For Quick Alerts
ALLOW NOTIFICATIONS  
For Daily Alerts
 

IPL 2024 PlayOffs: ಟಾಪ್ 4 ಸ್ಥಾನ ಪಡೆಯಲು ಸಿಎಸ್‌ಕೆ, ಡಿಸಿ, ಆರ್‌ಸಿಬಿ ತಂಡಗಳ ಅವಕಾಶಗಳು

ಶುಕ್ರವಾರ, ಮೇ 10ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 35 ರನ್‌ಗಳಿಂದ ಸೋಲಿಸಿದ ಕಾರಣ, ಐಪಿಎಲ್ 2024ರ ಅಂಕಪಟ್ಟಿಯ ಗೊಂದಲ ಮುಂದುವರೆದಿದೆ.

ಐಪಿಎಲ್ 2024ರಲ್ಲಿ 60 ಪಂದ್ಯಗಳ ನಂತರವೂ 10 ತಂಡಗಳಲ್ಲಿ ಒಂದು ತಂಡ ಮಾತ್ರ ಪ್ಲೇಆಫ್ ಸ್ಥಾನ ಪಡೆದುಕೊಂಡಿದೆ ಮತ್ತು ಅದು ಕೋಲ್ಕತ್ತಾ ನೈಟ್ ರೈಡರ್ಸ್ ಆಗಿದೆ.

IPL 2024 PlayOffs Qualification Scenario CSK DC RCB Chances To Finish Top 4

ಇದಕ್ಕೆ ವ್ಯತಿರಿಕ್ತವಾಗಿ, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಈ ವರ್ಷ ನಿರಾಶಾದಾಯಕ ಪ್ರದರ್ಶನದ ನಂತರ ಪ್ಲೇಆಫ್ ರೇಸ್‌ನಿಂದ ಹೊರಹಾಕಲ್ಪಟ್ಟಿವೆ.

59ನೇ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್ ಗೆಲುವಿನ ನಂತರ, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್‌ನಂತಹ ತಂಡಗಳು ಇನ್ನೂ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಹೊಂದಿರುವ ಕಾರಣ ಪಂದ್ಯಾವಳಿಯು ಇದೀಗ ಇನ್ನಷ್ಟು ಕುತೂಹಲಕಾರಿಗಿದೆ.

12 ಪಂದ್ಯಗಳ ನಂತರ ತಲಾ 12 ಅಂಕಗಳೊಂದಿಗೆ ಸಿಎಸ್‌ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕೇವಲ ನೆಟ್ ರನ್ ರೇಟ್‌ನಿಂದ ಅಂಕಪಟ್ಟಿಯಲ್ಲಿ ಬೇರ್ಪಟ್ಟಿವೆ. ಇದೇ ವೇಳೆ, ಆರ್‌ಸಿಬಿ ತಮ್ಮ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಲು ನಾಲ್ಕು ಸತತ ಗೆಲುವುಗಳೊಂದಿಗೆ ಅದ್ಭುತವಾಗಿ ಪುನರಾಗಮನ ಮಾಡಿದೆ.

IPL 2024 PlayOffs Qualification Scenario CSK DC RCB Chances To Finish Top 4

ಪಂದ್ಯಾವಳಿಯ ಮೊದಲಾರ್ಧದಲ್ಲಿ 8 ಪಂದ್ಯಗಳಲ್ಲಿ 7 ಪಂದ್ಯಗಳ ಸೋಲಿನ ನಂತರ, ಫಾಫ್ ಡು ಪ್ಲೆಸಿಸ್ ನಾಯಕತ್ವದ ತಂಡವು ಇಲ್ಲಿಯವರೆಗೆ ಆಡಿದ 12 ಪಂದ್ಯಗಳಲ್ಲಿ ಐದು ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಹೊಂದಿದೆ.

ಸಿಎಸ್‌ಕೆ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್‌ಸಿಬಿ ತಂಡಗಳು ಭಾನುವಾರದ ಡಬಲ್-ಹೆಡರ್‌ನಲ್ಲಿ ತಮ್ಮ 13ನೇ ಲೀಗ್ ಪಂದ್ಯವನ್ನು ಆಡಲು ತಯಾರಿ ನಡೆಸುತ್ತಿದ್ದು, ಐಪಿಎಲ್ 2024ರ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಈ ಮೂರು ತಂಡಗಳು ಏನು ಮಾಡಬೇಕೆಂದು ಇಲ್ಲಿ ಗಮನಿಸೋಣ.

