For Quick Alerts
ALLOW NOTIFICATIONS  
For Daily Alerts
 

IPL 2024: CSK ವಿರುದ್ಧ ಗೆದ್ದರೂ RCB ಪ್ಲೇಆಫ್ ಪ್ರವೇಶಿಸಲ್ಲ; ಹಾಗಾದರೆ ಅರ್ಹತೆ ಪಡೆಯಲು ಏನು ಮಾಡಬೇಕು?

ಶನಿವಾರ, ಮೇ 18ರಂದು ಬೆಂಗಳೂರಿನ ಐಕಾನಿಕ್ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಹೈ-ವೋಲ್ಟೇಜ್ ಪಂದ್ಯದ ವೇಳೆ ಐಪಿಎಲ್ 2024ರ ಪ್ಲೇಆಫ್‌ನ ನಾಲ್ಕನೇ ಸ್ಥಾನಕ್ಕಾಗಿ ಸೆಣಸಾಡಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಕಳೆದ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಸೋಲಿಸಿದ ನಂತರ, ಪ್ರಸಕ್ರ ಆವೃತ್ತಿಯಲ್ಲಿ ತಮ್ಮ ಐದನೇ ಸತತ ಪಂದ್ಯವನ್ನು ಗೆದ್ದರು ಮತ್ತು ಐಪಿಎಲ್ 2024ರ ಪ್ಲೇಆಫ್ ರೇಸ್ ನಾಟಕೀಯ ತಿರುವು ಪಡೆದುಕೊಂಡಿತು.

IPL 2024 RCB Out of Playoffs Race Despite win Against CSK How Can Qualify

ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡದ ಆ ಗೆಲುವು ಅಗ್ರ 4ರ ಸ್ಥಾನ ಪಡೆಯಲು ಪ್ರಮುಖ ರೇಸ್‌ನಲ್ಲಿ ಉಳಿಯಿತು. ಈ ಮೂಲಕ ಆರ್‌ಸಿಬಿ ಈವರೆಗೆ ಆಡಿದ 13 ಪಂದ್ಯಗಳಿಂದ 12 ಅಂಕಗಳನ್ನು ಮತ್ತು +0.387ರ ನೆಟ್ ರನ್ ರೇಟ್ ಅನ್ನು ಹೊಂದಿದೆ.

ಆರ್‌ಸಿಬಿ vs ಸಿಎಸ್‌ಕೆ ತಂಡಕ್ಕೆ 'ಮಾಡು ಇಲ್ಲವೇ ಮಡಿ' ಪಂದ್ಯ

ಮೂರು ಬಾರಿಯ ರನ್ನರ್-ಅಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮುಂದಿನ ಪಂದ್ಯವು ನಾಕೌಟ್ ಪಂದ್ಯವಾಗಿರಬಹುದು. ಇಲ್ಲಿನ ವಿಜೇತ ತಂಡವು ಐಪಿಎಲ್ 2024ರ ಪ್ಲೇಆಫ್‌ಗೆ ಮುನ್ನಡೆಯುತ್ತಾರೆ ಮತ್ತು ಸೋತ ತಂಡವು ಟೂರ್ನಿಯಿಂದ ಹೊರಹಾಕಲ್ಪಡುತ್ತದೆ.

ಆಡಿದ 13 ಪಂದ್ಯಗಳಲ್ಲಿ ಏಳು ಗೆಲುವು ಮತ್ತು ಏಳು ಸೋಲುಗಳೊಂದಿಗೆ, ಚೆನ್ನೈ ಸೂಪರ್ ಕಿಂಗ್ಸ್ ಪ್ರಸ್ತುತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು ಅವರ ನೆಟ್ ರನ್ ರೇಟ್ ಪ್ರಸ್ತುತ +0.528 ಆಗಿದೆ. ಈಗಾಗಲೇ ಸನ್ ರೈಸರ್ಸ್ ಹೈದರಾಬಾದ್ ತಂಡ 15 ಅಂಕಗಳೊಂದಿಗೆ ಪ್ಲೇಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

IPL 2024 RCB Out of Playoffs Race Despite win Against CSK How Can Qualify

ಐಪಿಎಲ್ 2024ರ ಪ್ಲೇಆಫ್‌ಗೆ ಆರ್‌ಸಿಬಿ ಅರ್ಹತೆ ಪಡೆಯುತ್ತದೆಯೇ?

