For Quick Alerts
ALLOW NOTIFICATIONS  
For Daily Alerts
 

IPL 2024: ರವೀಂದ್ರ ಜಡೇಜಾ ಸಿಕ್ಸರ್‌ಗಳ ದಾಖಲೆ; ಪಟ್ಟಿಯಲ್ಲಿ ಆರ್‌ಸಿಬಿ ಪ್ಲೇಯರ್‌ಗೆ ಎಷ್ಟು ಸ್ಥಾನ ಇಲ್ಲಿದೆ ವರದಿ

ಚೆನ್ನೈನ ಎಂ ಚಿದಂಬರಂ ಅಂಗಳದಲ್ಲಿ ನಡೆದ ಐಪಿಎಲ್‌ 2024ರ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್, ಆರ್‌ಸಿಬಿ ತಂಡವನ್ನು ಮಣಿಸಿದೆ. ಆರು ವಿಕೆಟ್‌ಗಳಿಂದ ಜಯ ಸಾಧಿಸಿರುವ ಸಿಎಸ್‌ಕೆ ಮೊದಲ ಗೆಲುವಿನ ನಗೆ ಬೀರಿದೆ. ಈ ಮೂಲಕ ಸಿಎಸ್‌ಕೆ ಶುಭಾರಂಭ ಮಾಡಿದೆ. ಗೆಲುವಿನಲ್ಲಿ ಮುಸ್ತಾಫಿಜುರ್‌ ರೆಹಮಾನ್‌ ಅಮೂಲ್ಯ ಕಾಣಿಕೆ ನೀಡಿದ್ದಾರೆ.

ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಬರೆದರು. ಅವರು ಐಪಿಎಲ್‌ನಲ್ಲಿ ಸಿಕ್ಸರ್‌ಗಳ ಶತಕ ಪೂರೈಸಿದರು. ಆದರೆ, ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಡೇಜಾ ಹಿಂದಿದ್ದಾರೆ.

IPL 2024 Ravindra Jadeja s record sixes Here is the report of how many RCB players have in the list

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬ್ಯಾಟಿಂಗ್ ಮಾಡಿದ ಜಡೇಜಾ ಸಿಕ್ಸರ್‌ಗಳ ಶತಕ ಪೂರೈಸಿದರು. ಈ ಪಂದ್ಯದಲ್ಲಿ ಅವರು 17 ಎಸೆತಗಳನ್ನು ಎದುರಿಸಿ ಅಜೇಯ 25 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಜಡೇಜಾ ಒಂದು ಸಿಕ್ಸರ್ ಬಾರಿಸಿದ್ದರು.

ಐಪಿಎಲ್‌ನಲ್ಲಿ ರವೀಂದ್ರ ಜಡೇಜಾ ಅವರ ದಾಖಲೆ ಸ್ಥಿರವಾಗಿದೆ. ಜಡ್ಡು ಐಪಿಎಲ್‌ನಲ್ಲಿ ಆಡಿದ 227 ಪಂದ್ಯಗಳಲ್ಲಿ 2717 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 100 ಸಿಕ್ಸರ್ ಮತ್ತು 193 ಬೌಂಡರಿಗಳನ್ನು ಬಾರಿಸಿದ್ದಾರೆ. ಜಡೇಜಾ ಐಪಿಎಲ್‌ನಲ್ಲಿ ಅಜೇಯ 62 ಬಾರಿಸಿದ್ದೇ ಗರಿಷ್ಠ ಸ್ಕೋರ್.

IPL 2024 Ravindra Jadeja s record sixes Here is the report of how many RCB players have in the list

ಗರಿಷ್ಠ ಸಿಕ್ಸರ್‌ ಬಾರಿಸಿದ್ದು ಯಾರು?

ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಯುನಿವರ್ಸಲ್ ಬಾಸ್‌ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್‌ 142 ಪಂದ್ಯಗಳಲ್ಲಿ 357 ಸಿಕ್ಸರ್‌ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದು, ಇವರು 243 ಪಂದ್ಯಗಳಲ್ಲಿ 257 ಸಿಕ್ಸರ್ ಬಾರಿಸಿದ್ದಾರೆ. ಎಬಿ ಡಿವಿಲಿಯರ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು 251 ಸಿಕ್ಸರ್‌ ಸಿಡಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ 239 ಸಿಕ್ಸರ್‌ ಬಾರಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 235 ಸಿಕ್ಸರ್‌ ಬಾರಿಸಿದ್ದು ಐದನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ 2024 ಪ್ರಾರಂಭವಾಗಿದೆ. CSK ತನ್ನ ಮೊದಲ ಪಂದ್ಯವನ್ನು ಗೆದ್ದು ಅಬ್ಬರಿಸಿದೆ. ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ರನ್‌ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್‌ ಮಾಡಿದ ಸಿಎಸ್‌ಕೆ ಇನ್ನು ಆರು ವಿಕೆಟ್‌ ಬಾಕಿ ಇರುವಂತೆ, 18.4 ಓವರ್‌ಗಳಲ್ಲಿ ಗುರಿ ಮುಟ್ಟಿತು.

Story first published: Saturday, March 23, 2024, 12:16 [IST]
Other articles published on Mar 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+