ಐಪಿಎಲ್ 2024: ಸಿಎಸ್‌ಕೆ ತಂಡದ ಪ್ಲೇಆಫ್ ಸನ್ನಿವೇಶ

ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ +0.491 ನೆಟ್ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾನುವಾರದಂದು ರಾಜಸ್ಥಾನ್ ರಾಯಲ್ಸ್ ತಂಡವನ್ನು ತವರಿನಲ್ಲಿ ಎದುರಿಸಲು ಸಜ್ಜಾಗಿದೆ.

ಬಳಿಕ ಮೇ 18ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ ತಮ್ಮ ಅಂತಿಮ ಲೀಗ್ ಹಂತದ ಪಂದ್ಯವನ್ನು ಆಡಲಿದೆ. ಎರಡೂ ಪಂದ್ಯಗಳನ್ನು ಗೆದ್ದರೆ ಸಿಎಸ್‌ಕೆ ಗರಿಷ್ಠ 16 ಅಂಕಗಳನ್ನು ತಲುಪಬಹುದು. ಆಗ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ಗಿಂತ ಉತ್ತಮ ನೆಟ್ ರನ್‌ರೇಟ್‌ನಿಂದಾಗಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಮೆಚ್ಚಿನ ತಂಡವಾಗಿದೆ.

ಸಿಎಸ್‌ಕೆ ಕೇವಲ ಒಂದು ಗೆದ್ದರೆ, ಡೆಲ್ಲಿ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ತಮ್ಮ ಒಂದು ತಂಡ ಸೋಲಲಿದೆ ಎಂಬ ಭರವಸೆಯೊಂದಿಗೆ ಸಿಎಸ್‌ಕೆ ಇನ್ನೂ ಅರ್ಹತೆ ಪಡೆಯಬಹುದು.

ಚೆನ್ನೈ ತನ್ನ ಎರಡೂ ಪಂದ್ಯಗಳನ್ನು ಸೋತರೆ, 12 ಅಂಕಗಳೊಂದಿಗೆ ಪಂದ್ಯಾವಳಿಯಿಂದ ಹೊರಬೀಳುತ್ತಾರೆ ಮತ್ತು ಎಲ್‌ಎಸ್‌ಜಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿಜೇತರು 14 ಅಂಕಗಳಿಗೆ ಮುನ್ನಡೆಯುತ್ತಾರೆ.

ಐಪಿಎಲ್ 2024: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಆಫ್ ಸನ್ನಿವೇಶ

ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಪ್ರಸ್ತುತ -0.316 ನೆಟ್ ರನ್‌ರೇಟ್ ಮತ್ತು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಉಳಿದ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ವಿರುದ್ಧ ಆಡಲಿದೆ. ಆಗ ಡೆಲ್ಲಿ ಕ್ಯಾಪಿಟಲ್ಸ್ ಗರಿಷ್ಠ 16 ಅಂಕಗಳನ್ನು ತಲುಪಬಹುದು. ಹೀಗಾಗಿ ಎರಡೂ ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ.

ನೇರ ಅರ್ಹತೆಯನ್ನು ಪಡೆಯಲು ಸಿಎಸ್‌ಕೆ ತಮ್ಮ ಉಳಿದಿರುವ ಪಂದ್ಯಗಳಲ್ಲಿ ಒಂದನ್ನಾದರೂ ಸೋಲಲಿದೆ ಎಂಬ ಆಶಾಭಾವನೆ ಹೊಂದಬೇಕಿದೆ. 16 ಅಂಕಗಳಲ್ಲಿ ಸಿಎಸ್‌ಕೆ ತಂಡದೊಂದಿಗೆ ಟೈ ಮಾಡಿಕೊಂಡರೆ, ನೆಟ್ ರನ್‌ರೇಟ್ ಮುನ್ನೆಲೆಗೆ ಬರುತ್ತದೆ. ಈ ಪರಿಸ್ಥಿತಿಯು ಸಿಎಸ್‌ಕೆ ತಂಡಕ್ಕೆ ಅನುಕೂಲಕರವಾಗಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು 14 ಅಂಕಗಳಲ್ಲಿ ಮುಗಿಸಿದರೆ, ಸಿಎಸ್‌ಕೆ ತನ್ನ ಎರಡೂ ಪಂದ್ಯಗಳನ್ನು ಸೋಲಬೇಕು ಮತ್ತು ಎಲ್‌ಎಸ್‌ಜಿ ಕನಿಷ್ಠ ಪಂದ್ಯವನ್ನಾದರೂ ಸೋಲಲಿದೆ ಎಂದು ಭಾವಿಸಬೇಕು. ಕೊನೆಯದಾಗಿ, ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಎರಡೂ ಪಂದ್ಯಗಳನ್ನು ಸೋತರೆ, ಸಿಎಸ್‌ಕೆ ತಂಡದ ಫಲಿತಾಂಶಗಳನ್ನು ಲೆಕ್ಕಿಸದೆ ಎಲ್‌ಎಸ್‌ಜಿ ಪ್ಲೇಆಫ್ ತಲುಪಲಿದೆ ಮತ್ತು ಡೆಲ್ಲಿ ಪಂದ್ಯಾವಳಿಯಿಂದ ಹೊರಗುಳಿಯಲಿದೆ.

