For Quick Alerts
ALLOW NOTIFICATIONS  
For Daily Alerts
 

IPL 2024: ಅಭ್ಯಾಸ ಆರಂಭಿಸಿದ ಪಂಜಾಬ್‌ ಕಿಂಗ್ಸ್‌: ಕಪ್‌ ಗೆಲುವಿನ ಬಗ್ಗೆ ಶಿಖರ್‌ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್‌ ಟಿ20 ಲೀಗ್‌ಗೆ ಕ್ಷಣಗಣನೆ ಆರಂಭವಾಗಿದೆ. ಈ ಲೀಗ್‌ನಲ್ಲಿ ಚಾಂಪಿಯನ್‌ ಪಟ್ಟಕೇರಲು ತಂಡಗಳು ಭಾರೀ ತಾಲೀಮು ನಡೆಸುತ್ತಿವೆ. ಚೊಚ್ಚಲ ಬಾರಿಗೆ ಕಪ್‌ಗೆ ಮುತ್ತಿಡುವ ಕನಸು ಕಾಣುತ್ತಿರುವ ಪಂಜಾಬ್‌ ಕಿಂಗ್ಸ್‌ ತಂಡ ಈಗಾಗಲೇ ಅಭ್ಯಾಸವನ್ನು ಆರಂಭಿಸಿದೆ. ಸ್ಟಾರ್‌ ಆಟಗಾರರನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಪಂಜಾಬ್‌ ಅಬ್ಬರಿಸಲು ಸಜ್ಜಾಗಿದೆ. ಮೆಲ್ನೋಟಕ್ಕಂತೂ ಪಂಜಾಬ್‌ ಸೂಪರ್ ಆಗಿ ಕಾಣುತ್ತಿದ್ದು, ಈ ಬಾರಿ ಕಪ್‌ಗೆಲ್ಲುವ ನಿರೀಕ್ಷೆ ಹೆಚ್ಚಿಸಿದೆ.

ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಇಂಡಿಯನ್ ಪ್ರೀಮಿಯರ್ ಲೀಗ್ 2024 ಗಾಗಿ ತಯಾರಿ ಆರಂಭಿಸಿದ್ದಾರೆ. ಧವನ್ ಜತೆಗೆ ಪಂಜಾಬ್ ನ ಇತರ ಆಟಗಾರರೂ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಹೆಚ್ಚಿನ ಆಟಗಾರರು ಪ್ರಸ್ತುತ ರಾಷ್ಟ್ರೀಯ ಹಾಗೂ ದೇಶೀಯ ತಂಡಗಳಿಗಾಗಿ ಆಡುತ್ತಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಪಂಜಾಬ್ ಹಲವು ಉತ್ತಮ ಆಟಗಾರರನ್ನು ತಂಡಕ್ಕೆ ಬರಮಾಡಿಕೊಂಡಿದೆ.

IPL 2024: Punjab Kings Begin Practice: Shikhar Shares Winning Cup Aspirations

ಸಮತೋಲನ ತಂಡ

ತಂಡಕ್ಕೆ ಸೇರಿಸಿಕೊಂಡ ಆಟಗಾರರಲ್ಲಿ ಪ್ರಮುಖವಾಗಿ ಎದ್ದು ಕಾಣುವ ಹೆಸರು ಹರ್ಷಲ್ ಪಟೇಲ್ ಅವರದ್ದು. ಪಂಜಾಬ್ ಕಿಂಗ್ಸ್ ಇತ್ತೀಚೆಗೆ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಧವನ್ ತಂಡದ ಬಗ್ಗೆ ಮನ ಬಿಚ್ಚಿ ಮಾತನಾಡುತ್ತಿರುವುದು ಕಂಡುಬಂದಿದೆ. ಈ ಬಾರಿ ತಂಡದಲ್ಲಿ ಸಾಕಷ್ಟು ಸಮತೋಲನವಿದೆ ಎಂದು ಕ್ಯಾಪ್ಟನ್‌ ತಿಳಿಸಿದ್ದಾರೆ.

