For Quick Alerts
ALLOW NOTIFICATIONS  
For Daily Alerts
 

IPL 2024: 16 ಆವೃತ್ತಿಗಳನ್ನು ಆಡಿ, ಇನ್ನೊಂದು ಆವೃತ್ತಿಗೆ ಎದುರು ನೋಡುತ್ತಿರುವ ಪ್ಲೇಯರ್ಸ್‌

ಐಪಿಎಲ್‌ 16 ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಇನ್ನೆರಡು ದಿನಗಳಲ್ಲಿ ಮತ್ತೊಂದು ಆವೃತ್ತಿಗೆ ಸಿದ್ಧತೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಆರಂಭಿಕ ಸೀಸನ್‌ನಿಂದ ಈವರೆಗೂ ಐಪಿಎಲ್‌ನಲ್ಲಿ ಅದೆಷ್ಟೋ ಸ್ಟಾರ್ ಆಟಗಾರರು ಆಡಿ ಹೋಗಿದ್ದಾರೆ. ಆದರೆ ಕೆಲವು ಆಟಗಾರರ ಆಟ ಮಾತ್ರ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿದೆ.

ಮೊದಲ ಸೀಸನ್‌ನಿಂದಲೂ ಇನ್ನೂ ಅನೇಕ ಆಟಗಾರರು ಈ ಲೀಗ್‌ನಲ್ಲಿ ಆಡುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಹೊರತುಪಡಿಸಿ, ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಸ್ಟಾರ್ ಆಟಗಾರರು ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ. ಈ ಆಟಗಾರರು ಎಲ್ಲಾ 16 ಋತುಗಳಲ್ಲಿ ಕನಿಷ್ಠ 1 ಪಂದ್ಯವನ್ನು ಆಡಿದ್ದಾರೆ. 17ನೇ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿರುವ ಎಲ್ಲ ಸೀಸನ್‌ ಆಡಿದ ಆಟಗಾರರ ಪಟ್ಟಿ ಇಲ್ಲಿದೆ.

16 16 1 17 CSK 19 2208 237 7263 2008 17 2008 217 6616 2008 2011 5 243 6211

ಮಹೇಂದ್ರ ಸಿಂಗ್ ಧೋನಿ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಾಯಕರಾಗಿದ್ದರು. CSK ಆ ಋತುವಿನಲ್ಲಿ ಫೈನಲ್ ತಲುಪಿತು, ಆದರೆ ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಬಳಿಕ ಧೋನಿ ಸ್ಥಿರ ಪ್ರದರ್ಶನ ನೀಡಿ ಸಂಘಟಿತ ತಂಡವನ್ನು ಕಟ್ಟಿ ಸಿಎಸ್‌ಕೆಗೆ ಐದು ಬಾರಿ ಕಪ್‌ ತೊಡಿಸಿದ್ದಾರೆ. ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

16 16 1 17 CSK 19 2208 237 7263 2008 17 2008 217 6616 2008 2011 5 243 6211

ವಿರಾಟ್ ಕೊಹ್ಲಿ

ಅದಾಗಲೇ ಅಂಡರ್‌19 ವಿಶ್ವಕಪ್‌ ಆಡಿ ಬಂದಿದ್ದ ವಿರಾಟ್ ಕೊಹ್ಲಿ ಅವರಲ್ಲಿನ ಟ್ಯಾಲೆಂಟ್‌ ಗುರುತಿಸಿದ್ದ ಆರ್‌ಸಿಬಿ ಅವರಿಗೆ ತಂಡದಲ್ಲಿ ಸ್ಥಾನ ನೀಡಿತು. ಐಪಿಎಲ್ ಮೊದಲ ಸೀಸನ್‌ನಿಂದ ಆಡುತ್ತಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಇವರು ಒಂದೇ ತಂಡದ ಪರ ಅತಿ ಹೆಚ್ಚು ಆವೃತ್ತಿಗಳನ್ನು ಆಡಿದ ದಾಖಲೆಯನ್ನು ಹೊಂದಿದ್ದಾರೆ. 2208ರಿಂದ ವಿರಾಟ್ ಆರ್‌ಸಿಬಿ ತಂಡದ ಭಾಗ. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಇದುವರೆಗೆ 237 ಪಂದ್ಯಗಳನ್ನು ಆಡಿದ್ದು 7263 ರನ್ ಗಳಿಸಿದ್ದಾರೆ. ಆರ್‌ಸಿಬಿಗೆ ಚೊಚ್ಚಲ ಐಪಿಎಲ್‌ ಮುಕುಟ ತೊಡಿಸುವ ಉದ್ದೇಶದಿಂದ ಮತ್ತೊಮ್ಮೆ ಕಣಕ್ಕೆ ಇಳಿಯಲಿದ್ದಾರೆ.

