For Quick Alerts
ALLOW NOTIFICATIONS  
For Daily Alerts
 

IPL 2024: ಉದ್ಘಾಟನಾ ಸಮಾರಂಭದಲ್ಲಿ ಸ್ಟಾರ್-ಸ್ಟಡ್ ಪ್ರದರ್ಶನ; 17ನೇ ಆವೃತ್ತಿಗೆ ವರ್ಣರಂಜಿತ ಚಾಲನೆ

ಶುಕ್ರವಾರ, ಮಾರ್ಚ್ 22ರ ಸಂಜೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಗೆ ಉದ್ಘಾಟನಾ ಸಮಾರಂಭದ ಮೂಲಕ ಅದ್ಧೂರಿ ಚಾಲನೆ ದೊರೆಯಿತು.

ಬಾಲಿವುಡ್ ಸ್ಟಾರ್‌ಗಳದಾ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ 2024ರ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದರು. ಅಕ್ಷಯ್ ಕುಮಾರ್ ರಾಷ್ಟ್ರ ಬಾವುಟದೊಂದಿಗೆ ಧರೆಗಿಳಿದು 'ಸಾರೇ ಜಹಾಂಸೆ ಅಚ್ಚಾ, ಹಿಂದೂಸ್ತಾನ್ ಹಮಾರಾ...' ಗೀತೆಗೆ ತಮ್ಮ ವಿಶೇಷ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.

IPL 2024 Opening Ceremony Lights up with Spectacular Performances by Akshay Kumar and Tiger Shroff

ನಂತರ ಬಾಲಿವುಡ್‌ನ ಜನಪ್ರಿಯ ಹಾಡುಗಳಿಗೆ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಭರ್ಜರಿ ಸ್ಟೆಫ್ ಹಾಕಿದರು. ಈ ಜೋಡಿ ತಮ್ಮ ಮುಂದಿನ ಬಾಲಿವುಡ್ ಚಿತ್ರ "ಬಡೇ ಮಿಯಾನ್ ಚೋಟೆ ಮಿಯಾನ್'ಗೆ ಪ್ರಚಾರದೊಂದಿಗೆ ಪ್ರಾರಂಭಿಸಿದರು.

ನಂತರ ಖ್ಯಾತ ಗಾಯಕ ಸೋನು ನಿಗಮ್ ವೇದಿಕೆಯನ್ನು ತೆಗೆದುಕೊಂಡರು. ಈ ವೇಳೆ ಐಪಿಎಲ್ ಆಯೋಜಕರು ಇಂಡಿಯಾ ಗೇಟ್‌ನ ಬೃಹತ್ ಹೊಲೊಗ್ರಾಮ್ ಅನ್ನು ಪ್ರದರ್ಶಿಸಿದರು.

ಈ ವೇಳೆ ಸೋನು ನಿಗಮ್ "ವಂದೇ ಮಾತರಂ'ನ ಭಾವಪೂರ್ಣ ಹಾಡಿನೊಂದಿಗೆ ಪ್ರಾರಂಭಿಸಿದರು ಮತ್ತು ಇದು ಜಾಗತಿಕ, ವಿಶ್ವ ದರ್ಜೆಯ ಕ್ರಿಕೆಟ್ ಪಂದ್ಯಾವಳಿಯಾದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಾರಂಭವನ್ನು ಸಂಪೂರ್ಣವಾಗಿ ಗುರುತಿಸಲಾಯಿತು.

IPL 2024 Opening Ceremony Lights up with Spectacular Performances by Akshay Kumar and Tiger Shroff

ಇನ್ನು ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಶಿವಾಜಿ, ದಿ ಬಾಸ್‌ ಸಿನಿಮಾದ ಜನಪ್ರಿಯ ಚಾರ್ಬಸ್ಟರ್ 'ಬಲ್ಲೆ ಲಕಾ' ಹಾಡನ್ನು ಹಾಡಿದರು. ಇದೇ ವೇಳೆ ಭಾರತದ ಅಂತರಿಕ್ಷ ಸಾಧನೆಯಾದ ಚಂದ್ರಯಾನ-3 ಹೊಲೊಗ್ರಾಮ್ ಅನ್ನು ಪ್ರದರ್ಶಿಸಲಾಯಿತು.

2024ರ ಐಪಿಎಲ್‌ನ ಉದ್ಘಾಟನಾ ಸಮಾರಂಭವು ಎಆರ್ ರೆಹಮಾನ್ ಅವರ 'ಜೈ ಹೋ...' ಗೀತೆಯೊಂದಿಗೆ ಉನ್ನತ ಮಟ್ಟದಲ್ಲಿ ಕೊನೆಗೊಂಡಿತು. ಬಳಿಕ ಸ್ಟೇಡಿಯಂ ಟಾಪ್‌ನ ಸುತ್ತಲಿನಿಂದ ಪಟಾಕಿಗಳನ್ನು ರಾತ್ರಿಯ ಆಕಾಶವನ್ನು ಬೆಳಗಿಸಲಾಯಿತು.

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ ನಂತರ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಗೌರವ ಕಾರ್ಯದರ್ಶಿ ಜಯ್ ಶಾ ಮತ್ತು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು ಪಂದ್ಯಾವಳಿಗೆ ಅಧಿಕೃತ ಚಾಲನೆ ನೀಡಲು ವೇದಿಕೆಗೆ ಆಹ್ವಾನಿಸಲಾಯಿತು.

IPL 2024 Opening Ceremony Lights up with Spectacular Performances by Akshay Kumar and Tiger Shroff

ಅಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ ಹೊಸ ನಾಯಕ ರುತುರಾಜ್ ಗಾಯಕ್ವಾಡ್ ಐಪಿಎಲ್ ಟ್ರೋಫಿಯನ್ನು ಎತ್ತಿಕೊಂಡು ವೇದಿಕೆಯ ಮೇಲೆ ಇರಿಸಿದರು ಮತ್ತು ಜೊತೆಗೆ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಇದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಯು ಶುಕ್ರವಾರ, ಚೆನ್ನೈನಲ್ಲಿ ಆರಂಭಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ.

Story first published: Friday, March 22, 2024, 19:44 [IST]
Other articles published on Mar 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+