯ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದಂತೆ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ.

ಆದಾಗ್ಯೂ, ಕಳೆದ ಐಪಿಎಲ್ ಋತುವಿನಲ್ಲಿ ಅಭಿಮಾನಿಗಳು ತೋರಿದ ಪ್ರೀತಿಯನ್ನು ಮರುಪಾವತಿಸಲು ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆರಂಭಿಕ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಯಸುತ್ತಿದ್ದಾರೆ ಎನ್ನಲಾಗಿದೆ.

ಹೌದು. ಇತ್ತೀಚಿಗೆ 2024ರ ಐಪಿಎಲ್ ಆವೃತ್ತಿಗೆ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಏಕೆಂದರೆ, ನ್ಯೂಜಿಲೆಂಡ್ ತಂಡದ ಸ್ಟಾರ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಹೆಬ್ಬೆರಳಿನ ಗಾಯದಿಂದಾಗಿ ಮೇ ತಿಂಗಳವರೆಗೆ ಐಪಿಎಲ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

IPL 2024 MS Dhoni Will Open the Innings For CSK in This Season

ಹೀಗಾಗಿ ಸಿಎಸ್‌ಕೆ ತಂಡದಲ್ಲಿ ರುತುರಾಜ್ ಗಾಯಕ್ವಾಡ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲು ಎಂಎಸ್ ಧೋನಿ ಸಿದ್ಧರಾಗುತ್ತಿದ್ದಾರೆ. ಇದೇ ಈ ಆವೃತ್ತಿಯಲ್ಲಿ ಇನ್ನಿಂಗ್ಸ್ ಆರಂಭಿಕನ ಹೊಸ ಪಾತ್ರವಾಗಿರಲಿದೆ.

ಬ್ಯಾಟಿಂಗ್ ಕ್ರಮಾಂಕದಲ್ಲಿನ ಅಂತರವನ್ನು ತುಂಬುವ ಸಲುವಾಗಿ ಎಂಎಸ್ ಧೋನಿ ಇನ್ನಿಂಗ್ಸ್ ಆರಂಭಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಸಿಎಸ್‌ಕೆ ತಂಡದ ಅವಿಭಾಜ್ಯ ಅಂಗವಾಗಿದ್ದ ಈಗಾಗಲೇ ಅಂಬಟಿ ರಾಯುಡು ನಿವೃತ್ತರಾಗಿದ್ದಾರೆ. ಮತ್ತೊಂದೆಡೆ ಡೆವೊನ್ ಕಾನ್ವೇ ಗಾಯದ ಕಾರಣ ಐಪಿಎಲ್ 2024ರಿಂದ ಹೊರಗುಳಿದಿದ್ದಾರೆ.

ಅಲ್ಲದೆ, ಶಿವಂ ದುಬೆ ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ಬದಲಾವಣೆಗಳೊಂದಿಗೆ ಎಂಎಸ್ ಧೋನಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಸಿಎಸ್‌ಕೆ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಲಿದ್ದಾರೆ.

ಗಮನಾರ್ಹವಾಗಿ, 42 ವರ್ಷದ ಎಂಎಸ್ ಧೋನಿ 2023ರ ಐಪಿಎಲ್ ಆವೃತ್ತಿಯುದ್ದಕ್ಕೂ ಮೊಣಕಾಲಿನ ಗಾಯದಿಂದ ಹೋರಾಡಿದರು ಮತ್ತು ಅವರು ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ಅಭಿಮಾನಿಗಳು ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದರು.

ಎಂಎಸ್ ಧೋನಿ ಕಳೆದ ವರ್ಷ ಆಡಿದ 12 ಇನ್ನಿಂಗ್ಸ್‌ಗಳಿಂದ 104 ರನ್‌ ಗಳಿಸಿ ತಮ್ಮ ವಿಂಟೇಜ್‌ಗೆ ತಕ್ಕಂತೆ ಸ್ಕೋರ್‌ ಮಾಡಿದರು. ಇಡೀ ಐಪಿಎಲ್ ಋತುವಿನಲ್ಲಿ 182.46ರ ಸ್ಟ್ರೈಕ್‌ರೇಟ್‌ನಲ್ಲಿ ಮೂರು ಬೌಂಡರಿಗಳು ಮತ್ತು ಹತ್ತು ಸಿಕ್ಸರ್‌ಗಳನ್ನು ಬಾರಿಸಿದರು.

Story first published: Wednesday, March 6, 2024, 11:17 [IST]
Other articles published on Mar 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+