ವಿಶ್ವದ ನಂ.1 ಟಿ20 ಬ್ಯಾಟರ್ ಭಾರತದ ಸೂರ್ಯಕುಮಾರ್ ಯಾದವ್ ಅವರು ತೊಡೆಸಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಇದು ಮುಂಬರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುವ ಕುರಿತು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಮುಂಬೈ ಇಂಡಿಯನ್ಸ್ ತಂಡದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಹರ್ನಿಯಾ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದು ಇನ್ನೂ ದೃಢಪಟ್ಟಿಲ್ಲ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆ ತಂಡದ ವಿರುದ್ಧದ ಟಿ20 ಸರಣಿಯ ವೇಳೆ ತೊಡೆಸಂದು ಗಾಯಕ್ಕೆ ಒಳಗಾದ ಬಳಿಕ ಸೂರ್ಯಕುಮಾರ್ ಯಾದವ್ ಕ್ರಿಕೆಟ್‌ನಿಂದ ದೂರವುಳಿದಿದ್ದಾರೆ. ಮುಂಬರುವ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಭಾಗವಹಿಸುವುದು ಕೂಡ ಅಸಾಧ್ಯದಂತೆ ತೋರುತ್ತದೆ.

ಒಬ್ಬ ವ್ಯಕ್ತಿಯು ಕೆಲಸಕ್ಕೆ ಹಿಂದಿರುಗುವ ಅವಧಿಯು ಅವರ ಕೆಲಸದ ಸ್ವರೂಪ ಮತ್ತು ತೊಡೆಸಂದು ಗಾಯಕ್ಕೆ ಬಳಸುವ ಶಸ್ತ್ರಚಿಕಿತ್ಸಾ ವಿಧಾನ ಎರಡನ್ನೂ ಅವಲಂಬಿಸಿರುತ್ತದೆ.
"ಕಚೇರಿ ಕೆಲಸಗಳಂತಹ ಕುಳಿತುಕೊಳ್ಳುವ ಕೆಲಸಗಖನ್ನು ಹೊಂದಿರುವ ವ್ಯಕ್ತಿಗಳಿಗೆ, ಒಂದರಿಂದ ಎರಡು ವಾರಗಳ ಚೇತರಿಕೆಯ ಅವಧಿಯು ಸಾಕಾಗಬಹುದು," ಎಂದು ವೈದ್ಯಕೀಯ ಮೂಲವು ವಿವರಿಸುತ್ತದೆ.
"ಇದಕ್ಕೆ ವ್ಯತಿರಿಕ್ತವಾಗಿ ಸ್ಪರ್ಧಾತ್ಮಕ ಕ್ರೀಡೆಗಳಂತಹ ದೈಹಿಕ ಪರಿಶ್ರಮವನ್ನು ಬೇಡುವ ಉದ್ಯೋಗಗಳಿಗೆ, ಚೇತರಿಸಿಕೊಳ್ಳುವ ಹಂತವು ಸಾಮಾನ್ಯವಾಗಿ ನಾಲ್ಕರಿಂದ ಆರು ವಾರಗಳವರೆಗೆ ವಿಸ್ತರಿಸಬಹುದು".
ಶಸ್ತ್ರಚಿಕಿತ್ಸೆಯ ನಂತರದ ಆರಂಭಿಕ ವಾರಗಳಲ್ಲಿ ರೋಗಿಗೆ ಶ್ರಮದಾಯಕ ಚಟುವಟಿಕೆ ಅಥವಾ ಭಾರ ಎತ್ತುವಿಕೆಯಿಂದ ದೂರವಿರಲು ಸೂಚಿಸಲಾಗುತ್ತದೆ. "ರೋಗಿಗಳು ತಮ್ಮ ಚೇತರಿಕೆಗೆ ಅಡ್ಡಿಯುಂಟು ಮಾಡುವ ಅಥವಾ ಛೇದನವನ್ನು ತೊಂದರೆಗೊಳಿಸುವಂತಹ ಚಟುವಟಿಕೆಗಳಿಂದ ದೂರವಿರಲು ಇದು ನಿರ್ಣಾಯಕವಾಗಿದೆ," ಎಂದು ಹೇಳಲಾಗುತ್ತದೆ.

ಸರಿಸುಮಾರು ಆರರಿಂದ ಎಂಟು ವಾರಗಳು ಕಳೆದ ನಂತರ ಮತ್ತು ಛೇದನಗಳು ಸಂಪೂರ್ಣವಾಗಿ ವಾಸಿಯಾಗುತ್ತವೆ. ಆಗ ವ್ಯಕ್ತಿಗಳು ತಮ್ಮ ಸಾಮಾನ್ಯ ವ್ಯಾಯಾಮವನ್ನು ಕ್ರಮೇಣವಾಗಿ ಮರು ಪ್ರಾರಂಭಿಸಬಹುದು.
ಹೆಚ್ಚುವರಿಯಾಗಿ, ಗಾಯಾಳುಗಳು ಚೇತರಿಸಿಕೊಳ್ಳುವ ಹಂತದಲ್ಲಿ ಕೆಲವು ಡಿಕಾಂಡಿಷನಿಂಗ್ ಅನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಚಟುವಟಿಕೆಯನ್ನು ಪುನರಾರಂಭಿಸಲು ಕ್ರಮೇಣ ಮತ್ತು ಎಚ್ಚರಿಕೆಯ ವಿಧಾನವನ್ನು ಅಳವಡಿಸಿಕೊಳ್ಳುವುದನ್ನು ವೈದ್ಯರು ಶಿಫಾರಸು ಮಾಡುತ್ತಾರೆ.
ಶಸ್ತ್ರಚಿಕಿತ್ಸೆಯ ನಂತರ ಭಾರತ ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮೂರು ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಹೊರಗುಳಿಯಬಹುದು. ಅದೇ ರೀತಿ 2024ರ ಐಪಿಎಲ್ ಪಂದ್ಯಾವಳಿಯ ಕೆಲವು ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು.
ಈ ವರ್ಷ ಐಪಿಎಲ್ ಪಂದ್ಯಾವಳಿಯು ಮಾರ್ಚ್ ಅಂತ್ಯದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಸೂರ್ಯಕುಮಾರ್ ಯಾದವ್ ಏಪ್ರಿಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಲಭ್ಯವಾಗುವ ನಿರೀಕ್ಷೆ ಇದೆ.