ಪಂಜಾಬ್ ಕಿಂಗ್ಸ್ ತನ್ನ ಎಕ್ಸ್‌ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಈ ವೇಳೆ ಧವನ್, ''ಈ ಬಾರಿ ನಮ್ಮ ತಂಡ ಸಾಕಷ್ಟು ಸಮತೋಲಿತವಾಗಿದೆ. ನಮ್ಮಲ್ಲಿ ಹರ್ಷಲ್ ಪಟೇಲ್ ಇದ್ದಾರೆ. ಅವರಿಗೆ ಸಾಕಷ್ಟು ಅನುಭವವಿದೆ. ನಮ್ಮ ತಂಡಕ್ಕೆ ಕ್ರಿಸ್ ವೋಕ್ಸ್ ಸೇರಿದ್ದಾರೆ. ಅವರೊಬ್ಬ ಅತ್ಯುತ್ತಮ ಆಲ್ ರೌಂಡರ್. ರಿಲೆ ರಷ್ಯನ್ ಇದ್ದು, ನಮ್ಮ ತಂಡದ ಸಂಪೂರ್ಣ ಗಮನವು ಉತ್ತಮ ಆಟವಾಡುವತ್ತ ನೆಟ್ಟಿದೆ. ಪ್ರತಿ ಪಂದ್ಯದಲ್ಲೂ 100 ಪ್ರತಿಶತ ನೀಡುತ್ತೇವೆ. ಈ ಬಾರಿ ಹೆಚ್ಚಿನ ಸಿದ್ಧತೆಯೊಂದಿಗೆ ಮೈದಾನಕ್ಕೆ ಎಂಟ್ರಿ ನೀಡುತ್ತೇವೆ ಎಂದಿದ್ಧಾರೆ.

IPL 2024: Punjab Kings Begin Practice: Shikhar Shares Winning Cup Aspirations

ಡೆತ್‌ ಓವರ್‌ ಸ್ಪೆಷಲಿಸ್ಟ್‌ ಹರ್ಷಲ್

ಐಪಿಎಲ್ 2024 ರ ಹರಾಜಿನಲ್ಲಿ ಪಂಜಾಬ್ ಹರ್ಷಲ್ ಅವರನ್ನು ಖರೀದಿಸಿತ್ತು. ಅವರ ಮೂಲ ಬೆಲೆ 2 ಕೋಟಿ ರೂ. ಆದರೆ ಪಂಜಾಬ್ ಅವರನ್ನು 11.75 ಕೋಟಿ ನೀಡಿ ಖರೀದಿಸಿದೆ. ಹರ್ಷಲ್ ಅವರ ಐಪಿಎಲ್ ದಾಖಲೆಯನ್ನು ಚೆನ್ನಾಗಿದೆ. ಅವರು 92 ಪಂದ್ಯಗಳಲ್ಲಿ 111 ವಿಕೆಟ್ ಪಡೆದಿದ್ದಾರೆ. ಹರ್ಷಲ್ ಟೀಂ ಇಂಡಿಯಾ ಪರ 25 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಅವಧಿಯಲ್ಲಿ 29 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಹರ್ಷಲ್ 178 ಟಿ20 ಪಂದ್ಯಗಳಲ್ಲಿ 209 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ ಅವರು 100 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡುವಾಗ 1235 ರನ್ ಗಳಿಸಿದ್ದಾರೆ.

ಹರ್ಷಲ್‌ ಪಟೇಲ್‌ ಡೆತ್ ಓವರ್‌ಗಳಲ್ಲಿ ಪಂಜಾಬ್ ತಂಡಕ್ಕೆ ನೆರವಾಗಬಲ್ಲ ಆಟಗಾರ. ಇವರು ಕೊನೆಯ ಓವರ್‌ಗಳಲ್ಲಿ ಸ್ಲೋವರ್‌ ಒನ್ ಹಾಗೂ ಯಾರ್ಕರ್‌ಗಳನ್ನು ಹಾಕಿ ಎದುರಾಳಿ ಬ್ಯಾಟ್ಸ್‌ ಮನ್‌ಗಳಿಗೆ ಕಾಟ ನೀಡಬಲ್ಲರು. ಇವರ ಆಗಮನದಿಂದ ತಂಡದ ಬೌಲಿಂಗ್ ಸುಧಾರಿಸಿಕೊಂಡಿದೆ.

ಶಿಖರ್ ಧವನ್ ಪಂಜಾಬ್ ತಂಡದ ಬ್ಯಾಟಿಂಗ್‌ಗೆ ಶಕ್ತಿ ತುಂಬಬಲ್ಲ ಆಟಗಾರ. ಇವರು ಶ್ರೀಮಂತ ಲೀಗ್‌ನಲ್ಲಿ ಇದುವರೆಗೆ 217 ಪಂದ್ಯಗಳನ್ನು ಆಡಿದ್ದು, 35.39ರ ಸರಾಸರಿಯಲ್ಲಿ 6617 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಎರಡು ಅರ್ಧಶತಕ ಹಾಗೂ 50 ಅರ್ಧಶತಕಗಳು ಸೇರಿವೆ. ಯುವ ಆಟಗಾರರು ಹಾಗೂ ಅನುಭವಿಗಳ ಬಲ ತಂಡಕ್ಕಿದ್ದು, ಈ ಬಾರಿ ಪಂಜಾಬ್‌ ಚೊಚ್ಚಲ ಬಾರಿಗೆ ಕಪ್‌ ಎತ್ತುವ ಪ್ಲ್ಯಾನ್ ಮಾಡಿಕೊಂಡಿದೆ.

Story first published: Tuesday, January 30, 2024, 14:44 [IST]
Other articles published on Jan 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+