IPL 2024 Playoffs Scenario: ಪ್ಲೇಆಫ್ ರೇಸ್‌ನ ರೋಚಕ ಕ್ಲೈಮ್ಯಾಕ್ಸ್; ಟಾಪ್ 4 ಸ್ಥಾನಕ್ಕಾಗಿ RCB vs CSK ಪೈಪೋಟಿ
2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಗುಂಪು ಹಂತದಲ್ಲಿ ಕೇವಲ 8 ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಪ್ಲೇಆಫ್ ರೇಸ್ ರೋಚಕ ಕ್ಲೈಮ್ಯಾಕ್ಸ್‌ನತ್ತ ಸಾಗುತ್ತಿದೆ. ಈವರೆಗೆ ಕೇವಲ ಒಂದು ತಂಡ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿದೆ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಆಗಿದೆ.
ಅಗ್ರ 4ರ ಉಳಿದ ಮೂರು ಸ್ಥಾನಗಳಿಗಾಗಿ 7 ತಂಡಗಳು ರೇಸ್‌ನಲ್ಲಿ ಓಡುತ್ತಿವೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೂಪರ್ ಸಂಡೇಯಲ್ಲಿ ಕ್ರಮವಾಗಿ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ತಮ್ಮ ತವರಿನಲ್ಲಿ ಸೋಲಿಸಿ ಪ್ಲೇಆಫ್ ರೇಸ್‌ನ ಭರವಸೆಯನ್ನು ಜೀವಂತವಾಗಿರಿಸಿಕೊಂಡವು.

ಬೆಂಗಳೂರಿನಲ್ಲಿ ಶನಿವಾರ, ಮೇ 18ರಂದು ನಡೆಯಲಿರುವ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿದ್ದು, ಹೈ-ವೋಲ್ಟೇಜ್ ಹಣಾಹಣಿಯ ನಿರೀಕ್ಷೆಯು ದುಪ್ಪಟ್ಟಾಗಿದೆ. ರೋಚಕ ಕದನದಲ್ಲಿ ಗೆಲ್ಲುವ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸಾಧ್ಯತೆಯಿದೆ. ಆದರೆ, ಎರಡೂ ತಂಡಗಳು ಪ್ಲೇಆಫ್‌ಗೆ ಹೋಗುವ ಅವಕಾಶವಿದೆ.
ಐಪಿಎಲ್ 2024ರ ಲೀಗ್ ಹಂತದ ಅಂತಿಮ ಪಂದ್ಯಗಳು ನಡೆಯುತ್ತಿರುವ ಕಾರಣ, ,ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಬಿದ್ದಿವೆ. ಇನ್ನು 12 ಪಂದ್ಯಗಳಲ್ಲಿ 10 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್‌ಗೆ ಹೊರಗಿನ ಅವಕಾಶವಿದೆ.

12 ಪಂದ್ಯಗಳಿಂದ 12 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಹೊರಗಿನ ಅವಕಾಶಕ್ಕಿಂತ ಹೆಚ್ಚಿನ ಅವಕಾಶವಿದೆ. ಆದರೆ, ಭಾನುವಾರ ಆರ್‌ಸಿಬಿ ವಿರುದ್ಧ 47 ರನ್‌ಗಳಿಂದ ಸೋತ ನಂತರ ಡೆಲ್ಲಿ ಕ್ಯಾಪಿಟಲ್ಸ್ ಅವಕಾಶಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಬಹುತೇಕ ಪ್ಲೇಆಫ್ ರೇಸ್‌ನಿಂದ ಹೊರಗುಳಿಯಲಿದೆ.
ಐಪಿಎಲ್ 2024ರ ಲೀಗ್ ಹಂತದ ಕೊನೆಯ ಹಂತಕ್ಕೆ ಮುನ್ನಡೆಯುತ್ತಿದ್ದಂತೆ, 3ನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್, 4ನೇ ಸ್ಥಾನದಲ್ಲಿರುವ ಸಿಎಸ್‌ಕೆ ಮತ್ತು ಸತತ ಐದನೇ ಗೆಲುವಿನ ನಂತರ 5ನೇ ಸ್ಥಾನಕ್ಕೆ ಏರಿದ ಆರ್‌ಸಿಬಿ ತಂಡಗಳು ಪ್ಲೇಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ.
ಆರ್‌ಸಿಬಿ ಮತ್ತು ಸಿಎಸ್‌ಕೆ ಎರಡೂ ತಂಡಗಳು ಹೇಗೆ ಅರ್ಹತೆ ಪಡೆಯಬಹುದು?
ಆರ್‌ಸಿಬಿ ಮತ್ತು ಸಿಎಸ್‌ಕೆ ಎರಡೂ ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆಯಬೇಕಾದರೆ, ಇತರ ಪಂದ್ಯಗಳ ಫಲಿತಾಂಶಗಳು ಅವರ ಪರವಾಗಿ ಹೋಗಬೇಕು.
ಶನಿವಾರದ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡವು ಸಿಎಸ್‌ಕೆ ತಂಡವನ್ನು ಸೋಲಿಸಬೇಕು. ಆದರೆ ದೊಡ್ಡ ಅಂತರದಿಂದ ಅಲ್ಲ. ಬೆಂಗಳೂರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋತರೂ ಅವರ ನೆಟ್ ರನ್ ರೇಟ್ ಕಡಿಮೆ ಆಗಬಾರದು.
ಮೊದಲನೆಯದಾಗಿ ಸನ್ ರೈಸರ್ಸ್ ಹೈದರಾಬಾದ್ ತನ್ನ ಉಳಿದ ಎರಡೂ ಪಂದ್ಯಗಳನ್ನು ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಸೋಲಬೇಕು ಮತ್ತು 14 ಅಂಕಗಳಲ್ಲಿ ಉಳಿಯಬೇಕು. ಎಸ್‌ಆರ್‌ಹೆಚ್ ದೊಡ್ಡ ಅಂತರದಿಂದ ಸೋಲಬೇಕಾಗುತ್ತದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ತವರಿನಲ್ಲಿ ಉತ್ತಮ ಫಾರ್ಮ್‌ನಲ್ಲಿರುವುದರಿಂದ ಮತ್ತು ಎರಡೂ ಪಂದ್ಯಗಳನ್ನು ಗೆಲ್ಲುವ ನೆಚ್ಚಿನ ತಂಡವಾಗಿರುವುದರಿಂದ ಇದು ಅಸಂಭವವಾಗಿದೆ. ಪ್ಯಾಟ್ ಕಮಿನ್ಸ್ ನಾಯಕತ್ವದ ತಂಡ ಅಗ್ರ 2ನೇ ಸ್ಥಾನ ಪಡೆಯಲು ಎದುರು ನೋಡುತ್ತಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ತಮ್ಮ ಉಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೆ, ಸಿಎಸ್‌ಕೆ, ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ಪ್ಲೇಆಫ್ ಭರವಸೆಯು ಕಷ್ಟಕರವಾಗುತ್ತದೆ. ಆಗ ಈ ಮೇಲಿನ ತಂಡಗಳು ಕೇವಲ ಒಂದು ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಾಗುತ್ತದೆ.
ಆದಾಗ್ಯೂ, ನಾವು ಸಿಎಸ್‌ಕೆ vs ಆರ್‌ಸಿಬಿ ಎಲಿಮಿನೇಟರ್ ಪಂದ್ಯದ ನಡುವೆಯೇ, ಎರಡೂ ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸನ್ನಿವೇಶಗಳು ಇಲ್ಲಿವೆ.
* ಗುಜರಾತ್ ಟೈನಟ್ಸ್ ಸೋಮವಾರ ಅಹಮದಾಬಾದ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲಬೇಕು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಬೇಕು.
* ಮಂಗಳವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಬೇಕು.
* ಶುಕ್ರವಾರ ಮುಂಬೈನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಬೇಕು ಅಥವಾ ಲಕ್ನೋ ತಂಡ ಮುಂಬೈ ತಂಡವನ್ನು ದೊಡ್ಡ ಅಂತರದಿಂದ ಸೋಲಿಸಬಾರದು.
ಈ ಮೇಲಿನ ಎಲ್ಲಾ ಫಲಿತಾಂಶಗಳು ಸಂಭವಿಸಿದಲ್ಲಿ 4 ಅಥವಾ 5 ತಂಡಗಳು 14 ಅಂಕಗಳಲ್ಲಿ ಟೈ ಆಗುತ್ತವೆ. ಉತ್ತಮ ನೆಟ್ ರನ್ ರೇಟ್ ಆಧಾರದ ಮೇಲೆ ಸನ್‌ರೈಸರ್ಸ್ ಹೈದರಾಬಾದ್ ಹೊರಬೀಳಲಿದೆ ಮತ್ತು ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳು ಅಗ್ರ 4ರಲ್ಲಿ ಸ್ಥಾನ ಪಡೆಯಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications