ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಸಮಾಧಾನದ ಹೊಗೆ ದಿನೇ ದಿನೇ ಏರುತ್ತಲೇ ಇದೆ. ಈ ಬಿಸಿಯನ್ನು ತಣ್ಣಗೆ ಮಾಡಲು ಸ್ವತಃ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಂದೆ ಬರಬೇಕು. ಬಿಟ್ಟರೆ, ಉಳಿದವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಮುಂಬೈ ಇಂಡಿಯನ್ಸ್ ಛಾವಣಿಯಲ್ಲಿ ಬಿರುಕು ಮೂಡಿದ್ದು, ಇದರ ಲಾಭ ಪಡೆಯಲು ತಂಡಗಳು ಸಕಲ ಸಿದ್ಧತೆಯನ್ನು ಮಾಡಿಕೊಂಡಿವೆ.
ಈ ಬಾರಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರೀ ಪೆಟ್ಟು ನೀಡಲು ಐಪಿಎಲ್‌ನ ಉಳಿದ ಫ್ರಾಂಚೈಸಿಗಳು ಪ್ಲ್ಯಾನ್ ಮಾಡಿಕೊಂಡಿವೆ. ಅಂದಹಾಗೆ ಈ ಬಾರಿ ಒಬ್ಬ ಆಟಗಾರನ ಮೇಲೆ ಮಾತ್ರ ತಂಡಗಳು ಕಣ್ಣು ನೆಟ್ಟಿಲ್ಲ. ಬದಲಿಗೆ ಮೂವರು ಆಟಗಾರರ ಪ್ಯಾಕೇಜ್ ಮಾಡಿ, ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿವೆ. ಅದು ಕೂಡ ಭಾರೀ ಮೊತ್ತವನ್ನು ನೀಡಿ ತಮ್ಮ ತಂಡಕ್ಕೆ ಬರಮಾಡಿಕೊಳ್ಳಲು ಮೂರು ತಂಡಗಳು ಸೂತ್ರ ಹೆಣೆಯುತ್ತಿವೆ.

ಗುಜರಾತ್ ಟೈಟನ್ಸ್ ತಂಡದಿಂದ ಟ್ರೇಡ್ ಆದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿದ ಮೇಲೆ ಟೆನ್ಷನ್ ಹೆಚ್ಚಾಗಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂಕೇತ ರವಾನೆ ಆಗಿದೆ. ಐದು ಬಾರಿ ಚಾಂಪಿಯನ್ ನಾಯಕನನ್ನು ಕೆಳಗಿಳಿಸಿ ಮುಂಬೈ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿತ್ತು. ಇದೇ ನಾಯಕತ್ವದ ಕಾರಣ ಹಾರ್ದಿಕ್ ಕಳೆದ ಮೂರು ವರ್ಷದ ಹಿಂದೆ ಮುಂಬೈ ಇಂಡಿಯನ್ಸ್ ತೊರೆದು ಗುಜರಾತ್ ತಂಡ ಸೇರಿಕೊಂಡಿದ್ದರು. ಆದರೆ ಈಗ ಮುಂಬೈ ಇಂಡಿಯನ್ಸ್ ನಾಯಕತ್ವದ ಆಫರ್ ನೀಡುತ್ತಲೆ ತವರಿಗೆ ವಾಪಸ್ ಆಗಿದ್ದಾರೆ.
ಹಾರ್ದಿಕ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಬರುತ್ತಲೇ ಅಸಮಾಧಾನ ಭುಗಿಲೆದ್ದಿದೆ.
ರೋಹಿತ್ ಶರ್ಮಾ ಈ ಬಗ್ಗೆ ಈಗಲೂ ತುಟಿ ಬಿಚ್ಚಿಲ್ಲ. ಅಲ್ಲದೆ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಹಾಗೂ ಸೂರ್ಯಕುಮಾರ್ ಯಾದವ್ ಅವರಿಗೂ ಬೇಸರ ಆಗಿದೆ. ಅದಲ್ಲದೆ ಮುಂಬೈ ಕೋಚ್ ಮಾರ್ಕ್ ಬೌಚರ್ ನೀಡಿದ ಹೇಳಿಕೆ ಮೇಲಂತು, ರೋಹಿತ್ ಪತ್ನಿ ರಿಯಾಕ್ಟ್ ಮಾಡಿದರು. ಇದರಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದರ ಲಾಭ ಪಡೆಯಲು ಐಪಿಎಲ್‌ನ ಬೇರೆ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಆದರೆ ಈ ಬಾರಿ ಒಬ್ಬ ಆಟಗಾರರನ ಖರೀದಗೆ ಮನಸ್ಸು ನೀಡದೆ, ಅಸಮಾಧಾನಿತರನ್ನೇ ಸೆಳೆಯಲು ಯತ್ನ ನಡೆದಿದೆ.
ಐಪಿಎಲ್ 2024ಕ್ಕೆ ಇನ್ನು ದಿನಾಂಕ ನಿಗದಿಯಾಗಿಲ್ಲ. ಹೀಗಾಗಿ ಆಟಗಾರರ ಟ್ರೇಡಿಂಗ್ ನಡೆಯುತ್ತದೆ. ಇದರ ಲಾಭ ಪಡೆಯಲು ಆರ್‌ಸಿಬಿ, ಸಿಎಸ್‌ಕೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ.

