IPL 2024: CSK ತಂಡಕ್ಕೆ ಬೂಸ್ಟ್ ನೀಡಲಿರುವ ರಚಿನ್ ರವೀಂದ್ರ
ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಭ್ಯಾಸ ಆರಂಭಿಸಿದ್ದಾರೆ. ಈ ತಂಡದ ಹಲವು ಆಟಗಾರರು ತಮ್ಮ ತಮ್ಮ ರಾಷ್ಟ್ರೀಯ ತಂಡದ ಪರ ಮಿಂಚುತ್ತಿದ್ದು ಫ್ರಾಂಚೈಸಿಗೆ ಖುಷಿ ನೀಡಿದ್ದಾರೆ. ಹ್ಯಾಮಿಲ್ಟನ್‌ನಲ್ಲಿ ಯಂಗ್ ಪ್ಲೇಯರ್ ಒಬ್ಬ ನೀಡಿದ ಪ್ರದರ್ಶನ ನಿಜಕ್ಕೂ ಸಿಎಸ್‌ಕೆ ತಂಡಕ್ಕೆ ಬೂಸ್ಟ್ ನೀಡಿದಂತೆ ಆಗಿದೆ.
ಸಿಎಸ್‌ಕೆ ಏನೇ ಮಾಡಿದರೂ ಪಕ್ಕಾ ಲೆಕ್ಕಾಚಾರ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲೂ ಸಿಎಸ್‌ಕೆ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಈ ಬಾರಿಯ ಐಪಿಎಲ್ ಹರಾಜಿನ ಮೂಲಕ ಸಿಎಸ್‌ಕೆ ತಂಡದ ಪ್ಲೇಯರ್, ಪ್ರಸಕ್ತ ಋತುವಿನಲ್ಲಿ ಪದಾರ್ಪಣೆ ಮಾಡುವ ಕನಸನ್ನು ಕಾಣುತ್ತಿದ್ದಾರೆ. ಸಿಕ್ಕ ಅವಕಾಶದಲ್ಲಿ ಅಬ್ಬರಿಸುತ್ತಿರುವ ಯಂಗ್ ಪ್ಲೇಯರ್ ನ್ಯೂಜಿಲೆಂಡ್ ತಂಡದ ಪರ ಭರವಸೆಯ ಮೂಡಿಸಿದ್ದಾರೆ.

ಆ ಪ್ಲೇಯರ್ ಯಾರು?
ಈ ಆಟಗಾರನೇ ನ್ಯೂಜಿಲೆಂಡ್ ಭರವಸೆಯ ಬೆಳಕು ರಚಿನ್ ರವೀಂದ್ರ. ಯಂಗ್ ಪ್ಲೇಯರ್ ಹಲವು ಬಾರಿ ದಿಟ್ಟ ಪ್ರದರ್ಶನ ನೀಡಿದ್ದಾರೆ. ಅವರು ಈಗ ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದಾರೆ. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಹ್ಯಾಮಿಲ್ಟನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ರಚಿನ್ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾದ ಪ್ರಮುಖ ಮೂವರು ಆಟಗಾರರಿಗೆ ಪೆವಿಲಿಯನ್ ಹಾದಿ ತೋರಿಸಿರುವ ರಚಿನ್ ಅಬ್ಬರಿಸಿದ್ದಾರೆ. ಕೀಗನ್ ಪೀಟರ್ಸನ್, ಡೇವಿಡ್ ಬೆಡಿಂಗ್ಹ್ಯಾಮ್ ಮತ್ತು ಜುಬೈರ್ ಹಮ್ಜಾ ಅವರನ್ನು ರಚಿನ್ ಔಟ್ ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಚಿನ್ ಚೆನ್ನೈ ಸೂಪರ್ ಕಿಂಗ್ಸ್‌ನ ಭಾಗವಾಗಿದ್ದಾರೆ.

ಹ್ಯಾಮಿಲ್ಟನ್ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಸುದ್ದಿ ಬರೆಯುವ ಹೊತ್ತಿಗೆ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತ್ತು. ರಚಿನ್ ರವೀಂದ್ರ ದಕ್ಷಿಣ ಆಫ್ರಿಕಾಕ್ಕೆ ಕಾಡಿದರು. ಇವರು 3 ವಿಕೆಟ್ ಪಡೆದಿದ್ದಾರೆ. ರಾಚಿನ್ 20 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಹಮ್ಜಾ ಅವರನ್ನು ಔಟ್ ಮಾಡಿದರು. ಇದಾದ ಬಳಿಕ ಕೀಗನ್ ಪೀಟರ್ಸನ್ ಕೇವಲ 2 ರನ್ ಗಳ ವೈಯಕ್ತಿಕ ಸ್ಕೋರ್ ನಲ್ಲಿ ಪೆವಿಲಿಯನ್ ಹಾದಿ ತೋರಿಸಿದರು. ಡೇವಿಡ್ ಬೆಡಿಂಗ್ಹ್ಯಾಮ್ 39 ರನ್‌ಗಳಿಸಿ ಭರವಸೆ ಮೂಡಿಸಿದ್ದಾಗ ಖೆಡ್ಡಾ ತೋಡಿದರು.
ರಚಿನ್ ಅವರನ್ನು ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಹರಾಜಿನಲ್ಲಿ ಖರೀದಿಸಿದೆ. 1.80 ಕೋಟಿಗೆ ರಚಿನ್ ಅವರನ್ನು ಚೆನ್ನೈ ಖರೀದಿಸಿದೆ. ಈ ವಿಶ್ವಕಪ್ 2023 ರ ಸಮಯದಲ್ಲಿ ಅವರ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದಾರೆ. ಚಿನ್ ಆಲ್ ರೌಂಡರ್ ಆಟಗಾರ. ಬ್ಯಾಟಿಂಗ್ ಜೊತೆಗೆ ಬೌಲಿಂಗ್ ನಲ್ಲೂ ಪರಿಣತರು. ರಚಿನ್ 25 ಏಕದಿನ ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ 820 ರನ್ ಕೂಡ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications