For Quick Alerts
ALLOW NOTIFICATIONS  
For Daily Alerts
 

IPL 2024: ಜಿಟಿ ವಿರುದ್ಧ ಗೆದ್ದ ಬಳಿಕ ಕೊನೆಯ ಸ್ಥಾನದಿಂದ ಮೇಲೆದ್ದ ಆರ್‌ಸಿಬಿ; ಪ್ಲೇಆಫ್ ಸನ್ನಿವೇಶ ಹೇಗಿದೆ?

ಶನಿವಾರ, ಮೇ 4ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 52ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 4 ವಿಕೆಟ್‌ಗಳ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೆದ್ದು 7ನೇ ಸ್ಥಾನಕ್ಕೆ ಜಿಗಿದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ 19.3 ಓವರ್‌ಗಳಲ್ಲಿ 147 ರನ್‌ಗಳಿಗೆ ಸರ್ವಪತನ ಕಂಡಿತು. ನಂತರ ಆರ್‌ಸಿಬಿ ತಂಡ ಇನ್ನೂ 6.2 ಓವರ್‌ಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳನ್ನು ಕಳೆದುಕೊಂಡು ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು.

IPL 2024 RCB Move To 7th Place After Win Against Gujarat Titans What s RCB s Playoff Scenario

ಆರ್‌ಸಿಬಿ ಪರ ವಿರಾಟ್ ಕೊಹ್ಲಿ 42 ರನ್, ಫಾಫ್ ಡು ಪ್ಲೆಸಿಸ್ 64 ರನ್, ಮೊಹಮ್ಮದ್ ಸಿರಾಜ್ 29 ರನ್‌ಗೆ 2 ವಿಕೆಟ್ ಮತ್ತು ಯಶ್ ದಯಾಳ್ 21 ರನ್‌ಗೆ 2 ವಿಕೆಟ್ ಪಡೆದು ಗಮನಾರ್ಹ ಕೊಡುಗೆಯೊಂದಿಗೆ ಪಂದ್ಯ-ವಿಜೇತ ಪ್ರದರ್ಶನ ನೀಡಿದರು.

ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡವು ಐಪಿಎಲ್ 2024ರಲ್ಲಿ ಈವರೆಗೆ ಆಡಿದ 11 ಪಂದ್ಯಗಳಲ್ಲಿ 4 ಗೆಲುವು ಮತ್ತು 7 ಸೋಲುಗಳೊಂದಿಗೆ 8 ಅಂಕಗಳನ್ನು ಹೊಂದಿದೆ ಮತ್ತು ತನ್ನ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೆ ಗರಿಷ್ಠ 14 ಅಂಕಗಳನ್ನು ಪಡೆಯಬಹುದಾಗಿದೆ.

ಗುಜರಾತ್ ಟೈಟನ್ಸ್ ವಿರುದ್ಧ ಇನ್ನೂ 38 ಎಸೆತಗಳು ಬಾಕಿ ಇರುವಂತೆಯೆ ಆರ್‌ಸಿಬಿ ತಂಡದ ಗೆಲುವು ಅದರ ನೆಟ್ ರನ್‌ರೇಟ್ ಹೆಚ್ಚಿಸಿತು ಮತ್ತು ಇದು ಪ್ಲೇಆಫ್ ಭರವಸೆಯನ್ನು ಹತ್ತಿರಕ್ಕೆ ತಂದಿದೆ.

IPL 2024 RCB Move To 7th Place After Win Against Gujarat Titans What s RCB s Playoff Scenario

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಉಳಿದ ಮೂರು ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಎದುರಿಸಲಿದೆ.

ಆರ್‌ಸಿಬಿ ತಂಡದ ಪ್ಲೇಆಫ್ ಸನ್ನಿವೇಶ

ಆರ್‌ಸಿಬಿ ತಂಡ ಪ್ಲೇಆಫ್ ತಲುಪಬೇಕಾದರೆ ತನ್ನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು. ಅಲ್ಲದೆ ಸನ್‌ರೈಸರ್ಸ್ ಹೈದರಾಬಾದ್ ಅಥವಾ ಲಕ್ನೋ ಸೂಪರ್ ಜೈಂಟ್ಸ್ ತಂಡವು ಒಂದಕ್ಕಿಂತ ಹೆಚ್ಚು ಗೆಲುವುಗಳನ್ನು ಪಡೆಯಬಾರದು. ಏಕೆಂದರೆ, ಉಭಯ ತಂಡಗಳು ಸದ್ಯ ಆಡಿದ 10 ಪಂದ್ಯಗಳಿಂದ 12 ಅಂಕಗಳನ್ನು ಹೊಂದಿವೆ.

ಇನ್ನು 10 ಅಂಕಗಳನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಎರಡಕ್ಕಿಂತ ಹೆಚ್ಚು ಗೆಲುವುಗಳನ್ನು ಪಡೆಯಬಾರದು. ಅದೇ ರೀತಿ, ಪಂಜಾಬ್ ಕಿಂಗ್ಸ್ ಆಡಿದ 10 ಪಂದ್ಯಗಳಿಂದ ಎಂಟು ಅಂಕಗಳನ್ನು ಹೊಂದಿದ್ದು, ಮೂರಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲಬಾರದು.

ಈ ಸನ್ನಿವೇಶಗಳು ನಡೆದರೆ, ಆರು ತಂಡಗಳು ತಲಾ 14 ಅಂಕಗಳಲ್ಲಿ ಸಮನಾಗಿರುತ್ತವೆ. ಆಗ ನೆಟ್ ರನ್ ರೇಟ್ ಚಿತ್ರಣ ಮುನ್ನೆಲೆಗೆ ಬರಲಿದೆ.

ಆರ್‌ಸಿಬಿ ತಂಡ 14 ಅಂಕಗಳೊಂದಿಗೆ ಪ್ಲೇಆಫ್‌ಗೆ ಪ್ರವೇಶಿಸಬಹುದು. ಆರ್‌ಸಿಬಿ ತಂಡ ಒಂದು ಪಂದ್ಯದಲ್ಲಿ ಸೋತರೂ, ಈ ಮೇಲೆ ತಿಳಿಸಿದ ಉಳಿದ ಐದು ತಂಡಗಳು 12 ಅಂಕಗಳಿಗಿಂತ ಹೆಚ್ಚು ಗಳಿಸಬಾರದು ಎಂದು ಭಾವಿಸಬೇಕು. ಇದು ನೆಟ್ ರನ್ ರೇಟ್‌ನಲ್ಲಿ ಪ್ಲೇಆಫ್ ಅವಕಾಶವನ್ನು ನಿರ್ಧರಿಸುತ್ತದೆ.

Story first published: Sunday, May 5, 2024, 14:35 [IST]
Other articles published on May 5, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+