IPL 2024: PlayOffs: ಆರ್‌ಸಿಬಿಗೆ ಚಾನ್ಸೇ ಇಲ್ಲ; ಅಂತಿಮ 4 ಪ್ಲೇಆಫ್ ತಂಡಗಳನ್ನು ಹೆಸರಿಸಿದ ತಜ್ಞರು
2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಗುಂಪು ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ತಲುಪಿದ್ದು, ಪ್ಲೇಆಫ್ ರೇಸ್ ಇದೀಗ ಮತ್ತಷ್ಟು ವೇಗವನ್ನು ಪಡೆದುಕೊಳ್ಳುತ್ತಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಈಗಾಗಲೇ ತಮ್ಮ ಪ್ಲೇ ಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಉಳಿದ ಎರಡು ಸ್ಥಾನಗಳಿಗಾಗಿ ಒಟ್ಟು ಐದು ತಂಡಗಳು ಇನ್ನೂ ತೀವ್ರ ಪೈಪೋಟಿ ನಡೆಸುತ್ತಿವೆ.

ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಉಳಿದ 2 ಪ್ಲೇಆಫ್ ಸ್ಥಾನಗಳಿಗಾಗಿ ರೇಸ್‌ನಲ್ಲಿರುವ ತಂಡಗಳಾಗಿವೆ. ಉಳಿದಿರುವ ನಿರ್ಣಾಯಕ ಪಂದ್ಯಗಳಲ್ಲಿ ಮೇ 18ರಂದು ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಸೆಣಸಾಡಲಿವೆ.
ಈ ಪಂದ್ಯದ ವಿಜೇತ ತಂಡವು ಐಪಿಎಲ್ 2024ರ ಪ್ಲೇಆಫ್‌ಗೆ ಹತ್ತಿರವಾಗುತ್ತಾರೆ ಮತ್ತು ಸೋತ ತಂಡವು ಪಂದ್ಯಾವಳಿಯಿಂದ ಹೊರಬೀಳುತ್ತದೆ. ಆರ್‌ಸಿಬಿ ಬರೀ ಗೆಲುವು ಮಾತ್ರವಲ್ಲದೆ, ದೊಡ್ಡ ಅಂತರದಿಂದ ಗೆಲುವು ಸಾಧಿಸಿದರೆ ಮಾತ್ರ ಪ್ಲೇಆಫ್ ಅವಕಾಶವಿದೆ.

ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್, ಅಂಬಟಿ ರಾಯುಡು, ಮೊಹಮ್ಮದ್ ಕೈಫ್ ಮತ್ತು ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ಮ್ಯಾಥ್ಯೂ ಹೇಡನ್ ಮತ್ತು ಟಾಮ್ ಮೂಡಿ ಅವರು ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿ ಹೇಳಿಕೆಯಲ್ಲಿ, ಪ್ಲೇಆಫ್ ತಲುಪುವ ತಂಡ ಆರ್‌ಸಿಬಿ ಅಲ್ಲ, ಸಿಎಸ್‌ಕೆ ಎಂದು ಹೆಸರಿಸಿದ್ದಾರೆ.
"ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನನ್ನ ಆಯ್ಕೆಗಳು. ಏಕೆಂದರೆ ಪ್ಲೇಆಫ್ ತಲುಪಲು ಸಿಎಸ್‌ಕೆ ಇನ್ನೊಂದು ಮಾರ್ಗವನ್ನು ಕಂಡುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಅದು ಪರಂಪರೆಯ ತಂಡ," ಎಂದು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ತಿಳಿಸಿದರು.