ಐಪಿಎಲ್ 2024: ಆರ್‌ಸಿಬಿ ತಂಡದ ಪ್ಲೇಆಫ್ ಸನ್ನಿವೇಶ

ಐಪಿಎಲ್ 2024ರ ಪ್ಲೇಆಫ್ ಸ್ಥಾನ ಪಡೆಯಲು ಹೊರಗಿನ ಅವಕಾಶವನ್ನು ಹೊಂದಿರುವ ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದಾಗಿದೆ. ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತನ್ನ ಉಳಿದ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಗರಿಷ್ಠ 14 ಅಂಕಗಳನ್ನು ತಲುಪಬಹುದು. ಆದಾಗ್ಯೂ, ಅಗ್ರ 4ರಲ್ಲಿ ಸ್ಥಾನ ಪಡೆಯಲು ಇತರ ಫಲಿತಾಂಶಗಳು ನಿರ್ಣಾಯಕವಾಗಿವೆ.

ಆರ್‌ಸಿಬಿ ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆದ್ದು 14 ಅಂಕಗಳನ್ನು ತಲುಪಿದರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಸಿಎಸ್‌ಕೆ ಸೋಲಬೇಕು, ಎಲ್‌ಎಸ್‌ಜಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲಬೇಕು, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧ ಎಲ್‌ಎಸ್‌ಜಿ ಸೋಲಬೇಕು ಎಂದು ಆರ್‌ಸಿಬಿ ಬಯಸುತ್ತದೆ.

ಇದರೊಂದಿಗೆ, ಆರ್‌ಸಿಬಿ ಮತ್ತು ಎಲ್‌ಎಸ್‌ಜಿ 14 ಅಂಕಗಳಲ್ಲಿ ಸಮನಾಗಿರುತ್ತವೆ ಮತ್ತು ಉತ್ತಮ ನೆಟ್ ರನ್ ರೇಟ್ ಹೊಂದಿರುವ ತಂಡವು ಮುನ್ನಡೆಯುತ್ತದೆ.

ಆದಾಗ್ಯೂ, ಸಿಎಸ್‌ಕೆ ತನ್ನ ಉಳಿದ ಎರಡೂ ಪಂದ್ಯಗಳನ್ನು ಗೆದ್ದರೆ, ಎಸ್‌ಆರ್‌ಹೆಚ್ ತನ್ನ ಎರಡೂ ಪಂದ್ಯಗಳನ್ನು ಗಣನೀಯ ಅಂತರದಲ್ಲಿ ಸೋಲುವ ಅಗತ್ಯವಿದೆ ಮತ್ತು ಕೆಕೆಆರ್ ವಿರುದ್ಧ ಗುಜರಾತ್ ಟೈಟನ್ಸ್ ಸೋಲು ಅನುಭವಿಸಬೇಕು ಮತ್ತು ಎಲ್‌ಎಸ್‌ಜಿ ತನ್ನ ಉಳಿದ ಎರಡು ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಗೆಲ್ಲಬಾರದು ಎಂದು ಆರ್‌ಸಿಬಿ ಬಯಸುತ್ತದೆ.

ಈ ಮೇಲನ ಫಲಿತಾಂಶಗಳು ಆರು ತಂಡಗಳನ್ನು 14 ಅಂಕಗಳಲ್ಲಿ ಟೈ ಮಾಡಿಕೊಳ್ಳುತ್ತವೆ ಮತ್ತು ಉತ್ತಮ ನೆಟ್ ರನ್‌ರೇಟ್ ಹೊಂದಿರುವ ಎರಡು ತಂಡಗಳು ಪ್ಲೇಆಫ್‌ಗೆ ಪ್ರವೇಶ ಪಡೆಯಲಿವೆ. ಇದು ಸಂಭವಿಸಿದರೆ ಆರ್‌ಸಿಬಿ ತಂಡ ಐಪಿಎಲ್ 2024ರಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಹೊಂದಿರುತ್ತದೆ.

Story first published: Sunday, May 12, 2024, 11:10 [IST]
Other articles published on May 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+