16 16 1 17 CSK 19 2208 237 7263 2008 17 2008 217 6616 2008 2011 5 243 6211

ದಿನೇಶ್ ಕಾರ್ತಿಕ್

ವಿಕೆಟ್‌ ಕೀಪರ್‌ ಬ್ಯಾಟರ್‌ ರೂಪದಲ್ಲಿ 2008ರ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವೆನ್ ಪಂಜಾಬ್‌ ತಂಡವನ್ನು ಸೇರಿದ್ದ ದಿನೇಶ್ ಕಾರ್ತಿಕ್‌ ಎಲ್ಲರ ಗಮನ ಸೆಳೆದರು. ಅಂದಿನಿಂದ ದಿನೇಶ್, ಪಂಜಾಬ್, ದೆಹಲಿ, ಮುಂಬೈ ಇಂಡಿಯನ್ಸ್, ಕೆಕೆಆರ್‌ ಮತ್ತು ಆರ್‌ಸಿಬಿ ಪರ ಆಡಿದ್ದಾರೆ. ಇದು ಈ ಪ್ಲೇಯರ್‌ಗೆ 17ನೇ ಆವೃತ್ತಿ.

ಶಿಖರ್ ಧವನ್

ಐಪಿಎಲ್ 2008 ರಲ್ಲಿ ಮುಂಬೈ ಇಂಡಿಯನ್ಸ್‌ನಲ್ಲಿ ಸ್ಥಾನ ಪಡೆದಿದ್ದ ಆಟಗಾರ ಶಿಖರ್ ಧವನ್. ಬಳಿಕ ದೆಹಲಿ ಕ್ಯಾಪಿಟಲ್ಸ್‌, ಹೈದರಾಬಾದ್ ಹಾಗೂ ಸದ್ಯ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಐಪಿಎಲ್‌ನ 217 ಪಂದ್ಯಗಳಲ್ಲಿ, ಶಿಖರ್ ಧವನ್ 6616 ರನ್ ಗಳಿಸಿದ್ದಾರೆ.

IPL 2024 Played 16 editions players looking forward to another edition

ರೋಹಿತ್ ಶರ್ಮಾ

ಹಿಟ್‌ ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾ 2008ರ ಐಪಿಎಲ್‌ನಲ್ಲಿ ಡೆಕ್ಕನ್‌ ಚಾರ್ಜಸ್‌ ತಂಡದ ಪರ ಪದಾರ್ಪಣೆ ಮಾಡಿದರು. 2011ರಲ್ಲಿ ಇವರನ್ನು ಮುಂಬೈ ತಂಡಕ್ಕೆ ಸೇರಿಸಿಕೊಂಡಿತು. ಇಲ್ಲಿಂದ ಅವರು ಹಿಂತಿರುಗಿ ನೋಡಿಯೇ ಇಲ್ಲ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಐಪಿಎಲ್ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ರೋಹಿತ್ ಶರ್ಮಾ 243 ಐಪಿಎಲ್ ಪಂದ್ಯಗಳಲ್ಲಿ 6211 ರನ್ ಗಳಿಸಿದ್ದಾರೆ.

Story first published: Wednesday, March 20, 2024, 14:49 [IST]
Other articles published on Mar 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+