ಇದೇ ವೇಳೆ ಮಾಜಿ ಸಿಎಸ್‌ಕೆ ಬ್ಯಾಟರ್ ಅಂಬಟಿ ರಾಯುಡು, "ಸದ್ಯಕ್ಕೆ ನನ್ನ ನಾಲ್ಕು ಪ್ಲೇಆಫ್ ತಂಡಗಳಲ್ಲಿ ಕೆಕೆಆರ್ ಅಗ್ರಸ್ಥಾನದಲ್ಲಿದೆ. ನಂತರ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಇನರೆಡು ತಂಡಗಳು," ಎಂದು ಭವಿಷ್ಯ ನುಡಿದರು.
ಇನ್ನು 29 ಐಪಿಎಲ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್, "ನನಗೆ ಅಗ್ರಸ್ಥಾನದಲ್ಲಿ ಕೆಕೆಆರ್ ಆಗಿರುತ್ತದೆ. ರಾಜಸ್ಥಾನ್ ರಾಯಲ್ಸ್ 2ನೇ ಸ್ಥಾನದಲ್ಲಿರುತ್ತದೆ. ಮೂರನೇ ಸ್ಥಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು 4ನೇ ಸ್ಥಾನದಲ್ಲಿ ನಾನು ಸಿಎಸ್‌ಕೆ ತಂಡವನ್ನು ಆಯ್ಕೆ ಮಾಡುತ್ತೇನೆ. ಏಕೆಂದರೆ ಅವರಿಗೆ ದೊಡ್ಡ ಪಂದ್ಯಗಳಲ್ಲಿ ಹೇಗೆ ಪ್ರದರ್ಶನ ನೀಡಬೇಕೆಂದು ತಿಳಿದಿದೆ," ಎಂದರು.
"ನನ್ನ ಅಗ್ರ ನಾಲ್ಕು ತಂಡಗಳು ನಿರ್ದಿಷ್ಟ ಕ್ರಮದಲ್ಲಿವೆ. ಕೆಕೆಆರ್ ನಿಜವಾಗಿಯೂ ಅಗ್ರಸ್ಥಾನದಲ್ಲಿ ಅರ್ಹತೆ ಪಡೆದಿದ್ದಾರೆ. ನಂತರ ನಾನಯ ರಾಜಸ್ಥಾನ್ ರಾಯಲ್ಸ್ ಜೊತೆ ಹೋಗಲಿದ್ದೇನೆ. ಆದರೆ, ಅವರು ಸತತ ನಾಲ್ಕು ಸೋಲುಗಳ ಸರಣಿಯನ್ನು ತಪ್ಪಿಸಬೇಕು. ಮೂರನೇ ಸ್ಥಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಆಯ್ಕೆ ಮಾಡುತ್ತೇನೆ ಮತ್ತು ಮೇ 18ರಂದು ಆರ್‌ಸಿಬಿ ವಿರುದ್ಧ ನಿರ್ಣಾಯಕ ಪಂದ್ಯ ಗೆಲ್ಲಲು ಸಿಎಸ್‌ಕೆ ತಂಡವನ್ನು ಆಯ್ಕೆ ಮಾಡುತ್ತೇನೆ," ಎಂದು ಸಿಎಸ್‌ಕೆ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟರು.
"ಐಪಿಎಲ್ 2024ರ ಪ್ಲೇಆಫ್‌ನಲ್ಲಿ ನನ್ನ ಆಯ್ಕೆಯ ಅಗ್ರ ನಾಲ್ಕು ತಂಡಗಳಲ್ಲಿ ಕೆಕೆಆರ್ ಮೊದಲ ಸ್ಥಾನದಲ್ಲಿದೆ. ಬಳಿಕ ರಾಜಸ್ಥಾನ ರಾಯಲ್ಸ್ ಎರಡನೇ ಸ್ಥಾನದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಮೂರನೇ ಸ್ಥಾನದಲ್ಲಿ ಮತ್ತು ನಾಲ್ಕನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇರಲಿದೆ," ಎಂದು ಎಸ್‌ಆರ್‌ಹೆಚ್ ಮಾಜಿ ಕೋಚ್ ಟಾಮ್ ಮೂಡಿ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications