ಭಾರತೀಯ ಕ್ರಿಕೆಟ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಿರುಗಾಳಿ ಎಬ್ಬಿಸಿರುವ ಒಂದು ಸುದ್ದಿ ಎಂದರೆ, ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್‌ನಿಂದ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರ್ಪಡೆಯಾಗುವ ಸಂಭಾವ್ಯ ಸಾಧ್ಯತೆಯಿದೆ.
ಮುಂಬೈ ಇಂಡಿಯನ್ಸ್ ತಂಡವು ಸ್ಟಾರ್ ಆಟಗಾರರನ್ನು ಪಡೆದ ಬಳಿಕ, ಹಾರ್ದಿಕ್ ಪಾಂಡ್ಯ ಮುಂಬೈ ಫ್ರಾಂಚೈಸಿಯಿಂದ ದೂರ ಸರಿದರು ಮತ್ತು ಹೊಸ ತಂಡ ಗುಜರಾತ್ ಟೈಟನ್ಸ್‌ಗೆ ನಾಯಕನಾಗಿ ಸೇರಿದರು.

ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತಂಡವನ್ನು ಚೊಚ್ಚಲ ಪ್ರಯತ್ನದಲ್ಲೇ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದರು. "ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಮರಳುವ ಸಾಧ್ಯತೆಯಿದೆ. ಅವರು ಗುಜರಾತ್ ಟೈಟನ್ಸ್ ತೊರೆಯಲಿದ್ದಾರೆ," ಎಂದು ಐಪಿಎಲ್ ಮೂಲಗಳು ತಿಳಿಸಿವೆ.
ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿದ್ದರಿಂದ, ಈ ಕ್ರಮವು ದೊಡ್ಡ ಏರಿಳಿತವನ್ನು ಉಂಟುಮಾಡುತ್ತದೆ. ಇದೀಗ ರವಿಚಂದ್ರನ್ ಅಶ್ವಿನ್ ಈ ಸಂಭವನೀಯ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ್ದಾರೆ.
"ನಾನು ಓದಿದ ಈ ಸುದ್ದಿ ನಿಜವಾಗಿದ್ದರೆ ಮುಂಬೈ ಇಂಡಿಯನ್ಸ್ ಚಿನ್ನವನ್ನೇ ಹೊಡೆದಿದೆ ಮತ್ತು ಸಂಪೂರ್ಣ ನಗದು ವ್ಯವಹಾರವಾಗಿದೆ," ಎಂದು ರವಿಚಂದ್ರನ್ ಅಶ್ವಿನ್ ತಿಳಿಸಿದರು.

ಮುಂಬೈ ಇಂಡಿಯನ್ಸ್ ಯಾವುದೇ ಆಟಗಾರನನ್ನು ನೀಡುವ ಸಾಧ್ಯತೆ ಇಲ್ಲ. ಮುಂಬೈ ಇಂಡಿಯನ್ಸ್ ಎಂದಿಗೂ ವ್ಯಾಪಾರದಲ್ಲಿ ಆಟಗಾರರನ್ನು ನೀಡಿಲ್ಲ. ಇದು ಎಂದಿಗೂ ಸಂಭವಿಸಿಲ್ಲ ಎಂದು ನಾನು ಭಾವಿಸುತ್ತೇನೆ.
ಆದರೆ ಮುಂಬೈ ಇಂಡಿಯನ್ಸ್‌ನಲ್ಲಿ ಬೆಳೆದ ಆಟಗಾರ ಹಾರ್ದಿಕ್ ಹಿಂತಿರುಗಿದರೆ, ಆ ಆಡುವ 11ರ ಬಳಗ ಹೇಗಿರುತ್ತದೆ ಎಂದು ರವಿಚಂದ್ರನ್ ಅಶ್ವಿನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋದಲ್ಲಿ ತಿಳಿಸಿದ್ದಾರೆ. ನಂತರ ರವಿಚಂದ್ರನ್ ಅಶ್ವಿನ್ ಅವರು ಮುಂಬೈ ಇಂಡಿಯನ್ಸ್ ಆಡುವ 11ರ ಬಳಗವನ್ನು ತಿಳಿಸಿದ್ದಾರೆ.