ಆರ್‌ಸಿಬಿಗೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಿಎಸ್‌ಕೆ ವಿರುದ್ಧ ನಿರ್ಣಾಯಕ ಗೆಲುವು ಮಾತ್ರವಲ್ಲದೆ, ಇನ್ನೂ ಕೆಲವು ಕೆಲಸಗಳು ಬೇಕಾಗುತ್ತದೆ. ಪಂದ್ಯ ಗೆದ್ದರೆ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಸಿಎಸ್‌ಕೆ ತಂಡಕ್ಕೆ ಸಮನಾಗಿರುತ್ತದೆ ಹೊರತು, ಅಂಕಪಟ್ಟಿಯಲ್ಲಿ ಹಿಂದಿಕ್ಕುವುದಿಲ್ಲ.

ಏಕೆಂದರೆ, ಆರ್‌ಸಿಬಿ ತಂಡಕ್ಕಿಂತ ಸಿಎಸ್‌ಕೆ ನೆಟ್ ರನ್ ರೇಟ್ +0.528 ರಲ್ಲಿ ಉತ್ತಮವಾಗಿದೆ. ಆರ್‌ಸಿಬಿ ತಂಡ +0.387ರ ನೆಟ್ ರನ್ ರೇಟ್ ಹೊಂದಿದೆ. ಹೀಗಾಗಿ, ಸಿಎಸ್‌ಕೆ ವಿರುದ್ಧ ಗೆಲ್ಲುವುದು ಮಾತ್ರವಲ್ಲದೆ, ನೆಟ್ ರನ್ ರೇಟ್ ಅನ್ನು ಉತ್ತಮಗೊಳಿಸಬೇಕಾಗುತ್ತದೆ.

IPL 2024 RCB Out of Playoffs Race Despite win Against CSK How Can Qualify

ಆರ್‌ಸಿಬಿ ತಂಡಕ್ಕೆ ಈ ಸಮೀಕರಣವು ಸಾಕಷ್ಟು ಸರಳವಾಗಿರುತ್ತದೆ. ಮೊದಲು ಬ್ಯಾಟ್ ಮಾಡಿ 200 ರನ್‌ಗಳ ಗುರಿ ನೀಡಿದರೆ, 18 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳ ಅಂತರದಿಂದ ಗೆಲ್ಲಬೇಕಾಗುತ್ತದೆ.

ರೋಚಕ ಪಂದ್ಯದಲ್ಲಿ ಚೇಸ್ ಮಾಡಲು ನಿರ್ಧರಿಸಿದರೆ, ನೆಟ್ ರನ್ ರೇಟ್‌ನಲ್ಲಿ ಸಿಎಸ್‌ಕೆ ಹಿಂದಿಕ್ಕಲು ಮತ್ತು ಪ್ಲೇಆಫ್‌ಗೆ ಅರ್ಹತೆ ಪಡೆಯಲು ಆರ್‌ಸಿಬಿ ತಂಡ 18.1 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಬೇಕಾಗುತ್ತದೆ.

ಮಳೆಯಿಂದ ಪಂದ್ಯ ರದ್ದಾದರೆ ಮುಂದೇನು?

ಒಂದು ವೇಳೆ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ನಿರ್ಣಾಯಕ ಪಂದ್ಯ ಮಳೆಯಿಂದ ರದ್ದಾದರೆ, ಸಿಎಸ್‌ಕೆ 4ನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಗಮನಾರ್ಹವಾಗಿ, ಶನಿವಾರ ಬೆಂಗಳೂರಿನಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ.

Story first published: Saturday, May 18, 2024, 15:49 [IST]
Other articles published on May 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+