ಆರ್‌ಸಿಬಿ ತಂಡದಲ್ಲಿ ಸದ್ಯ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಅವರನ್ನು ಬಿಟ್ಟರೆ ಬೇರೆ ಯಾರು ದೇಶೀಯ ಸ್ಟಾರ್ ಆಟಗಾರರು ಇಲ್ಲ. ಒಂದು ವೇಳೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರಿತ್ ಬುಮ್ರಾ, ಆರ್‌ಸಿಬಿ ತಂಡಕ್ಕೆ ಬಂದಿದ್ದೇ ಆದಲ್ಲಿ ತಂಡ ಎಲ್ಲ ವಿಭಾಗದಲ್ಲೂ ಬಲಿಷ್ಠವಾಗುತ್ತದೆ. ಅಲ್ಲದೆ ಚೊಚ್ಚಲ ಬಾರಿಗೆ ಐಪಿಎಲ್ ಗೆಲುವಿನ ಕನಸು ನನಸಾಗಬಹುದು. ಅಲ್ಲದೆ ಭವಿಷ್ಯದಲ್ಲೂ ತಂಡಕ್ಕೆ ನಾಯಕನ ಹುಡುಕಾಟದ ಚಿಂತೆಯೂ ಸಹ ದೂರವಾಗುತ್ತದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೂ ಸ್ಟಾರ್ ಆಟಗಾರರ ಕಡಿಮೇ ಏನು ಇಲ್ಲ. ಆದರೇ ದೇಶೀಯ ಸ್ಟಾರ್‌ಗಳ ಕಡಿಮೆ ತಂಡದಲ್ಲಿ ಎದ್ದು ಕಾಣುತ್ತಿದೆ. ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಅವರನ್ನು ರಿಪ್ಲೇಸ್ ಮಾಡಬಲ್ಲ ಆಟಗಾರರ ಹುಡುಕಾಟ ನಡೆದಿದೆ. ಅಲ್ಲದೆ ಮಹೇಂದ್ರ ಸಿಂಗ್ ಧೋನಿ ನಿವೃತ್ತರಾದರೆ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಮೊದಲೇ ಈ ಆಟಗಾರರನ್ನು ಟ್ರೇಡ್ ಮಾಡಲು ಸಿಎಸ್‌ಕೆ ಪ್ಲ್ಯಾನ್ ಮಾಡಿಕೊಂಡಿದೆ.
ಮೇಲಿನ ತಂಡಗಳಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲೂ ಟೀಮ್ ಇಂಡಿಯಾ ಸ್ಟಾರ್ ಆಟಗಾರರ ಅನುಪಸ್ಥಿತಿ ಎದ್ದು ಕಾಣುತ್ತದೆ. ಒಂದು ವೇಳೆ ಈ ಆಟಗಾರರನ್ನು ಟ್ರೇಡ್ ಮಾಡಿದರೆ ತಂಡಕ್ಕೆ ಬೂಸ್ಟ್ ಸೀಗಲಿದೆ.

ರೋಹಿತ್ ಶರ್ಮಾ, ಜಸ್ಪ್ರಿತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಅವರಂತಹ ಸ್ಟಾರ್ ಆಟಗಾರರು ತಂಡಕ್ಕೆ ಸೇರಿಕೊಂಡರೆ ನಿಶ್ಚಿತವಾಗಿಯೂ ತಂಡದ ಮೌಲ್ಯ ವೃದ್ಧಿಯಾಗುತ್ತದೆ. ಅಲ್ಲದೆ ತಂಡದ ಸ್ಟ್ರೆಂತ್ ಹೆಚ್ಚುತ್ತದೆ. ಯಾವುದೇ ಸನ್ನಿವೇಶವಿದ್ದರೂ ಈ ಮೂವರು ಆಟಗಾರರು ಪಂದ್ಯವನ್ನು ಬದಲಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಹೀಗಾಗಿಯೇ ಶತಾಯಗತಾಯ ಈ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಐಪಿಎಲ್‌ನ ಮೂರು ಫ್ರಾಂಚೈಸಿಗಳು ಸ್ಪರ್ಧೆಗಳಿದಿವೆ. ಯಾರು ಯಾವ ತಂಡಕ್ಕೆ ಹೋಗುತ್ತಾರೆ ಎಂಬುದಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.