ರೋಹಿತ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಟಿಮ್ ಡೇವಿಡ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೋಫ್ರಾ ಆರ್ಚರ್/ರೈಲ್ ಮೆರೆಡಿತ್/ಜೇಸನ್ ಬೆಹ್ರೆನ್ಡಾರ್ಫ್/ಮಿಚೆಲ್ ಸ್ಟಾರ್ಕ್/ಪ್ಯಾಟ್ ಕಮ್ಮಿನ್ಸ್.
"ನಮ್ಮ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಏಕೈಕ ವ್ಯತ್ಯಾಸವೆಂದರೆ, ಅವರು ಐಪಿಎಲ್-ವಿಜೇತ ನಾಯಕರಾಗಿದ್ದಾರೆ. ಇದು ಗುಜರಾತ್ ಟೈಟನ್ಸ್‌ನ ಸಮತೋಲನವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಇನ್ನೊಬ್ಬ ಹಾರ್ದಿಕ್ ಪಾಂಡ್ಯ ಮಾಡಬಹುದೇ ಎಂದು ನೋಡಲು ಆಸಕ್ತಿದಾಯಕವಾಗಿದೆ," ಎಂದರು.
ಹಾರ್ದಿಕ್ ಪಾಂಡ್ಯ 15 ಕೋಟಿ ಆಟಗಾರ. ಆದರೆ ಮುಂಬೈ ಇಂಡಿಯನ್ಸ್ ಈಗ ಮಾಡಬೇಕಾಗಿರುವುದು, ಅವರು ಹರಾಜು ಬಜೆಟ್ ಅಡಿಯಲ್ಲಿ ಬರುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ತಮ್ಮ ಪರ್ಸ್ ಅನ್ನು ಹೆಚ್ಚು ಮಾಡಿಕೊಳ್ಳಬೇಕು.
ಹಾರ್ದಿಕ್ ಪಾಂಡ್ಯ 2022ರ ಆವೃತ್ತಿಗೆ ಮುನ್ನ ಬಿಡುಗಡೆಯಾಗುವ ಮೊದಲು ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ನ ಏಳು ಸೀಸನ್‌ಗಳನ್ನು ಆಡಿದ್ದರು. ಗುಜರಾತ್ ಟೈಟನ್ಸ್ ಸೇರಿದ ನಂತರ, ಹಾರ್ದಿಕ್ ಪಾಂಡ್ಯ ತಂಡವನ್ನು ಸತತ ಎರಡು ಬಾರಿ ಐಪಿಎಲ್ ಫೈನಲ್‌ಗೆ ಮುನ್ನಡೆಸಿದರು ಮತ್ತು ಗುಜರಾತ್ ಚೊಚ್ಚಲ ಋತುವಿನಲ್ಲಿ ಟ್ರೋಫಿ ಎತ್ತಿಹಿಡಿದರು.
ಕಳೆದ ಎರಡು ಸೀಸನ್‌ಗಳಿಗೆ ಜೋಫ್ರಾ ಆರ್ಚರ್ ಅವರನ್ನು 8 ಕೋಟಿ ರೂಪಾಯಿಗೆ ಖರೀದಿಸಿದ್ದ ಮುಂಬೈ ಇಂಡಿಯನ್ಸ್, ಇದೀಗ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆಯೇ ಎಂಬುದರ ಬಗ್ಗೆ ಮುಂಬೈ ಇಂಡಿಯನ್ಸ್ ಇನ್ನೂ ಯಾವುದೇ ಸ್ಪಷ್ಟನೇ ನೀಡಿಲ್ಲ.
ಐಪಿಎಲ್ ಆಡಳಿತ ಮಂಡಳಿಯು ಹೆಚ್ಚುವರಿ 5 ಕೋಟಿ ರೂಪಾಯಿಯಷ್ಟು ಪರ್ಸ್ ಅನ್ನು ಹೆಚ್ಚಿಸುವುದರೊಂದಿಗೆ, ಮೀಸಲು ಹಣವನ್ನು ಹಿಗ್ಗಿಸಲು ತಮ್ಮ ಕೆಲವು ದೊಡ್ಡ ಆಟಗಾರರನ್ನು ಬಿಡುಗಡೆ ಮಾಡದ ಹೊರತು, ಮುಂಬೈ ಇಂಡಿಯನ್ಸ್ ಸದ್ಯ ಇರುವ 5.50 ಕೋಟಿಯೊಂದಿಗೆ ಮಿನಿ-ಹರಾಜಿಗೆ ಹೋಗುತ್ತಿದೆ.